ಮೈಸೂರು: ಚುನಾವಣೆಯಲ್ಲಿ ಜಾತಿಯೇ ಪ್ರಧಾನ. ಉಳಿದೆಲ್ಲವೂ ಗೌಣ ಎಂಬ ಮಾತಿದೆ. ಆದರೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ (Mysuru Lok Sabha) ಸರ್ವ ಜಾತಿಗೂ ಸಮ ಪಾಲಿದೆ! ಅಂದರೆ ಮತದಾರರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಜಾತಿಯವರನ್ನು ಗೆಲ್ಲಿಸಿದ್ದಾರೆ. ಎಲ್ಲಾ ಜಾತಿ ಅವರನ್ನು ಸೋಲಿಸಿದ್ದಾರೆ.
1998, 2004 ರಲ್ಲಿ ಕುರುಬ ಜನಾಂಗದ ಸಿ.ಹೆಚ್.ವಿಜಯಶಂಕರ್, 2009 ರಲ್ಲಿ ಕುರುಬ ಜನಾಂಗದ ಹೆಚ್.ವಿಶ್ವನಾಥ್ ಆಯ್ಕೆಯಾಗಿದ್ದರು. 1977ರ ನಂತರ ಒಕ್ಕಲಿಗರು, 1980ರ ನಂತರ ವೀರಶೈವ-ಲಿಂಗಾಯಿತರು ಈ ಕ್ಷೇತ್ರದಲ್ಲಿ ಆಯ್ಕೆಯಾಗಲು ಸಾಧ್ಯವಾಗಿರಲಿಲ್ಲ. ಆದರೆ 2014 ರಲ್ಲಿ ಒಕ್ಕಲಿಗ ಜನಾಂಗದ ಪ್ರತಾಪ್ ಸಿಂಹ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದರು. ಈ ಜನಾಂಗಗಳಿಗೆ ಸೇರಿದ ಕೆ.ಪಿ.ಶಾಂತಮೂರ್ತಿ, ಡಿ.ಮಾದೇಗೌಡ, ಪ. ಮಲ್ಲೇಶ್, ಜಿ.ಟಿ.ದೇವೇಗೌಡ, ಬಿ.ಎಸ್.ಮರಿಲಿಂಗಯ್ಯ. ಎ.ಎಸ್.ಗುರುಸ್ವಾಮಿ, ಬಿ.ಎ.ಜೀವಿಜಯ, ನ್ಯಾ. ಚಂದ್ರಶೇಖರಯ್ಯ ಸ್ಪರ್ಧಿಸಿ, ಸೋತಿದ್ದಾರೆ. ಬಿಜೆಪಿಯಿಂದ ತೋಂಟದಾರ್ಯ ಸ್ಪರ್ಧಿಸಿ, ಸೋತಿದ್ದಾರೆ. ಕಾಂಗ್ರೆಸ್‌ನಿಂದ ನಾಯಕ ಜನಾಂಗದ ಎಸ್.ಚಿಕ್ಕಮಾದು. ಅರಸು ಜನಾಂಗದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಕುರುಬ ಜನಾಂಗದ ವಿಶ್ವನಾಥ್, ವಿಜಯಶಂಕರ್ ಕೂಡ ಸೋತಿದ್ದಾರೆ.
ಬಿಜೆಪಿಯು ಕುರುಬ ಜನಾಂಗದ ಸಿ.ಹೆಚ್.ವಿಜಯಶಂಕರ್ ಅವರನ್ನು ಅಭ್ಯರ್ಥಿಯಾಗಿಸಿ, ಹೊಸ ಪ್ರಯೋಗ ಮಾಡಿ. ಆಯೋಧ್ಯೆಯ ರಾಮ ಮಂದಿರದ ಹಿನ್ನೆಲೆಯಲ್ಲಿ ದೇಶಾದ್ಯಂತ ಇದ್ದ ಬಿಜೆಪಿ ಅಲೆಯಲ್ಲಿ ಎರಡು ಬಾರಿ. 2019 ರಲ್ಲಿ ನರೇಂದ್ರ ಮೋದಿ ಅಲೆ ಹಾಗೂ ಜೆಡಿಎಸ್ ಪರೋಕ್ಷ ಬೆಂಬಲದಿಂದ ಗೆದ್ದಿದೆ. ಆದರೆ ಜನತಾದಳದ ಪರವಾಗಿ 1996, 2004 ರಲ್ಲಿ ಅಲೆ ಇದ್ದರೂ ಮೈಸೂರಿನಲ್ಲಿ ಜನತಾ ಪರಿವಾರ ಗೆಲ್ಲಲಾಗಿಲ್ಲ. ಸಿದ್ದರಾಮಯ್ಯ, ವಿ.ಶ್ರೀನಿವಾಸಪ್ರಸಾದ್, ರಾಜಶೇಖರಮೂರ್ತಿ ಅವರಂಥ ಘಟಾನುಘಟಿ ನಾಯಕರು ಇದ್ದಾಗಲೂ ಜನತಾ ಪರಿವಾರ ಗೆಲ್ಲಲಾಗಿಲ್ಲ. 2019 ರಲ್ಲಿ ಗೆಲುವಿಗಾಗಿ ಬಿಜೆಪಿಯ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್-ಜೆಡಿಸ್ ಮೈತ್ರಿಕೂಟ ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್ ನಡುವೆ ನೇರ ಹೋರಾಟ ನಡೆಯಿತು. ಪ್ರತಾಪ್ ಸಿಂಹ ಪುನಾರಾಯ್ಕೆಯಾದರು. ಇದನ್ನೂ ಓದಿ: ಮಂತ್ರಿಯೇ ಆಗಲಿಲ್ಲ ರಾಜ – ಒಡೆಯರ್ ಕನಸು ಅವರ ಜೊತೆಯೆ ಮಣ್ಣಾಯಿತು