ನಾನು ಈಗ ಮಧುಮಗ ಇದ್ದಂತೆ, ಕಾರ್ಯಕರ್ತರು ನನ್ನ ಪೋಷಕರು: ಬಿಎನ್ ಚಂದ್ರಪ್ಪ

Public TV
1 Min Read
BN Chandrappa Chitradurga

ಚಿತ್ರದುರ್ಗ: ನಾನು ಈಗ ಮಧುಮಗ ಇದ್ದಂತೆ. ಕಾರ್ಯಕರ್ತರು ನನ್ನ ಪೋಷಕರು. ಕಾರ್ಯಕರ್ತರೇ ಪೋಷಕರಂತೆ ನಿಂತು ಚುನಾವಣೆ ಮಾಡಲಿದ್ದಾರೆ. ಚಿತ್ರದುರ್ಗ (Chitradurga) ಕ್ಷೇತ್ರದಲ್ಲಿ ಮತ್ತೆ ಗೆಲ್ಲುವ ವಿಶ್ವಾಸವಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ (BN Chandrappa) ಹೇಳಿದ್ದಾರೆ.

ಟಿಕೆಟ್ ಘೋಷಣೆ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ (Congress) ಕಚೇರಿಗೆ ಭೇಟಿ ನೀಡಿ ಅವರು ಮಾತನಾಡಿದರು. ಟಿಕೆಟ್ ವಂಚಿತರಿಂದ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಕೈ’ ಟಿಕೆಟ್ ವಂಚಿತರು ಸಹ ನಮ್ಮಷ್ಟೇ ಸಮಬಲರು. ಕಾಂಗ್ರೆಸ್ ಪಕ್ಷ ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಲಿದೆ. ಟಿಕೆಟ್ ವಂಚಿತರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: ಯುವಕರು ಏನಾದ್ರೂ ಮೋದಿ ಮೋದಿ ಅಂದ್ರೆ ಕಪಾಳಕ್ಕೆ ಹೊಡಿಯಬೇಕು: ಶಿವರಾಜ್‌ ತಂಗಡಗಿ

ನಕಲಿ ಜಾತಿಪ್ರಮಾಣ ಆರೋಪದ ಕೇಸ್ ವಿಚಾರವಾಗಿ ಮಾತನಾಡಿದ ಅವರು, 10 ವರ್ಷಗಳಲ್ಲಿ ಕೆಲವರು ನನ್ನ ಜಾತಿ ಬಗ್ಗೆ ಅಪಪ್ರಚಾರ ಮಾಡಿದರು. ಅಪಪ್ರಚಾರ ಮಾಡಿದ ಇಬ್ಬರ ಮೇಲೆ ಮಾತ್ರ ಕೇಸ್ ಮಾಡಿದ್ದೇನೆ. ಬೆಂಗಳೂರಿನ ಹಲಸೂರು ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. 10 ವರ್ಷದಿಂದ ಮನನೊಂದ ಕಾರಣ ಕೇಸ್ ದಾಖಲಿಸಿದ್ದೇನೆ. ನನ್ನ ಜೀವನದಲ್ಲೇ ಮೊದಲ ಕೇಸ್ ಅದು ಎಂದು ಹೇಳಿದರು. ಇದನ್ನೂ ಓದಿ: ನೀವು ಸ್ವರ್ಗಕ್ಕೆ ಹೋಗಬೇಕು ಅಂತ ಆಸೆ ಇದ್ರೆ ಮಂಜುನಾಥ್‌ಗೆ ಮತ ನೀಡಿ: ಮುನಿರತ್ನ

Share This Article