ಮೈಸೂರು: ಲೋಕಸಭೆಗೆ (Lok Sabha Election 2024) 14ನೇ ಸಾರ್ವತ್ರಿಕ ಚುನಾವಣೆ 2004 ರಲ್ಲಿ ನಡೆಯಿತು. ಮೈಸೂರು (Mysuru) ಹಾಗೂ ಚಾಮರಾಜನಗರ (Chamarajanagara) ಎರಡೂ ಕಡೆಯೂ ಕಾಂಗ್ರೆಸ್ ಅಭ್ಯರ್ಥಿಗಳು ಸೋತರು. ಮೈಸೂರಿನಲ್ಲಿ ಹಾಲಿ ಸಂಸದರಾಗಿದ್ದ ಕಾಂಗ್ರೆಸ್‌ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಸೋತಿದ್ದಲ್ಲದೆ ಮೂರನೇ ಸ್ಥಾನಕ್ಕೆ ಕುಸಿದರು.

ಮೈಸೂರಿನಲ್ಲಿ (Mysuru Lok Sabha) ಜನತಾ ಪರಿವಾರ ಈವರೆಗೆ ಗೆದ್ದಿಲ್ಲ. 1996 ರಂತೆ ಈ ಚುನಾವಣೆಯಲ್ಲಿಯೂ ಆ ಪಕ್ಷದ ಅಭ್ಯರ್ಥಿ ಎ.ಎಸ್.ಗುರುಸ್ವಾಮಿ ಪ್ರಬಲ ಪೈಪೋಟಿ ನೀಡಿದರೂ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಸೋತ ಒಡೆಯರ್!
ಮೈಸೂರು ಸಾಮಾನ್ಯ ಕ್ಷೇತ್ರದಲ್ಲಿ 9,57,267 ಮಂದಿ ಮತ ಚಲಾಯಿಸಿದ್ದರು. ಬಿಜೆಪಿಯ ಸಿ.ಹೆಚ್.ವಿಜಯಶಂಕರ್ 3,16,442 ಮತಗಳನ್ನು ಪಡೆದು ಗೆದ್ದರು. ಜೆಡಿಎಸ್‌ನ ಎ.ಎಸ್.ಗುರುಸ್ವಾಮಿ- 3,06,292, ಕಾಂಗ್ರೆಸ್‌ನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್- 2,99,227 ಮತಗಳನ್ನು ಪಡೆದರು.


