ಸಕ್ಸಸ್‌ಗಾಗಿ ದಿಟ್ಟ ನಿರ್ಧಾರ ಕೈಗೊಂಡ ಶ್ರೀಲೀಲಾ

Public TV
1 Min Read
sreeleela 2

ನ್ನಡತಿ, ತೆಲುಗಿನ ಬಹಿಬೇಡಿಕೆಯ ನಟಿ ಶ್ರೀಲೀಲಾ (Sreeleela) ಇದೀಗ ಕೆರಿಯರ್ ಸಕ್ಸಸ್‌ಗಾಗಿ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಕಳೆದ ವರ್ಷ ಶ್ರೀಲೀಲಾ ಭರ್ತಿ ಅರ್ಧ ಡಜನ್ ತೆಲುಗು ಸಿನಿಮಾ ಮಾಡಿದ್ದಾರೆ. ಆದರೆ ಯಾವುದೂ ಹಿಟ್ ಆಗಲಿಲ್ಲ ಅನ್ನೋದೇ ದುರಂತ. ಅದಕ್ಕೀಗ ಶ್ರೀಲೀಲಾ ನಯಾ ಸಂಕಲ್ಪ ಮಾಡಿದ್ದಾರೆ.

SREELEELA 1 3ತೆಲುಗು ಇಂಡಸ್ಟ್ರಿಯಲ್ಲಿ ಸಮಕಾಲಿನ ನಟಿಯರಿಗೆ ಠಕ್ಕರ್ ಕೊಟ್ಟು ಜಾಗ ಮಾಡ್ಕೊಂಡಿರುವವರು ಶ್ರೀಲೀಲಾ. ವರ್ಷವೊಂದಕ್ಕೆ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದರು. ಬಗೆ ಬಗೆಯ ಪಾತ್ರ, ಸ್ಟಾರ್ ನಟರ ಚಿತ್ರ. ಎಲ್ಲಾ ಭಾಗ್ಯ ಶ್ರೀಲೀಲಾಗೆ ಒದಗಿ ಬಂತು. ಆದರೆ ಅದ್ಯಾವ ಚಿತ್ರಗಳೂ ಆರಕ್ಕೇರಲಿಲ್ಲ. ಬ್ಲಾಕ್‌ಬಸ್ಟರ್ ಎಂದು ಕರೆಸಿಕೊಳ್ಳಲಿಲ್ಲ. ಅದಕ್ಕೀಗ ಮುಂದಿನ ದಿನಗಳಲ್ಲಿ ಶ್ರೀಲೀಲಾ ಬಂದಿರುವ ಎಲ್ಲಾ ಪ್ರಾಜೆಕ್ಟ್ ಒಪ್ಪಿಕೊಳ್ಳದಿರುವ ತೀರ್ಮಾನಕ್ಕೆ ಬಂದಿದ್ದಾರೆ.

sreeleela 1ಕಳೆದ ವರ್ಷ 6 ಸಿನಿಮಾಗಳಲ್ಲಿ ನಟಿಸಿದ್ದರು. ಯಾವುದು ಹೇಳಿಕೊಳ್ಳುವಂತೆ ಹಿಟ್ ಆಗ್ಲಿಲ್ಲ. ಆಫರ್‌ಗಳೇನೂ ಬರುತ್ತಿದೆ. ಆದರೆ ಸೂಕ್ತ ಸಿಗುತ್ತಿಲ್ಲ. ಹೀಗಾಗಿ ಕಾದು ನೋಡ್ತಿದ್ದಾರೆ ಶ್ರೀಲೀಲಾ. ಕ್ವಾಂಟಿಟಿ ಬಿಟ್ಟು ಕ್ವಾಲಿಟಿ ಕಡೆ ಗಮನ ಕೊಡ್ತಿದ್ದಾರಂತೆ. ಹೀಗಾಗಿ ಹಿಂದೆ ಒಪ್ಪಿಕೊಂಡ ಪ್ರಾಜೆಕ್ಟ್ ಕಡೆ ಗಮನ ಕೊಡ್ತಿದ್ದಾರೆ. ಪವನ್ ಕಲ್ಯಾಣ್ (Pawan Kalyan) ಜೊತೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಈ ಚಿತ್ರದ ನಂತರ ‘ಕಿಸ್’ ಬೆಡಗಿಯ ಅದೃಷ್ಟ ಬದಲಾಗುತ್ತಾ? ಕಾಯಬೇಕಿದೆ.

SREELEELA 1 2

ಈ ಚಿತ್ರದ ರಿಲೀಸ್ ಆದ್ಮೇಲೆಯೇ ಮುಂದಿನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡೋದು ಶ್ರೀಲೀಲಾ ಪ್ಲ್ಯಾನ್ ಅನ್ನೋದು ಟಾಲಿವುಡ್ ಗಲ್ಲಿಯಿಂದ ಬಂದ ಸಮಾಚಾರ. ಇದನ್ನೂ ಓದಿ:‘ಮ್ಯಾಕ್ಸ್’ ಸಿನಿಮಾ ಮೇ ತಿಂಗಳಲ್ಲಿ ರಿಲೀಸ್ ಎಂದ ಸುದೀಪ್

ಅಂದಹಾಗೆ, ಕನ್ನಡದ ಕಿಸ್, ಭರಾಟೆ, ಬೈಟು ಲವ್ ಚಿತ್ರಗಳಲ್ಲಿ ನಟಿಸಿದ ಮೇಲೆ ತೆಲುಗಿನ ‘ಪೆಳ್ಳಿ ಸಂದಡಿ’ ಚಿತ್ರದ ಮೂಲಕ ಟಾಲಿವುಡ್‌ಗೆ ನಟಿ ಲಗ್ಗೆ ಇಟ್ಟರು.

Share This Article