ದೇಶದ್ರೋಹಿಗಳಿಗೆ ಪಾಸ್ ಕೊಟ್ಟವರಿಗೆ ಟಿಕೆಟ್ ಕೊಟ್ಟರೆ ಹೇಗೆ: ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಟಾಂಗ್

Public TV
2 Min Read

ಕಲಬುರಗಿ: ದೇಶದ್ರೋಹಿಗಳಿಗೆ ಪಾಸ್ ಕೊಟ್ಟವರಿಗೆ ಟಿಕೆಟ್ ಕೊಟ್ಟರೆ ಹೇಗೆ ಎಂದು ಸಂಸದ ಪ್ರತಾಪ್ ಸಿಂಹಗೆ (Pratap Simha) ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಟಾಂಗ್ ಕೊಟ್ಟರು.

ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಈ ಬಾರಿ ಪ್ರತಾಪ್ ಸಿಂಹಗೆ ಕೈತಪ್ಪಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ಬಿಜೆಪಿ ಟಿಕೆಟ್ ಕಟ್ ಮಾಡುವುದಕ್ಕೆ ನನಗೆ ಏನು ಸಂಬಂಧ. ಅದು ಮೈಸೂರು, ಅವರಿಗೆ ಟಿಕೆಟ್ ಕೊಡ್ತಾರಾ, ಬಿಡ್ತಾರಾ ಎಂಬುದನ್ನು ನಾನು ಹೇಗೆ ಹೇಳಲಿ. ದೇಶದ್ರೋಹಿಗಳಿಗೆ ಪಾಸ್ ಕೊಟ್ಟವರಿಗೆ ಟಿಕೆಟ್ ಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜ- ಪ್ರಜೆ ನಡುವೆ ವ್ಯತ್ಯಾಸ ತೆಗೆದು ಪ್ರಜೆಗಳ ಜೊತೆ ಇರಲು ಬಂದ್ರೆ ಸ್ವಾಗತ: ಪ್ರತಾಪ್‌ ಸಿಂಹ‌

YADUVEER PRATAP SIMHA

ಪಾಸ್ ಯಾರು ಕೊಟ್ಟರು ಅಂದ್ರೆ ತಾಯಿ ಚಾಮುಂಡಿ ಕೇಳಿ ಅಂತಾರೆ. ಅದೇ ರೀತಿ ಬಿಜೆಪಿ ಟಿಕೆಟ್ ಸಹ ಚಾಮುಂಡಿ ತಾಯಿಗೆ ಕೇಳಲಿ ಅಂತಾ ಬಿಜೆಪಿಯವರು ಹೇಳುತ್ತಿದ್ದಾರೆ ಎಂದರು. ಅಲ್ಲದೇ, ಸಿದ್ದರಾಮಯ್ಯ ಕೈ ಬಲ ಪಡಿಸಲು ಟಿಕೆಟ್ ಕಟ್ ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾರು ಅವರ ಟಿಕೆಟ್ ಕಟ್ ಮಾಡಿಸುತ್ತಿದ್ದಾರೆ ಅವರೇ ಹೇಳಲಿ. ಬಿಜೆಪಿಯಲ್ಲಿ ಮಿಲಾಪಿ ಕುಸ್ತಿ ಅಂತಾ ಹೇಳುತ್ತಿದ್ದಾರೆ. ಇಂತಹ ಪ್ರಗತಿಪರ ಯುವಕನ ಹೋರಾಟ ಯಾರು ನಿಲ್ಲಿಸುತ್ತಿದ್ದಾರೆ ಅವರೇ ಹೇಳಲಿ ಎಂದು ತಿರುಗೇಟು ನೀಡಿದರು.

ಸಂವಿಧಾನ ತಿದ್ದುಪಡಿ ಮಾಡ್ತೀವಿ ಎಂದು ಅನಂತಕುಮಾರ್ ಹೆಗಡೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅನಂತ್ ಕುಮಾರ್ ಹೆಗಡೆಗೆ ತಲೆಕೆಟ್ಟಿದೆ. ಮಾನಸಿಕ ಅಸಮತೋಲನ ಕಳೆದುಕೊಂಡಿದ್ದಾನೆ. ಈ ಬಾರಿಯಾದ್ರು ಬಿಜೆಪಿಯವರು ಅವರ ವಿರುದ್ಧ ಮಾತನಾಡಿದ್ದಾರೆ. ಚುನಾವಣೆ ಅಧಿಕಾರಿಯನ್ನು ಬದಲಾವಣೆ ಮಾಡಿದ್ದಾರೆ. ಎಲ್ಲವನ್ನು ಕಂಟ್ರೋಲ್‌ಗೆ ತಗೊಂಡು ರಾಷ್ಟ್ರವನ್ನು ಮುಗಿಸಲು ನೋಡ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೈಸೂರಲ್ಲಿ ರಾಜಕಾರಣ ಮಾಡೋದು ಕಷ್ಟ, ನಿಮ್ಮ ಹೃದಯದಲ್ಲಿ ನನಗೆ ಸ್ಥಾನ ಕೊಟ್ಟಿದ್ದೀರಿ: ಪ್ರತಾಪ್‌ ಸಿಂಹ ಭಾವುಕ

 

ಕಲಬುರಗಿಗೆ ಚಕ್ರವರ್ತಿ ಸೂಲಿಬೆಲೆಗೆ ಪ್ರವೇಶ ನಿರ್ಬಂಧ ಸಂಬಂಧ ಮಾತನಾಡಿ, ಆತ ಒಬ್ಬ ಬಾಡಿಗೆ ಭಾಷಣಕಾರ. ಆತನ ಬಗ್ಗೆ ಮಾತನಾಡುವುದರಿಂದ ನನ್ನದು ಹಾಗೂ ನಿಮ್ಮದು ಸಮಯ ವ್ಯರ್ಥ. ಅವನಿಗೆ ಒಂದು ಗ್ರಾಮ ಪಂಚಾಯತ್ ಚುನಾವಣೆಗೆ ನಿಂತು ಗೆಲ್ಲುವ ಶಕ್ತಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Share This Article