ಮೈಸೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ (Pratap Simha) ಅವರು ಫೇಸ್‌ಬುಕ್‌ನಲ್ಲಿ ಲೈವ್‌ನಲ್ಲಿ ಹಲವು ವಿಚಾರಗಳನ್ನು ತಿಳಿಸಿ ಭಾವುಕರಾಗಿದ್ದಾರೆ.
ಪ್ರತಾಪ್ ಸಿಂಹ ಹೇಳಿದ್ದೇನು?
ಮೈಸೂರಲ್ಲಿ (Mysuru) ರಾಜಕಾರಣ ಮಾಡುವುದು ತುಂಬಾ ಕಷ್ಟ. ರಾಜರ ಊರು ಅಂದಮೇಲೆ ಚಾಡಿಕೋರರು, ಹೊಗಳುಭಟ್ಟರು ಎಲ್ಲರೂ ಇರುತ್ತಾರೆ. ಸಿದ್ದಾಂತ ಬೇರೂರುವುದು ಬಹಳ ಕಷ್ಟ. 1989ರಿಂದ ಮೈಸೂರಿನಲ್ಲಿ ಸತತವಾಗಿ ಎರಡನೇ ಸಲ ಯಾರನ್ನೂ ಗೆಲ್ಲಿಸಿಲ್ಲ. ಜನ ನನ್ನನ್ನು ಗೆಲ್ಲಿಸಿದ್ದಾರೆ. ಜನರಿಗೆ ಅವರ ಮನೆ ಬಾಗಿಲು ಕಾಯುವವರು ಬೇಕು. ಜನರು ಹೋಗಿ ಬಾಗಿಲು ಕಾಯುವರು ಅವರಿಗೆ ಬೇಡ. ಮೈಸೂರಿನಲ್ಲಿ ಎರಡು ಬಾರಿ ರಾಜವಂಶಸ್ಥರನ್ನು ಸೋಲಿಸಿದ್ದಾರೆ. ಆದರೆ 40 ವರ್ಷಗಳಲ್ಲಿ ನಾನೊಬ್ಬನನ್ನು ಮಾತ್ರ ಸತತ ಎರಡು ಬಾರಿ ಗೆಲ್ಲಿಸಿದ್ದಾರೆ.
Advertisement
ಟಿವಿಗಳಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಸಿಗುತ್ತೋ ಇಲ್ವೋ ಅಂತ ಬರುತ್ತಿದೆ. ನನ್ನ ಟಿಕೆಟ್ ಬಗ್ಗೆ ಚಾಮುಂಡೇಶ್ವರಿ ನಿರ್ಧಾರ ಮಾಡುತ್ತಾಳೆ. ಆ ತಾಯಿಗೆ ಬಿಟ್ಟಿದ್ದೇನೆ. ಟಿಕೆಟ್ ನನಗೆ ಕೊಟ್ಟರೆ ನಾನು 3 ಲಕ್ಷ ಅಂತರದಿಂದ ಗೆಲ್ಲುತ್ತೇನೆ. ಕಾರ್ಯಕರ್ತರು ನನ್ನ ಪರ ನಿಂತಿದ್ದಾರೆ. ಈಶ್ವರಪ್ಪ ಅಭಿಪ್ರಾಯ ಸಂಗ್ರಹಕ್ಕೆ ಬಂದಾಗ ನನ್ನ ಹೆಸರನ್ನೇ ಕಾರ್ಯಕರ್ತರು ಸೂಚಿಸಿದ್ದರು.
Advertisement
Advertisement
ನಾಳೆ ಬೆಳಗ್ಗೆ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ಬೇರೆ ಯಾವ ಕ್ಷೇತ್ರದಲ್ಲೂ ಸಂಸದರಿಗೆ ಟಿಕೆಟ್ ಕೊಡಿ ಎಂದು ಕಾರ್ಯಕರ್ತರು ಹೇಳಿಲ್ಲ. ನನ್ನ ಕ್ಷೇತ್ರದ ಕಾರ್ಯಕರ್ತರು ಹೇಳಿದ್ದಾರೆ. ನನಗೆ ಸಿಕ್ಕಿದ ಪ್ರೀತಿ ವಿಶ್ವಾಸ ಎಷ್ಟು ಜನ ಸಂಸದರಿಗೆ ಸಿಕ್ಕಿದೆ? ಎಷ್ಟೋ ಸಂಸದರಿಗೆ ಅವರ ಕ್ಷೇತ್ರದಲ್ಲೇ ಪ್ರೀತಿ ಸಿಕ್ಕಿಲ್ಲ. ನನಗೆ ಕ್ಷೇತ್ರ ಮೀರಿ ಪ್ರೀತಿ ಸಿಕ್ಕಿದೆ. ಇದನ್ನೂ ಓದಿ: ನಾನೇ ಕರ್ನಾಟಕದ ಮುಂದಿನ ಸಿಎಂ – ಬಾಂಬ್ ಸಿಡಿಸಿದ ಯತ್ನಾಳ್
Advertisement
ನನ್ನ ಜೀವನದಲ್ಲಿ ವಿಜಯ ಸಂಕೇಶ್ವರ್ ಅವರ ಪಾತ್ರ ದೊಡ್ಡದಿದೆ. ನಾನು ಎಲ್ಲರಿಗೂ ಸಲ್ಲುವ ಸಂಸದನಾಗಿ ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿ ದ್ವೇಷ ಅಸೂಯೇ ಸಹಜ. ಈ ಹತ್ತು ವರ್ಷದಲ್ಲಿ ಮೋದಿಯವರ ಹೆಸರಿಗೆ ಕಳಂಕ ತಂದಿಲ್ಲ. ಇದೇ ಕೊನೇ ಚುನಾವಣೆ ಅಂತ ಹೇಳಿದ್ದೆ. ನನ್ನಂಥ ಇನ್ಬೊಬ್ಬ ಯುವಕನನ್ನು ಬೆಳೆಸಿ ಅಂತ ಹಾಗೆ ಹೇಳಿದ್ದೆ. ಹಿನ್ನೆಲೆ ಇಲ್ಲದ ಯುವಕನಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದರೆ ನಿಮ್ಮ ಮನೆ ಕೆಲಸದವನಹಾಗೆ ಇರುತ್ತಾನೆ.
ಕೆಟ್ಟತನಕ್ಕೆ ಶಕ್ತಿ ಇದೆ ಅಂದ ಮೇಲೆ ಒಳ್ಳೆಯವರ ಪ್ರೀತಿ ಆಶೀರ್ವಾದಕ್ಕೂ ಶಕ್ತಿ ಇದೆ. ಪ್ರತಾಪ್ ಸಿಂಹ ಕಾರ್ಯಕರ್ತರನ್ನ, ಬೆಳೆಸಲ್ಲ ಅಂತಾರೆ. ನಾನು ಬೆಳೆಸೋದಲ್ಲ ನಿಮ್ಮಕೆಲಸದಿಂದ ನೀವು ಬೆಳೆಯಬೇಕು. ಇವಾಗ ಸೋತುಕೊಂಡು ಮನೆಯಲ್ಲಿ ಕುಳಿತಿದ್ದಿರಲ್ಲ ಯಾಕೆ ನಿಮ್ಮ ಉದಾಸೀನ, ನಡತೆಯಿಂದ ಸೋತಿದ್ದೀರಾ? ಇಷ್ಟೊಂದು ಜನ ನನ್ನ ಬೆಂಬಲಕ್ಕೆ ಏಕೆ ನಿಲ್ಲುತ್ತಿದ್ದಾರೆ ಹೇಳಿ. ನಾನು ಮಾಡಿರುವ ಕೆಲಸದಿಂದ. ಬೆಂಬಲಕ್ಕೆ ನಿಂತಿದ್ದಾರೆ.
ನೀವು ಕೆಲಸ ಮಾಡಿದ್ರೆ ನಿಮ್ಮನ್ನ ಗೆಲ್ಲಿಸುತ್ತಾರೆ. ನನ್ನ ಕೆಲಸ ನೋಡಿ ಜನ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲಕ್ಕೆ ನಿಂತಿದ್ದಾರೆ ಸಾಕು. ನಿಮ್ಮ ಹೃದಯದಲ್ಲಿ ನನಗೆ ಸ್ಥಾನ ಕೊಟ್ಟಿದ್ದೀರಿ. 28 ವಿಧಾನ ಸಭಾ ಕ್ಷೇತ್ರದಲ್ಲಿ ಯಾವ ಎಂಪಿ ಪರವಾಗಿ ಜನ ನಿಂತಿಲ್ಲ. ನನ್ನ ಪರವಾಗಿ ನಿಂತಿದ್ದಾರೆ. ಇದನ್ನೂ ಓದಿ: ಭಾರೀ ಹೈಡ್ರಾಮಾ ಬಳಿಕ ಟ್ರಯಲ್ಸ್‌ನಲ್ಲಿ ವಿನೇಶ್‌ಗೆ ವಿಜಯ – ಪ್ಯಾರಿಸ್ ಒಲಿಂಪಿಕ್ಸ್ ಕನಸು ಜೀವಂತ
ದೇಶಕ್ಕೆ ಮೋದಿ (PM Narendra Modi) ಹೇಗೆ ಬೇಕೋ ಹಾಗೇ ಆಯಾ ಕ್ಷೇತ್ರಕ್ಕೆ ಒಬ್ಬೊಬ್ಬ ಛೋಟಾ ಮೋದಿ ಬೇಕು ಅಂತಾ ಬಯಸುತ್ತಾರೆ. ದೇವರು ಆಶೀರ್ವಾದ ಇದ್ದರೆ ಮೂರನೇ ಬಾರಿಗೆ ನಿಮ್ಮ ಸೇವೆ ಮಾಡುತ್ತೇನೆ. ಕೊಡಗಿಗೆ ಎರಡು ಅವಧಿಯಲ್ಲಿ ಸ್ವಲ್ಪ ಕಡಿಮೆ ಕೆಲಸ ಮಾಡಿದ್ದೆ. ಕೊಡಗಿನ ಋಣ ತೀರಿಸಬೇಕಿದೆ. ಆ ಕೆಲಸವನ್ನು ಮೂರನೇ ಬಾರಿಯ ಅವಧಿಯಲ್ಲಿ ಮಾಡ್ತಿನಿ. ಮೈಸೂರಿಗೆ ಅತಿ ಹೆಚ್ಚಿನ ಕೆಲಸ ಮಾಡಿದ್ದೇನೆ.
ಇಲ್ಲಿ ಯಾರು ಯಾರೋ ಸೋತರೆ ಅದಕ್ಕೆ ಪ್ರತಾಪ್ ಸಿಂಹ ಯಾಕೆ ಕಾರಣ ಆಗುತ್ತಾನೆ? ನಿಮ್ಮ ನಿಮ್ಮ ಸೋಲಿಗೆ ನೀವೇ ಕಾರಣರು. ಅದಕ್ಕೆ ಪ್ರತಾಪ್ ಸಿಂಹ ನನ್ನು ಯಾಕೆ ಹೊಣೆ ಮಾಡ್ತಿರಾ? ಟಿಕೆಟ್ ಸಿಗುತ್ತೋ ಬಿಡುತ್ತೋ ಆ ವಿಚಾರ ಬಿಡಿ. ಆದರೆ ನೀವು ನನಗೆ ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದಿರಲ್ಲ ಅಷ್ಟು ಸಾಕು.