ಸಂದೇಶ್‍ಖಾಲಿ ಹಿಂಸಾಚಾರ ಪ್ರಕರಣ – ಸಿಬಿಐ ತನಿಖೆಗೆ ಆದೇಶಿಸಿದ ಕೋಲ್ಕತ್ತಾ ಹೈಕೋರ್ಟ್

Public TV
1 Min Read
calcutta high court

ಕೋಲ್ಕತ್ತಾ: ಪ್ರಕರಣದ ಸಿಬಿಐ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದೆ. ತೃಣಮೂಲ ಕಾಂಗ್ರೆಸ್‍ನ ಮಾಜಿ ನಾಯಕ ಮತ್ತು ಸಂದೇಶ್‍ಖಾಲಿಯ ಪ್ರಬಲ ನಾಯಕ ಶೇಖ್ ಷಹಜಹಾನ್‍ನನ್ನು ಸಿಬಿಐ ವಶಕ್ಕೆ ಒಪ್ಪಿಸುವಂತೆ ಹೈಕೋರ್ಟ್ ಪಶ್ಚಿಮ ಬಂಗಾಳ ಪೊಲೀಸರಿಗೆ ಆದೇಶಿಸಿದೆ.

ತೃಣಮೂಲ ಕಾಂಗ್ರೆಸ್‍ನ ಮಾಜಿ ನಾಯಕ ಶೇಖ್ ಷಹಜಹಾನ್ ಮನೆ ಮೇಲೆ ದಾಳಿ ನಡೆಸಲು ಜಾರಿ ನಿರ್ದೇಶನಾಲಯ (ಇಡಿ) ತಂಡ ಹೊರಟಿದ್ದ ವೇಳೆ ಅಧಿಕಾರಿಗಳನ್ನು ತಡೆದು ಕಿಡಿಗೇಡಿಗಳ ಗುಂಪು ದಾಳಿ ನಡೆಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ ಆರೋಪಿ ಷಹಜಹಾನ್‍ನನ್ನು ಪೊಲೀಸರು ಸಿಬಿಐಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಮಮತಾ ಸವಾಲು ಸ್ವೀಕಾರ – ಕೋಲ್ಕತ್ತಾ ಹೈಕೋರ್ಟ್ ಜಡ್ಜ್ ರಾಜೀನಾಮೆ, ಮಾ.7 ರಂದು ಬಿಜೆಪಿ ಸೇರ್ಪಡೆ

Sheikh Shahjahan

ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಅವರಿದ್ದ ಏಕಸದಸ್ಯ ಪೀಠವು ನಜತ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಸಂಖ್ಯೆ 8 ಮತ್ತು 9 ಮತ್ತು ಬಂಗಾವ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಸಂಖ್ಯೆ 18ನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಆದೇಶಿಸಿದೆ. ಈ ಹಿಂದೆ, ಸಂದೇಶಖಾಲಿ ಘಟನೆಯ ತನಿಖೆಗಾಗಿ ಹೈಕೋರ್ಟ್ ವಿಶೇಷ ತನಿಖಾ ತಂಡವನ್ನು (ಎಸ್‍ಐಟಿ) ರಚಿಸಿತ್ತು. ಇದೀಗ ವಿಭಾಗೀಯ ಪೀಠವು ಎಸ್‍ಐಟಿಯನ್ನು ರದ್ದುಗೊಳಿಸಿ ಸಿಬಿಐ ತನಿಖೆಗೆ ಆದೇಶಿಸಿದೆ.

ಪಡಿತರ ಹಗರಣ ಪ್ರಕರಣದಲ್ಲಿ ಷಹಜಹಾನ್ ಮನೆ ಮೇಲೆ ಜ.5 ರಂದು ಇಡಿ ಅಧಿಕಾರಿಗಳು ದಾಳಿಗೆ ತೆರಳುತ್ತಿದ್ದಾಗ, ಆರೋಪಿಯ ಬೆಂಬಲಿಗರು ದಾಳಿ ಮಾಡಿದ್ದರು. ದಾಳಿಯಲ್ಲಿ ಮೂವರು ಇಡಿ ಅಧಿಕಾರಿಗಳು ಗಾಯಗೊಂಡಿದ್ದರು. ಬಳಿಕ ಷಹಜಹಾನ್ ತಪ್ಪಿಸಿಕೊಂಡಿದ್ದ, 55 ದಿನಗಳ ಬಳಿಕ ಆತನ ಬಂಧನವಾಗಿತ್ತು.

ಜನವರಿ 5ರ ಘಟನೆಯು ನಿವಾಸಿಗಳಿಂದ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಯಿತು. ಅಲ್ಲದೇ ಈ ಪ್ರತಿಭಟನೆಯಲ್ಲಿ ಷಹಜಹಾನ್ ಮತ್ತು ಆತನ ಸಹಾಯಕರ ಮೇಲೆ ಸ್ಥಳೀಯರ ಮಹಿಳೆಯರು ಭೂಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಇದನ್ನೂ ಓದಿ: ಲಂಚ ಪ್ರಕರಣದಲ್ಲಿ ಕಾನೂನು ಕ್ರಮದಿಂದ ಜನಪ್ರತಿನಿಧಿಗಳಿಗೆ ವಿನಾಯಿತಿ ಇಲ್ಲ – ಸುಪ್ರೀಂ ಕೋರ್ಟ್

Share This Article