ನವದೆಹಲಿ: ಸಂಸತ್ತಿನ ಸದಸ್ಯರು (MPs) ಮತ್ತು ವಿಧಾನಸಭೆಗಳ ಸದಸ್ಯರು (MLAs) ಲಂಚ ಪಡೆದ ಆರೋಪ ಬಂದಾಗ ಸಂವಿಧಾನದ 105 ಮತ್ತು 194ನೇ ವಿಧಿಯ ಅಡಿಯಲ್ಲಿ ಕಾನೂನು ಕ್ರಮದಿಂದ ಯಾವುದೇ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ (Supreme Court) ಏಳು ಮಂದಿ ನ್ಯಾಯಧೀಶರ ಸಾಂವಿಧಾನಿಕ ಪೀಠ ತೀರ್ಪು ಪ್ರಕಟಿಸಿದೆ.
ಸಂವಿಧಾನದ (Constitution) ಪರಿಚ್ಛೇದ 105 (2) ಮತ್ತು 194 (2)ರ ಅಡಿಯಲ್ಲಿ ಶಾಸಕರ ಕಾನೂನು ವಿನಾಯಿತಿಯು ಲಂಚ ಪಡೆದ ಆರೋಪಗಳಿಂದ ಅವರನ್ನು ರಕ್ಷಿಸುತ್ತದೆಯೇ ಎಂದು ಪ್ರಶ್ನಿಸಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಸೊಸೆ ಸೀತಾ ಸೊರೆನ್ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸಾಂವಿಧಾನಿಕ ಪೀಠವು ತೀರ್ಪು ನೀಡಿದೆ.
ಸೋಮವಾರ (ಮಾ.4) ಈ ಬಗ್ಗೆ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (DY Chandrachud), ನ್ಯಾ. ಎ.ಎಸ್ ಬೋಪಣ್ಣ, ಎಂ.ಎಂ ಸುಂದ್ರೇಶ್, ಪಿ.ಎಸ್ ನರಸಿಂಹ, ಜೆ.ಬಿ ಪರ್ದಿವಾಲಾ, ಪಿ.ವಿ ಸಂಜಯ್ ಕುಮಾರ್ ಮತ್ತು ಮನೋಜ್ ಮಿಶ್ರಾ ಅವರಿದ್ದ ಸಾಂವಿಧಾನಿಕ ಪೀಠವು, ಸಂಸತ್ತಿನಲ್ಲಿ ಅಥವಾ ಶಾಸಕಾಂಗ ಸಭೆಯಲ್ಲಿ ಹೇಳುವ ಅಥವಾ ಮಾಡಿದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ 105 (2) ಮತ್ತು 194 (2) ವಿಧಿಗಳ ಅಡಿಯಲ್ಲಿ ಶಾಸಕರಿಗೆ ನೀಡಲಾದ ವಿನಾಯಿತಿಯು ಶಾಸಕಾಂಗ ಸದನದ ಸಾಮೂಹಿಕ ಕಾರ್ಯನಿರ್ವಹಣೆಗೆ ಸಂಬಂಧಿಸಿದೆ ಎಂದು ಹೇಳಿದೆ. ಇದನ್ನೂ ಓದಿ: ಮಮತಾ ಸವಾಲು ಸ್ವೀಕಾರ – ಸಕ್ರೀಯ ರಾಜಕಾರಣಕ್ಕೆ ಇಳಿದ ಕೋಲ್ಕತ್ತಾ ಹೈಕೋರ್ಟ್ ಜಡ್ಜ್ ಗಂಗೋಪಾಧ್ಯಾಯ
ಮುಕ್ತ ಚರ್ಚೆಗಳಿಗೆ ಅನುಕೂಲವಾಗುವ ವಾತಾವರಣವನ್ನು ಉಳಿಸಿಕೊಳ್ಳಲು ಜನಪ್ರತಿನಿಧಿಗಳಿಗೆ ಮಾತನಾಡಲು ಅವಕಾಶ ನೀಡಿದೆ. ಆದರೆ, ಸದಸ್ಯರಿಗೆ ಭಾಷಣ ಮಾಡಲು ಲಂಚ ನೀಡಿದರೆ, ಅಂತಹ ವಾತಾವರಣ ಹಾಳಾಗುತ್ತದೆ. ಆದ್ದರಿಂದ, ನ್ಯಾಯಾಲಯವು ಸಂವಿಧಾನದ ವಿಧಿ 105 (2) ಅಥವಾ 194ರ ಅಡಿಯಲ್ಲಿ ವಿನಾಯಿತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು. ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆಯಿಂದಲೇ ಸದ್ದು ಮಾಡ್ತಿದ್ದ ಮೂವರು ಸಂಸದರಿಗೆ ಬಿಜೆಪಿ ಟಿಕೆಟ್ ನಿರಾಕರಣೆ
ಲಂಚದ ಕಾರಣದಿಂದ ಒಂದು ನಿರ್ದಿಷ್ಟ ರೀತಿಯಲ್ಲಿ ಮತ ಚಲಾಯಿಸಲು ಸದಸ್ಯನನ್ನು ಪ್ರೇರೇಪಿಸಿದಾಗ ಮತ್ತು ಅದು ಭಾರತೀಯ ಸಾಂವಿಧಾನಿಕ ಪ್ರಜಾಪ್ರಭುತ್ವದ ಅಡಿಪಾಯವನ್ನು ನಾಶಪಡಿಸಿದಂತಾಗುತ್ತದೆ. ಲಂಚ ಪಡೆಯುವ ಕಾರ್ಯವು ಶಾಸಕರನ್ನು ಕ್ರಿಮಿನಲ್ ಆರೋಪಗಳಿಗೆ ಒಡ್ಡಬಹುದು ಮತ್ತು ಲಂಚ ಸ್ವೀಕರಿಸುವ ಶಾಸಕರು ಲಂಚಕ್ಕೆ ಪ್ರತಿಕ್ರಿಯೆಯಾಗಿ ಅಧಿಕಾರ ದುರ್ಬಳಕೆ ಮಾಡಬಹುದು. ಲಂಚವು ಸಾರ್ವಜನಿಕ ಜೀವನದಲ್ಲಿ ನಿಷ್ಠೆಯನ್ನು ಕಳೆದುಕೊಳ್ಳುತ್ತದೆ ಎಂದು ಕೋರ್ಟ್ ಹೇಳಿದೆ.
ಇದೇ ವೇಳೆ ಪಿ.ವಿ.ನರಸಿಂಹರಾವ್ ಅವರ ಹಳೆ ಪ್ರಕರಣವನ್ನು ಉಲ್ಲೇಖಿಸಿದ ಕೋರ್ಟ್ 1998ರ ಜನಪ್ರತಿನಿಧಿಗಳ ವಿನಾಯಿತಿಯ ತೀರ್ಪನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದನ್ನೂ ಓದಿ: ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ