ರಾಮೇಶ್ವರಂ ಕೆಫೆ ಬ್ಲಾಸ್ಟ್; ಆರೋಪಿಯನ್ನು ಯಾವ ಕಾರಣಕ್ಕೂ ಬಿಡೋದಿಲ್ಲ: ಜಿ.ಪರಮೇಶ್ವರ್

Public TV
2 Min Read
G Parameshwar

ಬೆಂಗಳೂರು: ರಾಮೇಶ್ವರಂ ಕೆಫೆ (Rameshwaram Cafe) ಬಾಂಬ್ ಬ್ಲಾಸ್ಟ್ (Bomb Blast) ಪ್ರಕರಣದ ಕುರಿತು ಗೃಹಸಚಿವ ಡಾ.ಜಿ.ಪರಮೇಶ್ವರ್ (G Parameshwar) ಪ್ರತಿಕ್ರಿಯೆ ನೀಡಿದ್ದು, ಆರೋಪಿಯನ್ನು ಯಾವ ಕಾರಣಕ್ಕೂ ಬಿಡೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬ್ಲಾಸ್ಟ್ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘಟನೆ ಕುರಿತು ಬಹಳ ಸೀರಿಯಸ್ ಆಗಿ, ಆಳವಾಗಿ ತನಿಖೆ ನಡೆಯುತ್ತಿದೆ. ಸಾಕಷ್ಟು ಕುರುಹುಗಳು ಸಿಕ್ಕಿವೆ. ಸಿಸಿಟಿವಿಯಲ್ಲಿ ಕೆಲವು ಸಾಕ್ಷ್ಯಗಳು ಸಿಕ್ಕಿವೆ. ಸುಮಾರು 28 ಬಸ್‌ಗಳು ಒಡಾಡಿವೆ. ಆತ ಬಸ್‌ನಲ್ಲಿ (Bus) ಬಂದಿರುವ ಸಾಧ್ಯತೆಗಳಿವೆ. ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇದೆ. ಆತನನ್ನು ಯಾವ ಕಾರಣಕ್ಕೂ ಬಿಡೋದಿಲ್ಲ ಎಂದರು. ಇದನ್ನೂ ಓದಿ: ಮಂಗಳೂರಿನ ಕುಕ್ಕರ್ ಬ್ಲಾಸ್ಟ್‌ಗು ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಸಾಮ್ಯತೆ ಇಲ್ಲ: ಸಿಎಂ

ಎಷ್ಟೇ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದರೂ ಬಿಡೋದಿಲ್ಲ. ಈ ಘಟನೆ ವೈಯಕ್ತಿಕ ಆಗಿದೆಯೋ, ಏನು ಎಂದು ತನಿಖೆ ನಡೆಯುತ್ತಿದೆ. ಹೋಟೆಲ್ ಅವರು 3-4 ಕಡೆಗಳಲ್ಲಿ ಯಶಸ್ವಿಯಾಗಿರುವುದರಿಂದ ಮಾಡಿರಬಹುದೇನೋ. ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಬ್ಲಾಸ್ಟ್‌ ಪ್ರಕರಣ- ನಾಲ್ವರ ವಶಕ್ಕೆ ಪಡೆದು ವಿಚಾರಣೆ

the rameshwaram cafe explosion 1

ಯಾವ ಸಂಘಟನೆ ಮಾಡಿದೆ ಅಂತಾ ಈಗಲೇ ಹೇಳಲು ಆಗೋದಿಲ್ಲ. ಸ್ಥಳಕ್ಕೆ ಹೋದಾಗ ಅಲ್ಲಿ ಕೆಲವರು ಹೋಟೆಲ್‌ನವರು ಸಕ್ಸಸ್ ಆಗಿದ್ದಕ್ಕೆ ಹೊಟ್ಟೆ ಉರಿಯಿಂದ ಮಾಡಿರಬಹುದು ಎಂದು ಹೇಳಿದರು. ಅದೆಲ್ಲದರ ಬಗ್ಗೆಯೂ ತನಿಖೆ ಆಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಹಿಂದಿದ್ಯಾ ಐಸಿಸ್ ಕೈವಾಡ?

ವಿಪಕ್ಷಗಳಿಂದ ರಾಜೀನಾಮೆಗೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರು ರಾಜೀನಾಮೆ ಕೇಳುತ್ತಾ ಇರುತ್ತಾರೆ. 2022ರಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ ಇವರು ರಾಜೀನಾಮೆ ಕೊಟ್ಟಿದ್ರಾ? ರಾಜೀನಾಮೆ ಕೇಳೋದು ಇವರಿಗೆ ಅಭ್ಯಾಸ ಆಗಿಬಿಟ್ಟಿದೆ. ಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಿ ಎನ್ನುತ್ತಾರೆ. ನಮಗೆ ಜವಾಬ್ದಾರಿ ಇದೆ. ಶುಕ್ರವಾರ ಕೂಡ ಅಪೀಲ್ ಮಾಡಿದ್ದೇವೆ. ಇಂತಹ ಸಂದರ್ಭದಲ್ಲಿ ಸಹಕಾರ ನೀಡಿ ಅಂಥಾ ಕೇಳಿದ್ದೇವೆ ಎಂದರು. ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ – ಹೆಚ್‌ಎಎಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

ಇದು ರಾಜ್ಯದ, & ಬೆಂಗಳೂರಿನ ಸೇಫ್ಟಿಯ ಪ್ರತಿಷ್ಠೆ. ಬೆಂಗಳೂರು ಶುಡ್ ಬಿ ಸೇಫ್ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಮಾಡಿದೇವೆ. ಆ ಭಾಗದಲ್ಲಿರುವ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಲಾಗಿದೆ. ನಮ್ಮಲ್ಲಿ ಸಮರ್ಥ ಪೊಲೀಸರು ಇದ್ದಾರೆ. ಎಫ್‌ಎಸ್‌ಎಲ್ ಅವರು ಎಲ್ಲರೂ ಮುಂದೆ ಇದ್ದಾರೆ. ದೊಡ್ಡ ತಂಡದಿಂದ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಟೈಮರ್ ಇಟ್ಟಿದ್ದು, ಅದಕ್ಕೆ ಎಷ್ಟು ಕೆಪಾಸಿಟಿ ಇತ್ತು ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಇದೆಲ್ಲವೂ ತನಿಖೆಗೆ ಸಹಕಾರ ಆಗಲಿದೆ. ಪಾಕಿಸ್ತಾನ್ ಜಿಂದಾಬಾದ್ ಕೂಗಿದ ಆರೋಪಕ್ಕೂ ಇದಕ್ಕೂ ಸಾಮ್ಯತೆ ಇದೆಯೋ ಇಲ್ವೋ, ಅದೆಲ್ಲಾ ಊಹೆ ಮಾಡಿ ಹೇಳೋದಿಲ್ಲ. ಈ ಘಟನೆ ಮಾಡಿದವರನ್ನ ಹಿಡಿತೇವೆ. ಅಷ್ಟು ಮಾತ್ರ ಹೇಳಬಹುದು. ಇವತ್ತು ಸಿಎಂ ಜೊತೆ ಮೀಟಿಂಗ್ ಮಾಡಿ ಚರ್ಚಿಸುತ್ತೇವೆ. ಅಲ್ಲಿ ಇದರ ಬಗ್ಗೆ ಕೆಲವು ಸೂಚನೆಗಳನ್ನು ಕೊಡುತ್ತೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: Public TV Exclusive: ಬೆಂಗ್ಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಶಂಕಿತನ ಫೋಟೋ ‌ಲಭ್ಯ

Share This Article