ನಿರ್ದೇಶಕ ಬಾಲಾ ನನಗೆ ಹೊಡೆದರು: ಖ್ಯಾತ ನಟಿಯ ಮಮಿತಾ ಆರೋಪ

Public TV
1 Min Read
Mamitha Biju 1

ಮಿಳು ಸಿನಿಮಾ ರಂಗದ ಖ್ಯಾತ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಾ (Bala) ಅವರು ತಮ್ಮ ಸಿನಿಮಾದ ನಟಿಯೊಬ್ಬರ ಮೇಲೆ ಕೈ ಮಾಡಿದ್ದಾರಂತೆ. ಈ ವಿಷಯವನ್ನು ಹೊಡೆತಕ್ಕೆ ಒಳಗಾದ ನಟಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆ ಕಾರಣಕ್ಕಾಗಿಯೇ ತಾವು ಆ ಸಿನಿಮಾದಿಂದ ಹೊರಬರಬೇಕಾಯಿತು ಎಂದಿದ್ದಾರೆ.

Mamitha Biju 2

ಪಿತಾಮಗನ್, ಸೇತು, ನಾನ್ ಕಡವುಲ್ ಸೇರಿದಂತೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು ಬಾಲಾ. ತಮ್ಮ ಸಿನಿಮಾದಿಂದಾಗಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯೂ ಆದವರು. ದೇಸಿ ಗುಣದ ಸಿನಿಮಾಗಳ ಜನಕ ಎಂದೆಲ್ಲ ಕರೆಯಿಸಿಕೊಂಡವರು. ಅಂಥ ನಿರ್ದೇಶಕರು ತಮ್ಮದೇ ಸಿನಿಮಾದ ನಟಿಯನ್ನು ಹೊಡೆದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Mamitha Biju 3

ಮಲಯಾಳಂ ಮೂಲದ ನಟಿ ಮಮತಾ ಬಿಜು (Mamitha Biju), ವಾನಂಗನ್ ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ಸಿನಿಮಾದಲ್ಲಿ ವಿಲ್ಲಡಿಚ್ಚಾಂಪಾಟನ್ ಕಲಾವಿದೆಯಂತೆ ವಾದ್ಯ ನುಡಿಸುತ್ತಾ ಡಾನ್ಸ್ ಮಾಡಬೇಕಿತ್ತಂತೆ. ನುರಿತ ಕಲಾವಿದರ ಜೊತೆ ಸಡನ್ನಾಗಿ ಬೆರೆಯೋದು ಕಷ್ಟವಾಯಿತು. ಹಾಗಾಗಿ ಮೂರು ಟೇಕ್ ತೆಗೆದುಕೊಂಡೆ. ಈ ಕಾರಣಕ್ಕಾಗಿ ನಿರ್ದೇಶಕರು ಹೊಡದೇ ಬಿಟ್ಟರು ಎಂದಿದ್ದಾರೆ ಮಮಿತಾ.

ಸೆಟ್ ನಲ್ಲಿ ನಾನು ಕೋಪಿಷ್ಠ. ಬೈದರೆ ಮನಸ್ಸಿಗೆ ತಗೋಬೇಡಿ ಎಂದು ಬಾಲಾ ಅವರು ಮೊದಲೇ ಹೇಳಿದ್ದರೂ, ಅವರು ಬೈದಾಗೊಮ್ಮೆ ಕಿರಿಕಿರಿ ಅನಿಸೋದು. ಆದರೆ, ಅವರು ನನಗೆ ಹೊಡೆದ ಮೇಲೆ ಕೆಲಸ ಮಾಡಲು ಮನಸ್ಸಾಗಲಿಲ್ಲ. ಹಾಗಾಗಿ ಸಿನಿಮಾದಿಂದ ಹೊರ ನಡೆದೆ ಎಂದಿದ್ದಾರೆ ಮಮಿತಾ.

Share This Article