ರಶ್ಮಿಕಾಗೆ ಠಕ್ಕರ್, ಗೋಲ್ಡನ್ ಚಾನ್ಸ್ ಬಾಚಿಕೊಂಡ ತೃಪ್ತಿ ದಿಮ್ರಿ

Public TV
1 Min Read
tripti dimri

ಬಾಲಿವುಡ್‌ನಲ್ಲಿ ಸದ್ಯ ತೃಪ್ತಿ ದಿಮ್ರಿ (Tripti Dimri) ಮೇನಿಯಾ ಶುರುವಾಗಿದೆ. ‘ಅನಿಮಲ್’ ಸಕ್ಸಸ್ ನಂತರ ತೃಪ್ತಿ ನಸೀಬು ಬದಲಾಗಿದೆ. ರಣ್‌ಬೀರ್ ಕಪೂರ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡ ಮೇಲೆ ತೃಪ್ತಿ ಇದೀಗ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ಖ್ಯಾತ ನಟಿ, ಗಾಯಕ ಸಾವು

tripti

‘ಅನಿಮಲ್’ಗೆ (Animal) ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ರು ಕೂಡ ಬೇಡಿಕೆ ಹೆಚ್ಚಾಗಿದ್ದು ತೃಪ್ತಿ ದಿಮ್ರಿಗೆ ಬಾಲಿವುಡ್‌ನಲ್ಲಿ ಮತ್ತು ಸೌತ್‌ನಲ್ಲಿ ನಾಯಕಿ ನಟಿಸಿಲು ಬಂಪರ್ ಆಫರ್‌ಗಳು ಅರಸಿ ಬರುತ್ತಿವೆ. ರಶ್ಮಿಕಾಗೆ ಠಕ್ಕರ್ ಕೊಟ್ಟು ಸೌತ್‌ನತ್ತ ತೃಪ್ತಿ ಮುಖ ಮಾಡಿದ್ದಾರೆ.

tripti dimri 1

ಅನಿಮಲ್, ‘ಭುಲ್ ಭುಲೈಯಾ’ ಮುಂದಿನ ಸೀಕ್ವೆಲ್ ತೃಪ್ತಿ ನಾಯಕಿಯಾಗಿದ್ದಾರೆ. ಇದರ ಜೊತೆ ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿ ನಟಿಸಲು ತೃಪ್ತಿಗೆ ಚಾನ್ಸ್ ಸಿಕ್ಕಿದೆ. ಸೌತ್‌ನ ಬಿಗ್ ಸ್ಟಾರ್‌ಗಳ ಜೊತೆ ತೆರೆಹಂಚಿಕೊಳ್ಳುವ ಬಂಪರ್ ಚಾನ್ಸ್ ನಟಿ ಬಾಚಿಕೊಂಡಿದ್ದಾರೆ.

triptii dimri 1 1

ಸೌತ್‌ನಲ್ಲಿಯೂ ಕೂಡ ರಶ್ಮಿಕಾ ಮಂದಣ್ಣ (Rashmika Mandanna) ಸಖತ್ ಡಿಮ್ಯಾಂಡ್ ಇತ್ತು. ತೃಪ್ತಿ ಈಗ ದಕ್ಷಿಣದತ್ತ ಮುಖ ಮಾಡಿರೋದ್ರಿಂದ ಎಲ್ಲೆಲ್ಲೂ ‘ಅನಿಮಲ್’ ಬೆಡಗಿಯ ಮೇನಿಯಾ ಹೆಚ್ಚಾಗಿದೆ. ಸೌತ್‌ ನಿರ್ಮಾಪಕರು ಕೂಡ ರಶ್ಮಿಕಾ ಬದಲು ತೃಪ್ತಿಗೆ ಮಣೆ ಹಾಕ್ತಿದ್ದಾರೆ.ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ಖ್ಯಾತ ನಟಿ, ಗಾಯಕ ಸಾವು

ಸೌತ್‌ನ ಯಾವ ಸಿನಿಮಾ ತೃಪ್ತಿ ಒಪ್ಪಿಕೊಂಡಿದ್ದಾರೆ. ಯಾವ ಸ್ಟಾರ್ ನಟರಿಗೆ ಹೀರೋಯಿನ್ ಆಗಿ ನಟಿಸ್ತಾರೆ ಎಂಬುದರ ಬಗ್ಗೆ ಸದ್ಯದಲ್ಲೇ ಮಾಹಿತಿ ಸಿಗಲಿದೆ.

Share This Article