ಬಟ್ಟೆ ಕ್ಲೀನ್ ಇಲ್ಲವೆಂದು ವ್ಯಕ್ತಿಯನ್ನು ತಡೆದ ಮೆಟ್ರೋ ಸಿಬ್ಬಂದಿ- ಜೊತೆಗೆ ಕರೆದೊಯ್ದ ಸಹ ಪ್ರಯಾಣಿಕರು

Public TV
1 Min Read
BMRCL

ಬೆಂಗಳೂರು: ಬಟ್ಟೆ ಸ್ವಚ್ಛವಾಗಿಲ್ಲ ಎಂದು ವ್ಯಕ್ತಿಯೊಬ್ಬರಿಗೆ ಮೆಟ್ರೋ (Namma Metro) ಸಿಬ್ಬಂದಿ ನಿಲ್ದಾಣದ ಒಳಗೆ ಬಿಡಲು ನಿರಾಕರಿಸಿದ ಘಟನೆ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ಬಿಎಂಆರ್‌ಸಿಎಲ್‌ (BMRCL) ಸಿಬ್ಬಂದಿಯ ಅತಿರೇಕದ ವರ್ತನೆಯ ವೀಡಿಯೋ ಪ್ರಯಾಣಿಕರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಬಳಿಕ ಸಹಪ್ರಯಾಣಿಕರು ಸಿಬ್ಬಂದಿ ಬಗ್ಗೆ ತಲೆಕೆಡಿಸಿಕೊಳ್ಳದೆ, ವ್ಯಕ್ತಿಯನ್ನು ಮೆಟ್ರೋದಲ್ಲಿ ಕರೆದೊಯ್ದಿದ್ದಾರೆ. ಅಲ್ಲದೇ ಮೆಟ್ರೋ ಸಿಬ್ಬಂದಿ ವಿರುದ್ಧ ಸಹಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳಿಗೆ ಮತ್ತೆ ಜಯ- ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡಲು ಹೈಕೋರ್ಟ್‌ ನಕಾರ

ಇದೀಗ ವೀಡಿಯೋವನ್ನು ಜನ ಬಿಎಂಆರ್‌ಸಿಎಲ್‌ ಟ್ಯಾಗ್ ಮಾಡಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಟಿಪ್ ಟಾಪ್ ಆಗಿ ರೆಡಿಯಾಗಿ ಬಂದರೆ ಮಾತ್ರ ಮೇಟ್ರೋದೊಳಗೆ ಎಂಟ್ರಿ, ಇಲ್ಲವಾದರೆ ಎಂಟ್ರಿ ಇಲ್ಲವೇ? ವಿಐಪಿಗಳಿಗೆ ಮಾತ್ರ ಮೆಟ್ರೋ ಸೌಲಭ್ಯವೇ ಎಂದು ಪ್ರಶ್ನಿಸಿದ್ದಾರೆ. ಅತಿರೇಕದ ವರ್ತನೆ ತೋರಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲೂ ಕಾಂಗ್ರೆಸ್‌ಗೆ ಶಾಕ್- ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆ

Share This Article