ಮೈತ್ರಿ ಟಿಕೆಟ್ ಸ್ಪರ್ಧೆ- ಭಾನುವಾರ ಬೆಂಗಳೂರು ನಿವಾಸದಲ್ಲಿ ಸುಮಲತಾ ಸಭೆ

Public TV
1 Min Read
Sumalatha Ambareesh

ಮಂಡ್ಯ: ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆ. ಈ ಮೈತ್ರಿ ಮಂಡ್ಯದಲ್ಲಿ ಸಾಕಷ್ಟು ಬಿಕ್ಕಟ್ಟನ್ನು ಸೃಷ್ಟಿ ಮಾಡಿದೆ. ಮೈತ್ರಿ ಟಿಕೆಟ್‌ಗಾಗಿ ಜೆಡಿಎಸ್ (JDS) ನಾಯಕರು ರಾಷ್ಟ್ರ ನಾಯಕರ ಜೊತೆ ಸಭೆಗಳ ಮೇಲೆ ಸಭೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಕಳೆದ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಜೆಡಿಎಸ್‌ಗೆ ಟಕ್ಕರ್ ನೀಡಿದ್ದ ಸುಮಲತಾ ಅಂಬರೀಶ್ (Sumalatha Ambareesh), ಈ ಬಾರಿಯ ತಮಗೆ ಮೈತ್ರಿ ಟಿಕೆಟ್ ನೀಡಬೇಕೆಂದು ತಾವೇನು ಕಡಿಮೆ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.

ಇವರಿಬ್ಬರ ಫೈಟ್‌ನಿಂದ ಬಿಜೆಪಿ ನಾಯಕರು ಯಾರಿಗೆ ಟಿಕೆಟ್ ನೀಡಬೇಕೆಂದು ಥಂಡಾ ಹೊಡೆಯುತ್ತಿದ್ದಾರೆ. ಮೈತ್ರಿ ಟಿಕೆಟ್ ನಮಗೆ ಖಚಿತ ಎಂದು ದಳಪತಿಗಳು ಆತ್ಮವಿಶ್ವಾಸದಲ್ಲಿ ಇದ್ದರೆ, ರೆಬಲ್ ಲೇಡಿ ಸಹ ಮಂಡ್ಯ ಟಿಕೆಟ್ ಅನ್ನು ಬಿಜೆಪಿ ಉಳಿಸಿಕೊಳ್ಳುತ್ತೆ ಎಂದು ಹೇಳುತ್ತಿದ್ದಾರೆ. ಶುಕ್ರವಾರವಷ್ಟೇ ಸುಮಲತಾ ಅಂಬರೀಶ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಭಾನುವಾರ ಬೆಂಗಳೂರಿನಲ್ಲಿ ತಮ್ಮ ಆಪ್ತರು ಹಾಗೂ ಮುಖಂಡರ ಸಭೆಯನ್ನು ಕರೆದಿದ್ದಾರೆ. ಇದನ್ನೂ ಓದಿ: ಸಿಎಂ ಬಂಗಲೆಗೆ ನವಕೋಟಿ ಸಿಂಗಾರ, ರೈತರ ಬರ ಪರಿಹಾರಕ್ಕೆ 2 ಸಾವಿರ: ಅಶೋಕ್ ಕಿಡಿ

ಈ ಸಭೆಯಲ್ಲಿ ಮೈತ್ರಿ ಟಿಕೆಟ್ ಅನ್ನು ಹೇಗೆ ಪಡೆಯಬೇಕು?, ಒಂದು ವೇಳೆ ಟಿಕೆಟ್ ಸಿಗದೇ ಇದ್ದರೆ ಏನು ಮಾಡಬೇಕೆಂದು ಚರ್ಚೆ ಮಾಡಲಾಗುತ್ತದೆ. ಈ ಸಭೆ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೂ ಸಹ ಗ್ರಾಸವಾಗಿದೆ. ಸುಮಲತಾ ಅಂಬರೀಶ್ ಮಂಡ್ಯದಿಂದ ಸ್ಪರ್ಧೆಯ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಈ ಹೊತ್ತಿನಲ್ಲಿಯೇ ಸುಮಲತಾ ಅವರ ಸಭೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಇದನ್ನೂ ಓದಿ: ಅಂತರ್ ಜಲ ಹೆಚ್ಚಿರುವ ಕಡೆ ಬೋರ್ ಕೊರೆಸುವ ಮೂಲಕ ನೀರಿನ ವ್ಯವಸ್ಥೆ: ಬಿಬಿಎಂಪಿ ಆಯುಕ್ತ

Share This Article