ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಂತರ್ಜಲ ಹೆಚ್ಚಿರುವ ಕಡೆ ಬೋರ್ ಕೊರೆಸುವ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
Advertisement
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು. ಆ ಬಳಿಕ ಎಚ್ಚೆತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೂಚನೆ ಮೇರೆಗೆ ಸಮನ್ವಯ ಸಮಿತಿ ರಚನೆ ಮಾಡಲಾಯಿತು. ಸಮಿತಿ ರಚನೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಬಿಎಂ ಆಯುಕ್ತರು, ಬಿಬಿಎಂಪಿ ಹಾಗೂ BWSSB ಸಹಯೋಗದಲ್ಲಿ ಕೆಲಸ ಮಾಡಲಿದೆ. ಬಿಬಿಎಂಪಿಯಿಂದ ನೀರಿನ ಸರಬರಾಜಿಗಾಗಿ 131 ಕೋಟಿ ಹಣ ಖರ್ಚು ಮಾಡಲಾಗುವುದು. ಆರ್ ಆರ್ ನಗರ, ಮಹದೇವಪುರದಲ್ಲಿ ಹೆಚ್ಚಿನ ಸಮಸ್ಯೆಯಾಗಿವೆ. ಆರ್ ಆರ್ ನಗರದ 25 ಕಡೆ ನೀರಿನ ಸಮಸ್ಯೆಯಾಗಿದೆ ಎಂದರು.
Advertisement
Advertisement
1477 ದಶಲಕ್ಷ ಲೀಟರ್ ನೀರು (Water Problem In Bengaluru) ಈಗ ಲಭ್ಯತೆಯಿದೆ. ಮಾರ್ಚ್ ಏಪ್ರಿಲ್ ಮೇ ತಿಂಗಳಲ್ಲಿ ನೀರನ್ನ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತೆ. ಹೀಗಾಗಿ ಅಂತರ್ಜಲ ಹೆಚ್ಚಿರುವ ಕಡೆ ಬೋರ್ ಕೊರೆಯಲು ನಿರ್ಧಾರ ಮಾಡಲಾಗಿದೆ. ಜಲಮಂಡಳಿ ಬೋರ್ ಕೊರೆಯುವ ಕೆಲಸ ಮಾಡಲಾಗುತ್ತೆ. ಬಿಬಿಎಂಪಿ ಇದಕ್ಕೆ ದುಡ್ಡನ್ನ ವ್ಯಯಿಸಲಿದೆ. ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೂ ನೀರು ಒದಗಿಸಲಾಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿದ ಗ್ರಾಮಸ್ಥ!
Advertisement
1450 ಎಂಎಲ್ ಡಿ ನೀರಿನ ಕ್ಯಾಪಸಿಟಿ ಇದೆ. ನೀರಿನ ಸಾಮರ್ಥ್ಯ ಸದ್ಯ ಇದೆ. 110 ಹಳ್ಳಿಗಳಿಗೆ ಏಪ್ರಿಲ್ ಕಡೆಯಲ್ಲಿ ಕಾವೇರಿ ನೀರು (Cauvery Water) ಕೊಡಲಾಗುತ್ತದೆ. ಬಿಬಿಎಂಪಿ ಕಡೆಯಿಂದ ಹಣ ಟ್ರಾನ್ಸ್ ಫರ್ ಆಗುತ್ತದೆ. ಒಟ್ಟು 58 ಕಡೆಗಳಲ್ಲಿ ಸಾಕಷ್ಟು ಸಮಸ್ಯೆ ಕಂಡು ಬಂದಿದೆ. ಆಡಳಿತಾಧಿಕಾರಿ ನೇತೃತ್ವದಲ್ಲಿ ಬೇಸಿಗೆಯಲ್ಲಿ ನೀರಿನ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದೇವೆ. ಎಸಿಎಸ್ ಹಲವು ನಿರ್ದೇಶನಗಳನ್ನು ನೀಡಿದ್ದಾರೆ. ಬಿಬಿಎಂಪಿ ಹಾಗೂ ಜಲಮಂಡಳಿ ಕಡೆಯಿಂದ ಹಲವು ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.
ಇದೇ ವೇಳೆ ಖಾಸಗಿ ಟ್ಯಾಂಕರ್ ಹಾವಳಿ ಕುರಿತು ಪ್ರತಿಕ್ರಿಯಿಸಿ ಅವರು, ಖಾಸಗಿ ಟ್ಯಾಂಕರ್ ದರ ನಿಗದಿಯಿಲ್ಲ. ಬಿಡಬ್ಲ್ಯೂಎಸ್‍ಎಸ್‍ಬಿ ಹಾಗೂ ಬಿಬಿಎಂಪಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತೆ ಎಂದು ತಿಳಿಸಿದರು.