‘ಹನುಮಾನ್’ ನಿರ್ಮಾಪಕರ ಜೊತೆ ಕಿಚ್ಚ ಸುದೀಪ್ ಸಿನಿಮಾ

Public TV
1 Min Read
sudeep 1

ಕಿಚ್ಚ ಸುದೀಪ್ ಸದ್ಯ ಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಆ ನಂತರ ಅವರು ಇನ್ನೂ ಎರಡು ಚಿತ್ರಗಳಿಗೆ ಸಹಿ ಕೂಡ ಮಾಡಿದ್ದಾರೆ. ಈ ನಡುವೆ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಹನುಮಾನ್ (Hanuman) ಚಿತ್ರ ಖ್ಯಾತಿಯ ನಿರಂಜನ್ ರೆಡ್ಡಿ (Niranjan Reddy) ಅವರ ಚಿತ್ರದಲ್ಲೂ ಸುದೀಪ್ ನಟಿಸಲಿದ್ದಾರಂತೆ.

Sudeep 5

ನಿರ್ಮಾಪಕ ನಿರಂಜನ್ ರೆಡ್ಡಿ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾವನ್ನು ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದು ಈ ಚಿತ್ರಕ್ಕೆ ಸುದೀಪ್ ನಾಯಕ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಆದರೆ, ಕಾಂಬಿನೇಷನ್  ಕಾರಣದಿಂದಾಗಿ ಕುತೂಹಲವನ್ನಂತೂ ಮೂಡಿಸಿದೆ.

sudeep

ಕ್ರಿಕೆಟ್, ಬಿಗ್ ಬಾಸ್ ನಡುವೆಯೂ ನಿರೀಕ್ಷಿತ ಮ್ಯಾಕ್ಸ್ (Max) ಸಿನಿಮಾದ ಚಿತ್ರೀಕರಣ ಮುಗಿಸುತ್ತಿದ್ದಾರೆ ಕಿಚ್ಚ ಸುದೀಪ್. ಸದ್ಯ ಈ ಸಿನಿಮಾದ ಕ್ಲೈಮ್ಯಾಕ್ಸ್ (Climax) ಶೂಟಿಂಗ್ ನಡೆದಿದ್ದು, ಈ ಭಾಗದ ಚಿತ್ರೀಕರಣದಲ್ಲಿ (Shooting) ಸುದೀಪ್ ಭಾಗಿಯಾಗಿದ್ದಾರೆ.  ಅಂದುಕೊಂಡ ತಿಂಗಳಲ್ಲೇ ಸಿನಿಮಾ ತೆರೆಗೆ ತರಬೇಕಾಗಿದ್ದರಿಂದ ಚಿತ್ರೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರಂತೆ.

sudeep 2

‘ಮ್ಯಾಕ್ಸ್’ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಮಾಡಿದ ಮೇಲೆ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಸಿಕ್ಕಿರಲಿಲ್ಲ. ಈ ಕುರಿತಂತೆ ಚಿತ್ರದ ಕೆಲಸ ಎಲ್ಲಿಯವರೆಗೂ ಬಂತು ಎಂದು ಸ್ವತಃ ಸುದೀಪ್ (Sudeep) ಅವರೇ ಮೊನ್ನೆ ಮಾಹಿತಿ ನೀಡಿದ್ದರು.

 

ಬಹುನಿರೀಕ್ಷಿತ ಮ್ಯಾಕ್ಸ್ ಬಗ್ಗೆ ಸುದೀಪ್ ಮಾಹಿತಿ ನೀಡುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದರು. ‘ಸಂಕ್ರಾಂತಿ’ ನಂತರ ಮ್ಯಾಕ್ಸ್ ಸಿನಿಮಾದ ಕ್ಲೈಮ್ಯಾಕ್ಸ್ ಶೂಟ್ ಪುನರಾರಂಭ ಮಾಡುತ್ತಿದ್ದೇವೆ. ಈಗಾಗಲೇ ಶೂಟ್ ಮಾಡಲಾದ ಭಾಗಕ್ಕೆ ಎಲ್ಲಾ ಹೀರೋಗಳು ಧ್ವನಿ ನೀಡಿದ್ದಾರೆ. ಚಿತ್ರದ ಉಳಿದ ಭಾಗಗಳ ಚಿತ್ರೀಕರಣ ಪ್ರಗತಿಯಲ್ಲಿದೆ ಎಂದು ಮೊನ್ನೆಯಷ್ಟೇ ಮಾಹಿತಿ ಹಂಚಿಕೊಂಡಿದ್ದರು.

Share This Article