ಸಮಂತಾ ಡಿವೋರ್ಸ್‌ಗೆ ಆಪ್ತ ಸ್ನೇಹಿತೆನೇ ಕಾರಣನಾ?

Public TV
2 Min Read
samantha

ಸೌತ್ ನಟಿ ಸಮಂತಾ (Samantha) ಅವರು ಡಿವೋರ್ಸ್ (Divorce) ಆದ್ಮೇಲೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸದಾ ಒಂದಲ್ಲಾ ಒಂದು ವಿಷ್ಯವಾಗಿ ಪುಷ್ಪ ನಟಿ ಸುದ್ದಿಯಲ್ಲಿದ್ದಾರೆ. ಈಗ ಸಮಂತಾ ಡಿವೋರ್ಸ್‌ಗೆ ಇವರೇ ಕಾರಣ ಅಂತ ಸ್ಯಾಮ್ ಬೆಸ್ಟ್ ಫ್ರೆಂಡ್ ಮೇಘನಾ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಹೀಗೊಂದು ಸುದ್ದಿ ಟಾಲಿವುಡ್‌ನಲ್ಲಿ ಭಾರೀ ಚರ್ಚೆಯಾಗುತ್ತಿದೆ.

samantha 1

ನನ್ನ ಎಲ್ಲಾ ಉತ್ತಮ ನಿರ್ಧಾರಗಳಿಗೆ ಹಿಂದೊಂದು ಮುಖವಿದೆ ಎಂದು ಕ್ಯಾಪ್ಷನ್ ನೀಡಿ, ಆಪ್ತ ಸ್ನೇಹಿತೆ ಮೇಘನಾ ಜೊತೆಯಿರುವ ಫೋಟೋವನ್ನು ಸಮಂತಾ ಶೇರ್ ಮಾಡಿದ್ದಾರೆ. ಈ ಪೋಸ್ಟ್ ಹಂಚಿಕೊಳ್ತಿದ್ದಂತೆ, ನಿಮ್ಮ ಡಿವೋರ್ಸ್‌ಗೆ ಮೇಘನಾನೇ ಕಾರಣನಾ? ಅಂತ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

ಅಷ್ಟಕ್ಕೂ ಮೇಘನಾ ಯಾರು? ಸಮಂತಾ ಅವರ ಆಪ್ತ ಸ್ನೇಹಿತೆ ಮೇಘನಾ ವಿನೋದ್ ಅವರು ಮಲೇಷ್ಯಾದಲ್ಲಿ ನೆಲೆಸಿದ್ದಾರೆ. ಸ್ಯಾಮ್- ಮೇಘನಾ ಹಲವು ವರ್ಷಗಳಿಂದ ಫ್ರೆಂಡ್ಸ್. ಸಮಂತಾ ನೋವು, ನಲಿವಿಗೆ ಮೇಘನಾ ಜೊತೆಯಾಗಿ ನಿಂತಿದ್ದಾರೆ.  ಸದ್ಯ ಸ್ಯಾಮ್‌ ಪೋಸ್ಟ್‌ಗೆ ನಿಮ್ಮಿಂದಲೇ ಸಮಂತಾಗೆ ಡಿವೋರ್ಸ್ ಆಯ್ತಾ? ಎಂದೆಲ್ಲಾ ನೆಟ್ಟಿಗರು ಕೇಳಿದ್ದಾರೆ. ಇದನ್ನೂ ಓದಿ:ಧನ್ಯವಾದ ತಿಳಿಸಿದ ನಟ ದರ್ಶನ್

samantha 1 2

ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ (Nagachaitanya) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಸಹವಾಸವೇ ಬೇಡ ಅಂತ ವೃತ್ತಿರಂಗದಲ್ಲಿ ಬ್ಯುಸಿಯಾದರು. ‘ಪುಷ್ಪ’ ಚಿತ್ರದಲ್ಲಿ ಸೊಂಟ ಬಳುಕಿಸಿದ ಮೇಲೆ ಸಮಂತಾ ಲಕ್ ಬದಲಾಯ್ತು.

samantha

ಆದರೆ ‘ಯಶೋದ’ ಮತ್ತು ‘ಖುಷಿ’ (Kushi) ಸಿನಿಮಾ ಆದ್ಮೇಲೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರಲಿಲ್ಲ. ಎರಡೂ ಹೀನಾಯವಾಗಿ ಸೋತ ಚಿತ್ರಗಳು. ಸೋಲಿನ ಹೊಡೆತಕ್ಕೆ ಅನಾರೋಗ್ಯದ ಆಘಾತ ಎರಡನ್ನೂ ಸಹಿಕೊಳ್ಳೋಕೆ ಸ್ಯಾಮ್‌ಗೆ 6 ತಿಂಗಳು ಹಿಡಿಯಿತು. ಕೆಲದಿನಗಳ ಹಿಂದೆ ನಟನೆಗೆ ಮರಳುವ ಸುದ್ದಿ ನೀಡಿದ್ದರು ಸಮಂತಾ. ಇದನ್ನೂ ಓದಿ:ರಾಕುಲ್ ಮದುವೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಶಿಲ್ಪಾ ಶೆಟ್ಟಿ ದಂಪತಿ

samantha 1 2

ಬಣ್ಣ ಹಚ್ಚದೆ 6 ತಿಂಗಳು ಸಮಂತಾ ವನವಾಸ ಮುಗಿಸಿದ್ದಾರೆ. ಅಭಿಮಾನಿಗಳ ಕಮ್‌ಬ್ಯಾಕ್ ಪ್ರಶ್ನೆಗೆ ನಟಿ ವೀಡಿಯೋ ಮೂಲಕ ಗುಡ್ ನ್ಯೂಸ್ ಕೊಟಿದ್ದರು. ಮತ್ತೆ ಶೀಘ್ರದಲ್ಲೇ ಬಣ್ಣ ಹಚ್ಚುವ ಸಂದೇಶ ನೀಡಿದ್ದರು. ವೆಬ್‌ಸಿರೀಸ್‌ಗಳಲ್ಲಿ ಬ್ಯುಸಿ ಇದ್ದ ಸ್ಯಾಮ್ ಟಾಲಿವುಡ್‌ನಲ್ಲಿ ಹಲವು ಆಫರ್‌ಗಳಿಂದ ದೂರ ಉಳಿದಿದ್ದರು. ಇದೀಗ ಬಹಳ ಗ್ಯಾಪ್ ಆದ್ಮೇಲೆ ಬರುತ್ತಿರುವ ಸಮಂತಾ ರೀ ಎಂಟ್ರಿ ಹೇಗಿರುತ್ತೆ ಅನ್ನುವ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ.

ಸದ್ಯ ಸಮಂತಾಗೆ ಟಾಲಿವುಡ್ ಮಾತ್ರವಲ್ಲ ಬಾಲಿವುಡ್‌ನಿಂದಲೂ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಹಾಗಾಗಿ ಸಮಂತಾ ಸಿನಿಮಾ ಮತ್ತು ಲುಕ್ ಹೇಗಿರಲಿದೆ ಎಂಬದನ್ನು ಕಾದುನೋಡಬೇಕಿದೆ.

Share This Article