ಮತ್ತೆ ಜೊತೆಯಾಗ್ತಿದ್ದಾರೆ ನಾಗಚೈತನ್ಯ, ಸಮಂತಾ- ಸಿನಿಮಾಗಾಗಿ ಅಲ್ಲ!

Public TV
1 Min Read
samantha nagachaitanya

ಮಂತಾ (Samantha) ಮತ್ತು ನಾಗಚೈತನ್ಯ (Nagachaitanya) ಮತ್ತೆ ಒಂದಾಗುತ್ತಾರಾ? ಹಳೆಯ ನೋವನ್ನು ಮರೆತು ಕ್ಯಾಮೆರಾ ಮುಂದೆ ನಿಲ್ಲುತ್ತಾರಾ? ಯಾರು ಇವರನ್ನು ಜಂಟಿ ಮಾಡೋರು? ನಿಜ ಜೀವನದಲ್ಲಿ ಇವರು ಕೈ ಜೋಡಿಸುತ್ತಾರಾ? ಗೊತ್ತಿಲ್ಲ. ಆದರೆ ಹೀಗೊಂದು ಸುದ್ದಿ ಮಾತ್ರ ಟಾಲಿವುಡ್ (Tollywood) ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿದೆ. ಏನಿದರ ಹಿಂದಿನ ಕಥನ? ಇಲ್ಲಿದೆ ಮಾಹಿತಿ.

samantha

ಸಮಂತಾ ಈಗಿನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಯೋಸಿಟಿಸ್ ಖಾಯಿಲೆ ಇನ್ನೂ ದೂರವಾಗಿಲ್ಲ. ಹಾಗಿದ್ದರೂ ಉತ್ತಮ ಆರೋಗ್ಯಕ್ಕಾಗಿ ಏನೇನು ಬೇಕು ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದಾರೆ. ಸಿನಿಮಾದಿಂದ ಸದ್ಯ ದೂರ ಇದ್ದಾರೆ. ಆದರೆ ಇವರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಇನ್ನೊಂದು ಸುದ್ದಿ ಟಾಲಿವುಡ್ ಅಂಗಳದಿಂದ ಬಂದಿದೆ. ಇಬ್ಬರೂ ಮತ್ತೆ ಬಣ್ಣದಲೋಕಕ್ಕಾಗಿ ಕೈ ಜೋಡಿಸಲಿದ್ದಾರೆ. ಹಾಗಂತ ಸುದ್ದಿ ಹಬ್ಬಿದೆ. ಇದನ್ನೂ ಓದಿ:ಅಯೋಧ್ಯೆಗೆ 2ನೇ ಬಾರಿ ಭೇಟಿ ಕೊಟ್ಟ ಬಿಗ್ ಬಿ

samantha

ಆದರೆ ಇದು ಸಿನಿಮಾ ಅಲ್ಲ ಬದಲಿಗೆ ವೆಬ್ ಸರಣಿ (Web Series) ಎನ್ನುವುದು ಕುತೂಹಲ ಮೂಡಿಸಿದೆ. ಆ ಪ್ರಾಜೆಕ್ಟ್ ಹೆಸರು ಧೂತ. ನಾಗಚೈತನ್ಯ ಹೀರೋ. ಮೊದಲ ಭಾಗ ಹಿಟ್ ಆಗಿದೆ. ಎರಡನೇ ಭಾಗದಲ್ಲಿ ಸಮಂತಾ ಕೂಡ ಇರಲಿದ್ದಾರೆ ಎಂಬುದು ಸದ್ಯದ ಟಾಕ್. ಹಳೇ ಪತ್ನಿ ಜೊತೆ ಹೊಸ ಸಂಬಂಧ ಬೆಸೆದುಕೊಳ್ಳುತ್ತಾರಾ ನಾಗಚೈತನ್ಯ.

‘ಧೂತ’ (Dhootha) ವೆಬ್ ಸರಣಿಗೆ ವಿಕ್ರಮ್ ಇದರ ನಿರ್ದೇಶಕರಾಗಿದ್ದರು. ಮೊದಲ ಭಾಗ ಜನರಿಂದ ಮೆಚ್ಚುಗೆ ಪಡೆದಿತ್ತು. ಹೀಗಾಗಿಯೇ 2ನೇ ಭಾಗಕ್ಕೆ ಪಕ್ಕಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ನಿರ್ದೇಶಕ ವಿಕ್ರಮ್. ಇದರಲ್ಲಿ ಸಮಂತಾ ನಟಿಸಬೇಕು ಎನ್ನುವುದು ಇವರ ಉದ್ದೇಶ. ಆದರೆ ಅದು ಈಡೇರುತ್ತದಾ? ಕಾರಣ ಒಡೆದು ಹೋದ ಹೃದಯ ಅಷ್ಟು ಬೇಗ ಜಂಟಿ ಆಗಲ್ಲ. ಅದು ಎಲ್ಲರಿಗೂ ಗೊತ್ತು. ಹೀಗಿದ್ದರೂ ಡೈರೆಕ್ಟರ್ ವಿಕ್ರಮ್ (Vikram) ಸಮಂತಾ ಹಿಂದೆ ಬಿದ್ದಿದ್ದಾರೆ. ನೋಡ ನೋಡುತ್ತಲೇ ಇಬ್ಬರನ್ನೂ ಒಂದು ಮಾಡಲು ಸಜ್ಜಾಗಿದ್ದಾರೆ. ಸಮಂತಾ ಬಣ್ಣದ ಮೇಲಿನ ನಿಯತ್ತು ಇಟ್ಟು ಹಳೆಯ ಗಂಡನ ಜೊತೆ ಹೆಜ್ಜೆ ಹಾಕುತ್ತಾರಾ? ಸದ್ಯಕ್ಕೆ ಇದು ಉತ್ತರ ಇಲ್ಲದ ಪ್ರಶ್ನೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡಬೇಕಿದೆ.

Share This Article