ಚೆನ್ನೈ: ಶ್ರೀಲಂಕಾ ನೌಕಾಪಡೆ (Sri Lankan Navy) ತಮಿಳುನಾಡಿನ (Tamil Nadu) ರಾಮೇಶ್ವರಂನ (Rameswaram) ಕರಾವಳಿ ಭಾಗದಲ್ಲಿ ಗಡಿ ಉಲ್ಲಂಘಿಸಿದ 23 ಭಾರತೀಯ ಮೀನುಗಾರರನ್ನು ಬಂಧಿಸಿದೆ.
ಮೀನುಗಾರರು ಪಾಲ್ಕ್‍ಬೇ ಸಮುದ್ರ ಪ್ರದೇಶದ ಡೆಲ್ಫ್ಟ್ ದ್ವೀಪದ ಬಳಿ ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆ ಶ್ರೀಲಂಕಾ ನೌಕಾಪಡೆ ಮೀನುಗಾರರನ್ನು ಬಂಧಿಸಿದೆ. ಬಳಿಕ ಜಾಫ್ನಾದ ಮೈಲಾಟಿ ನೇವಲ್ ಕ್ಯಾಂಪ್‍ಗೆ ತನಿಖೆಗಾಗಿ ಕರೆದೊಯ್ದಿದೆ. ಈ ಬಗ್ಗೆ ರಾಮೇಶ್ವರಂ ಮೀನುಗಾರರ ಸಂಘ ಮಾಧ್ಯಮಗಳ ಬಳಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ತಾಯಿ ತನ್ನ ತಂಗಿಯನ್ನೇ ಹೆಚ್ಚು ಪ್ರೀತಿಸ್ತಾರೆ ಅಂತಾ ಬುರ್ಕಾ ಧರಿಸಿ ಸ್ವಂತ ಮನೆಗೆ ಕನ್ನ ಹಾಕಿದ ಮಗಳು
ಕಳೆದ ತಿಂಗಳು ಶ್ರೀಲಂಕಾ ನೌಕಾಪಡೆ 18 ಭಾರತೀಯ ಮೀನುಗಾರರನ್ನು ಬಂಧಿಸಿತ್ತು. ಲಂಕಾದ ಕರಾವಳಿ ಪ್ರದೇಶದಲ್ಲಿ ಎರಡು ಭಾರತೀಯ ಮೀನುಗಾರಿಕಾ ಬೋಟ್‍ಗಳನ್ನು ವಶಪಡಿಸಿಕೊಂಡಿತ್ತು. ಇತ್ತೀಚಿನ ದಿನಗಳಲ್ಲಿ ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರರನ್ನು ಬಂಧಿಸುತ್ತಿರುವುದು ಕೇಂದ್ರ ಮತ್ತು ತಮಿಳುನಾಡು ಸರ್ಕಾರದ ಕಳವಳಕ್ಕೆ ಕಾರಣವಾಗಿದೆ.
ಕಳೆದ ಜುಲೈನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಈ ವಿಷಯದ ಬಗ್ಗೆ ಚರ್ಚಿಸಿದ್ದರು. ಇದನ್ನೂ ಓದಿ: ವೆಬ್ ಸೀರಿಸ್‍ನಿಂದ ಪ್ರೇರಣೆ ಪಡೆದು ನಕಲಿ ನೋಟ್ ದಂಧೆ – ಇಬ್ಬರೂ ಆರೋಪಿಗಳು ಅರೆಸ್ಟ್