Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: CCL: ‘ಮುಂಬೈ ಹೀರೊಸ್’ ತಂಡಕ್ಕೆ ಸಲ್ಮಾನ್ ಅಂಬಾಸಿಡರ್, ಕರ್ನಾಟಕ ತಂಡಕ್ಕೆ ಸುದೀಪ್ ಕ್ಯಾಪ್ಟನ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | CCL: ‘ಮುಂಬೈ ಹೀರೊಸ್’ ತಂಡಕ್ಕೆ ಸಲ್ಮಾನ್ ಅಂಬಾಸಿಡರ್, ಕರ್ನಾಟಕ ತಂಡಕ್ಕೆ ಸುದೀಪ್ ಕ್ಯಾಪ್ಟನ್

Cinema

CCL: ‘ಮುಂಬೈ ಹೀರೊಸ್’ ತಂಡಕ್ಕೆ ಸಲ್ಮಾನ್ ಅಂಬಾಸಿಡರ್, ಕರ್ನಾಟಕ ತಂಡಕ್ಕೆ ಸುದೀಪ್ ಕ್ಯಾಪ್ಟನ್

Public TV
Last updated: February 3, 2024 1:05 pm
Public TV
Share
3 Min Read
FotoJet 1
SHARE

ಭಾರತದ ಜನಪ್ರಿಯ ಒಟಿಟಿ ವೇದಿಕೆಯಾಗಿರುವ ಜಿಯೊಸಿನಿಮಾ, ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ (CCL) ಜೊತೆಗೆ ಸಹಭಾಗಿತ್ವವನ್ನು ಘೋಷಿಸಿದೆ. ಇದರ ಭಾಗವಾಗಿ, ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ ಹತ್ತನೇ ಸೀಸನ್‌ ಅನ್ನು ಜಿಯೊಸಿನಿಮಾ ಎಕ್ಸ್‌ ಕ್ಲ್ಯೂಸಿವ್ ಆಗಿ ನೇರಪ್ರಸಾರ ಮಾಡಲಿದೆ. ಕ್ರೀಡೆ ಮತ್ತು ಮನರಂಜನೆಗಳನ್ನು ಒಂದುಗೂಡಿಸಿ ಭಾರತದಲ್ಲಿ ರೂಪಿಸಿರುವ ಏಕಮಾತ್ರ ಪ್ರಯತ್ನ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ಇದಾಗಿದೆ. ನಾಲ್ಕು ವಾರಾಂತ್ಯಗಳಲ್ಲಿ ನಡೆಯಲಿರುವ ಸಿಸಿಎಲ್‌ 10ನೇ ಸೀಸನ್‌ನಲ್ಲಿ ಒಟ್ಟೂ 20 ರೋಚಕ ಪಂದ್ಯಗಳು ನಡೆಯಲಿವೆ. ಕ್ರಿಕೆಟ್‌ ಅಭಿಮಾನಿಗಳಷ್ಟೇ ಅಲ್ಲದೆ, ಸಿನಿಮಾ ಪ್ರೇಮಿಗಳೂ ಕುತೂಹಲದಿಂದ ವೀಕ್ಷಿಸುವ ಈ ಕ್ರಿಕೆಟ್‌ ಲೀಗ್‌ ಅನ್ನು ವ್ಯಾಪಕವಾದ ಪ್ರೇಕ್ಷಕವರ್ಗಕ್ಕೆ ನೇರವಾಗಿ ತಲುಪಿಸಲು ಜಿಯೊಸಿನಿಮಾ ಮುಂದಾಗಿದೆ. ಇದೇ ಫೆಬ್ರುವರಿ 23ರಿಂದ ಎಕ್ಸ್‌ ಕ್ಲ್ಯೂಸೀವ್ ಆಗಿ ಜಿಯೊ ಸಿನಿಮಾದಲ್ಲಿ ಸಿಸಿಎಲ್‌ ಪಂದ್ಯಗಳು ನೇರಪ್ರಸಾರವಾಗಲಿವೆ.

CCL

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ಪ್ರಾರಂಭವಾಗಿದ್ದು 2011ರಲ್ಲಿ. ನಂತರದ ದಿನಗಳಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿರುವ ಸಿಸಿಎಲ್, ಇಂದು ಭಾರತದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಕರನ್ನು ಹೊಂದಿರುವ ಕ್ರೀಡಾ-ಮನರಂಜನೆಯ ಇವೆಂಟ್ ಆಗಿ ಹೊರಹೊಮ್ಮಿದೆ. ಟೀವಿ ಮತ್ತು ಡಿಜಿಟಲ್‌ ಮಾಧ್ಯಮದ ಮೂಲಕ ಪ್ರಸಾರವಾಗಿದ್ದ ಕಳೆದ ವರ್ಷದ ಸಿಸಿಎಲ್‌ ಅನ್ನು, ದೇಶದಾದ್ಯಂತ 250 ಮಿಲಿಯನ್‌ಗೂ ಅಧಿಕ ಜನರು ವೀಕ್ಷಿಸಿದ್ದರು.

sudeep

ಯಾವ್ಯಾವ ತಂಡಗಳು?

ಭಾರತದ ಎಂಟು ಮುಖ್ಯ ಚಿತ್ರರಂಗವನ್ನು ಪ್ರತಿನಿಧಿಸುವ ತಂಡಗಳು ಈ ಬಾರಿಯ ಸಿಸಿಎಲ್‌ನಲ್ಲಿ (Cricket) ಭಾಗವಹಿಸುತ್ತಿವೆ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಭೋಜಪುರಿ ಮತ್ತು ಪಂಜಾಬ್‌ ತಂಡಗಳು ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನಲ್ಲಿ ಭಾಗವಹಿಸುತ್ತಿವೆ. ಸಿಸಿಎಲ್‌ ಸೀಸನ್‌ 10ನಲ್ಲಿ ಬೇರೆ ಬೇರೆ ಚಿತ್ರರಂಗಗಳ ಇನ್ನೂರಕ್ಕೂ ಅಧಿಕ ಜನಪ್ರಿಯ ತಾರೆಗಳು, ಗಣ್ಯರು ಜೊತೆಯಾಗಿ, ಪ್ರೇಕ್ಷಕರಿಗೆ ಊಹಿಸಲಸಾಧ್ಯ ಮನರಂಜನೆಯ ರಸದೂಟವನ್ನು ಉಣಿಸಲಿದ್ದಾರೆ.

CCL 1

ಯಾವ ತಂಡಕ್ಕೆ ಯಾರು ನಾಯಕರು?

ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ ಮುಂಬೈ ಹೀರೋಸ್ ತಂಡಕ್ಕೆ ಸಲ್ಮಾನ್‌ ಖಾನ್‌ (Salman Khan) ಬ್ರಾಂಡ್ ಅಂಬಾಸಿಡರ್‍ ಆಗಿದ್ದಾರೆ. ರಿತೇಶ್‌ ದೇಶಮುಖ್ ಈ ತಂಡದ ನಾಯಕ. ಸೋಹೈಲ್ ಖಾನ್, ಮುಂಬೈ ಹೀರೊಸ್ ತಂಡದ ಮಾಲೀಕರಾಗಿದ್ದಾರೆ. ‘ತೆಲುಗು ವಾರಿಯರ್ಸ್‌’ ತಂಡಕ್ಕೆ ವೆಂಕಟೇಶ್‌ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅಖಿಲ್ ಅಕ್ಕಿನೇನಿ ‘ತೆಲುಗು ವಾರಿಯರ್ಸ್‌’ ತಂಡದ ನಾಯಕ. ‘ಕರ್ನಾಟಕ ಬುಲ್ಡೋಜರ್ಸ್‌’ ತಂಡಕ್ಕೆ ಕಿಚ್ಚ ಸುದೀಪ್‌ (Sudeep) ನಾಯಕನಾಗಿದ್ದಾರೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಅನ್ನು ಈಗಷ್ಟೇ ಮುಗಿಸಿರುವ ಸುದೀಪ್‌, ಮತ್ತೊಮ್ಮೆ ಸಿಸಿಎಲ್‌ 10 ಮೂಲಕ ಜಿಯೊಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೋಹನ್‌ಲಾಲ್‌ ಸಹಮಾಲೀಕರಾಗಿರುವ ‘ಕೇರಳ ಸ್ಟ್ರೈಕರ್ಸ್‌’ ತಂಡಕ್ಕೆ ಇಂದ್ರಜಿತ್ ನಾಯಕರಾಗಿದ್ದಾರೆ. ‘ಭೋಜಪುರಿ ದಬಾಂಗ್ಸ್‌’ ತಂಡಕ್ಕೆ ಮನೋಜ್‌ ತಿವಾರಿ ನಾಯಕರಾಗಿದ್ದಾರೆ. ‘ಪಂಜಾಬ್‌ ದೆ ಶೇರ್’ ತಂಡಕ್ಕೆ ಸೋನು ಸೂದ್‌ ನಾಯಕರಾಗಿದ್ದಾರೆ. ಬೋನಿ ಕಪೂರ್ ಮಾಲೀಕರಾಗಿರುವ ‘ಬೆಂಗಾಲ್ ಟೈಗರ್ಸ್‌’ ತಂಡಕ್ಕೆ ಜಿಸ್ಸು ಸೆನ್‌ಗುಪ್ತ ನಾಯಕರಾಗಿದ್ದಾರೆ.

ccl

ಸಿಸಿಎಲ್‌ ಜೊತೆಗಿನ ಸಹಭಾಗಿತ್ವದ ಬಗ್ಗೆ ಪ್ರತಿಕ್ರಿಯಿಸಿರುವ ಜಿಯೊಸಿನಿಮಾದ ಬ್ಯುಸಿನೆಸ್‌ ಹೆಡ್‌ ಫರ್ಜಾದ್ ಪಾಲಿಯಾ, ‘ಜಿಯೊಸಿನಿಮಾ ವೇದಿಕೆಗೆ ಎಲ್ಲೆಡೆಯಿಂದ ಅದ್ಭುತವಾದ ಮೆಚ್ಚುಗೆ ದೊರಕುತ್ತಿದ್ದು, ಕ್ರಿಡೆ ಮತ್ತು ಮನರಂಜನೆಗೆ ಬೇರೆಲ್ಲೂ ಸಿಗದ ಅದ್ಭುತ ಪ್ರತಿಕ್ರಿಯೆ ಜಿಯೊಸಿನಿಮಾಗೆ ದೊರಕುತ್ತಿದೆ. ನಮಗೆ ಸಿಗುತ್ತಿರುವ  ಅಪ್ರತಿಮವಾದ ವ್ಯೂವರ್‍ಷಿಪ್‌ ಅದಕ್ಕೆ ಪುರಾವೆಯಾಗಿದೆ. ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ಎಂಬುದು ಕ್ರಿಡೆ ಮತ್ತು ಮನರಂಜನೆ ಎರಡೂ ಜಗತ್ತುಗಳನ್ನು ಒಂದೆಡೆ ಸೇರಿಸುತ್ತಿದ್ದು, ಇಂಡಿಯಾವನ್ನು ರಂಜಿಸುವ ಉದ್ದೆಶದಿಂದ ಸಿಸಿಎಲ್‌ ಜೊತೆಗೆ ಕೈಜೋಡಿಸುತ್ತಿರುವುದು ನಮಗೆ ಅತ್ಯಂತ ಸಂತೋಷದ ಸಂಗತಿಯಾಗಿದೆ’ ಎಂದು ಹೇಳಿದ್ದಾರೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ (ಸಿಸಿಎಲ್) ಸಂಸ್ಥಾಪಕರಾದ ವಿಷ್ಣು ಇಂದುರಿ ಕೂಡ ಈ ಸಹಭಾಗಿತ್ವದ ಬಗ್ಗೆ ಉತ್ಸಾಹದ ಮಾತುಗಳಾಡಿದ್ದಾರೆ. ‘ಸೆಲೆಬ್ರಿಟಿ ಕ್ರಿಕೆಟ್‌ ಲೀಗ್, ಸಂಸ್ಕೃತಿಕ ಹೆಗ್ಗುರುತಾಗಿ ಹೊರಹೊಮ್ಮುತ್ತಿದೆ. ಇದರ ಹತ್ತನೇ ಸೀಸನ್‌ ಅನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಯೊಸಿನಿಮಾ ಜೊತೆಗೆ ಕೈಜೋಡಿಸಿರುವುದು ನಿಜಕ್ಕೂ ನಮಗೆ ಸಂತೋಷದ ಸಂಗತಿ. ಕ್ರೀಡೆ ಮತ್ತು ಮನರಂಜನೆಯ ಈ ಸಂಯೋಜನೆಯ ಸಿಸಿಎಲ್‌ ಮೂಲಕ ದೇಶದಾದ್ಯಂತ ಅಭಿಮಾನಿಗಳ ಮನಸೂರೆಗೊಳ್ಳಲು ನಾವು ಕಾಯುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ. ಕ್ರೀಡೆ ಮತ್ತು ಮನರಂಜನೆಯ ಅಪರೂಪದ ಸಂಯೋಜನೆಯಾಗಿರುವ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ (ಸಿಸಿಎಲ್) 10ನೇ ಸೀಸನ್‌ ಅನ್ನು ಫೆಬ್ರುವರಿ 23ರಿಂದ ಜಿಯೊಸಿನಿಮಾದಲ್ಲಿ ವೀಕ್ಷಿಸಿ.

TAGGED:cclcricketsalman khansudeepಕ್ರಿಕೆಟ್ಸಲ್ಮಾನ್ ಖಾನ್ಸಿಸಿಎಲ್ಸುದೀಪ್
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

Udupi Fishing 2
Districts

ಮೀನುಗಾರಿಕೆಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ; ಇಂಧನ ಸಂಕಷ್ಟ, ಆಳ ಸಮುದ್ರ ಮೀನುಗಾರಿಕೆಗೆ ಆತಂಕ

Public TV
By Public TV
5 minutes ago
Petrol Bunk 4
Bengaluru City

ಬೆಂಗಳೂರಿನಲ್ಲಿ ಪೆಟ್ರೋಲ್ ಅಭಾವ ವದಂತಿ – ಬಾಟಲ್‌, ಕ್ಯಾನ್‌ ಹಿಡಿದು ಬಂಕ್‌ಗಳಿಗೆ ಮುಗಿಬಿದ್ದ ಜನ

Public TV
By Public TV
15 minutes ago
NAMMA METRO 4
Bengaluru City

IPL ಪಂದ್ಯದ ದಿನ ತಡರಾತ್ರಿ 2ರವರೆಗೆ ಸಂಚಾರ ಅವಧಿ ವಿಸ್ತರಿಸಿದ ʻನಮ್ಮ ಮೆಟ್ರೋʼ

Public TV
By Public TV
21 minutes ago
Gangavathi Inscription
Districts

ಗಂಗಾವತಿಯಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ಶಿಲಾಶಾಸನ ಪತ್ತೆ

Public TV
By Public TV
53 minutes ago
Donald Trump 2
Latest

ಆಕ್ರಮಿಸಿಕೊಳ್ತೇನೆ, ಇಲ್ಲವೇ ಸ್ವತಂತ್ರಗೊಳಿಸುತ್ತೇನೆ – ವೆನೆಜುವೆಲಾ, ಇರಾನ್‌ ಬಳಿಕ ಮತ್ತೊಂದು ದೇಶದ ಮೇಲೆ ಟ್ರಂಪ್‌ ಕಣ್ಣು

Public TV
By Public TV
54 minutes ago
chinnaswamy stadium
Bengaluru City

ಬೆಂಗಳೂರಲ್ಲಿ ಇಂದು ಐಪಿಎಲ್‌ ಉದ್ಘಾಟನೆ – ಚಿನ್ನಸ್ವಾಮಿ‌ ಕ್ರೀಡಾಂಗಣಕ್ಕೆ 2,000 ಪೊಲೀಸರ ಭದ್ರತೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?