ಅಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ವೊಂದು ಸಿಕ್ಕಿದೆ. ಸದ್ಯ ಹೈದರಾಬಾದ್ನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೀಗ ಮುಂದಿನ ಹಂತದ ಶೂಟಿಂಗ್ ಜಪಾನ್ನಲ್ಲಿ ಸಾಗಲಿದೆ. ಅದಕ್ಕಾಗಿ ಸದ್ಯದಲ್ಲೇ ಜಪಾನ್ಗೆ ಹಾರಲಿದೆ ‘ಪುಷ್ಪ 2’ (Pushpa 2) ಚಿತ್ರತಂಡ.
ಪುಷ್ಪ ಪಾರ್ಟ್ 2ಗೆ ‘ಪುಷ್ಪ: ದಿ ರೈಸ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ಮೊದಲ ಭಾಗದಲ್ಲಿ ಕೇವಲ ಕಾರ್ಮಿಕನಂತಿದ್ದ ಪುಷ್ಪರಾಜ್ ಈಗ ರಕ್ತಚಂದನದ ಕಳ್ಳಸಾಗಣೆಯಲ್ಲಿ ಆತನೇ ಕಿಂಗ್ಪಿನ್ ಆಗಿ ಬೆಳೆದಿರುತ್ತಾನೆ. ಮೊದಲ ಭಾಗದಲ್ಲಿ ವಿದೇಶದ ರೆಫರೆನ್ಸ್ ನೀಡಲಾಗಿತ್ತು. ರಕ್ತಚಂದನ ಜಪಾನ್ಗೆ ರಫ್ತಾಗಲಿದೆ ಎಂದು ತೋರಿಸಲಾಗಿತ್ತು. ಈಗ ಎರಡನೇ ಭಾಗದಲ್ಲಿ ಸಿನಿಮಾದ ಒಂದಷ್ಟು ಕಥೆ ವಿದೇಶದಲ್ಲೇ ಸಾಗಲಿದೆ ಎನ್ನಲಾಗಿದೆ. ಇದನ್ನೂ ಓದಿ:ಸಿಎಂ ಆದರೆ ಏನು ಮಾಡ್ತೀರಿ? ವೈರಲ್ ಆಗ್ತಿದೆ ವಿಜಯ್ ಕೊಟ್ಟ ಉತ್ತರ
ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್, ರಶ್ಮಿಕಾ ಸೇರಿದಂತೆ ಇಡೀ ಟೀಮ್ ಜಪಾನ್ ಹೋಗಲಿದ್ದಾರೆ. ಅಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದ್ದು, ಕೆಲ ವಿದೇಶಿ ಕಲಾವಿದರು ಕೂಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ಶ್ರೀವಲ್ಲಿ (ರಶ್ಮಿಕಾ ಮಂದಣ್ಣ) ಪಾತ್ರ ಮತ್ತಷ್ಟು ಪವರ್ಫುಲ್ ಆಗಿ ತೋರಿಸಲು ನಿರ್ದೇಶಕರು ಯೋಚಿಸಿದ್ದಾರೆ.
2021ರಲ್ಲಿ ‘ಪುಷ್ಪ ಪಾರ್ಟ್ 1’ ಸಕಸ್ಸ್ ಕಂಡಿರೋದ್ರಿಂದ ಸಹಜವಾಗಿ ‘ಪುಷ್ಪ 2’ ಬಗ್ಗೆ ಅಭಿಮಾನಿಗಳು ಭಾರೀ ನಿರೀಕ್ಷೆಯಿದೆ. ಅಲ್ಲು ನಯಾ ಅವತಾರ ನೋಡೋಕೆ ಅಭಿಮಾನಿಗಳು ಕಾಯುತ್ತಿದ್ದಾರೆ.