ಬಿಗ್ ಬಾಸ್ ಮನೆಯಿಂದ ಡ್ರೋಣ್ ಔಟ್: ಬಚಾವ್ ಮಾಡಿದ ಸುದೀಪ್

Public TV
1 Min Read
Bigg Boss 11

ಬಿಗ್ ಬಾಸ್ (Bigg Boss) ಮನೆಯಲ್ಲಿ ನಿನ್ನ ಹೈಡ್ರಾಮಾ ನಡೆದಿದೆ. ಫಿನಾಲೆಗೆ ಇನ್ನೆರಡೇ ದಿನಗಳು ಬಾಕಿ ಇರುವಾಗ ನಿನ್ನೆ ಮಿಡ್ ನೈಟ್ ಎಲಿಮಿನೇಷನ್(Elimination)  ನಡೆಯಿತು. ಫಿನಾಲೆಗೆ ಐದೇ ಐದು ಜನರು ಹೋಗಬೇಕಾಗಿದ್ದರಿಂದ ಒಬ್ಬರನ್ನು ಮನೆಯಿಂದ ಕಳುಹಿಸೋದು ಅನಿವಾರ್ಯವಾಗಿತ್ತು. ಹಾಗಾಗಿ ನಿನ್ನೆ ಬಿಗ್ ಬಾಸ್ ಎಲಿಮಿನೇಷನ್ ಘೋಷಣೆ ಮಾಡಿದರು.

bigg boss kannada 10

ಮಿಡ್ ನೈಟ್ ಎಲಿಮಿನೇಷನ್ ನಡೆಯಲಿದ್ದು, ಒಬ್ಬರು ಮನೆಯಿಂದ ಹೊರ ಹೋಗಲು ಸಿದ್ಧರಾಗಿ ಎಂದು ಬಿಗ್ ಬಾಸ್ ಶಾಕ್ ನೀಡಿದರು. ನಂತರ ಡ್ರೋಣ್ ಪ್ರತಾಪ್ (Drone Pratap) ಅವರು ಎಲಿಮಿನೇಷನ್ ಆಗಿದ್ದಾರೆ ಎಂದು ಘೋಷಿಸಿದರು. ಎಲ್ಲರ ಕಣ್ಣಲ್ಲೂ ನೀರು. ಅಭಿಮಾನಿಗಳಿಗೂ ಶಾಕ್. ಸಂಗೀತಾ ಶೃಂಗೇರಿ ಸೇರಿದಂತೆ ಪ್ರತಿಯೊಬ್ಬರೂ ಕಣ್ಣೀರಿಟ್ಟರು. ಆನಂತರ ನಡೆದದ್ದೇ ಬೇರೆ.

Bigg Boss 6

ಇನ್ನೇನು ಡ್ರೋಣ್ ಪ್ರತಾಪ್ ಮನೆಯಿಂದ ಹೊರಡಲು ಸಿದ್ಧರಾದಾಗ ಬಿಗ್ ಬಾಸ್ ಮತ್ತೊಂದು ಸೂಚನೆ ನೀಡಿದರು. ಮನೆಗೆ ಬಂದಿದ್ದ ಲೆಟರ್ ಅನ್ನು ಓದಲು ಹೇಳಲಾಯಿತು. ಅದು ನಟ ಸುದೀಪ್ ಬರೆದಿದ್ದ ಪತ್ರವಾಗಿತ್ತು. ಎಲಿಮಿನೇಟ್ ಆದ ಪ್ರತಾಪ್‍ ಅವರಿಗೆ ವರ ಎನ್ನುವಂತೆ ಆ ಲೆಟರ್ ನಲ್ಲಿ ಒಂದು ವಾಕ್ಯವಿತ್ತು.

ಸುದೀಪ್ (Sudeep) ಕಳುಹಿಸಿದ್ದ ಪತ್ರದಲ್ಲಿ ಈ ವಾರ ಯಾವುದೇ ಎಲಿಮಿನೇಷನ್ ಇಲ್ಲ. ಎಲ್ಲರೂ ಫಿನಾಲೆಗೆ ತಲುಪಲಿದ್ದೀರಿ ಎಂದು ಬರೆಯಲಾಗಿತ್ತು. ಹಾಗಾಗಿ ಡ್ರೋಣ್ ಪ್ರತಾಪ್ ಬಚಾವ್ ಆದರು. ಎಲ್ಲರ ಮುಖದಲ್ಲೂ ಮತ್ತೆ ಸಂಭ್ರಮ ಕಾಣಿಸಿಕೊಂಡಿದೆ. ಆರು ಜನ ಫಿನಾಲೆಗೆ ತಲುಪಿದ್ದಾರೆ ನಿಜ. ಆದರೆ, ಸುದೀಪ್ ಅವರ ಎಡಬಲದಲ್ಲಿ ನಿಂತುಕೊಳ್ಳೋದು ಇಬ್ಬರೇ. ಆಗಾಗಿ ಹೊರ ಬರುವ ಮೂವರು ಯಾರು ಎನ್ನೋದೇ ಕುತೂಹಲ.

Share This Article