ಲೈಮಾ: ವಯಸ್ಕರ ಚಲನಚಿತ್ರ ಉದ್ಯಮದಲ್ಲಿ ತಾನು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದ ಪೆರುವಿನ ನೀಲಿ ಚಿತ್ರತಾರೆ ಥೈನಾ ಫೀಲ್ಡ್ಸ್(24) (Thaina Fields) ಅದಾದ ಒಂದೇ ತಿಂಗಳಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಆಕೆಯ ಆಪ್ತ ಸ್ನೇಹಿತ ಅಲೆಜಾಂಡ್ರಾ ಸ್ವೀಟ್ (Alejandra Sweet) ಅವರು ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನನ್ನ ಸ್ನೇಹಿತೆಯ ಸಾವಿನಿಂದ ದುಃಖಿತನಾಗಿದ್ದೇನೆ, ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಆಕೆಯನ್ನು ಪ್ರೀತಿಸುವವರೆಲ್ಲರೂ ಅವಳ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೌನವಾಗಿರಲು ಸಾಧ್ಯವಿಲ್ಲ, ರೂಪಾ ಕ್ಷಮೆ ಕೇಳಬೇಕು- ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಸಿಂಧೂರಿ ಬಿಗಿಪಟ್ಟು
ಫೀಲ್ಡ್ ನೊಂದಿಗೆ ಕೆಲಸ ಮಾಡಿದ ಉತ್ಪಾದನಾ ಕಂಪನಿಗಳಲ್ಲಿ ಒಂದಾದ ಮಿಲ್ಕಿ ಪೆರು, ಥೈನಾ ಫೀಲ್ಡ್ಸ್‌ಗೆ ಸಂತಾಪ ಸೂಚಿಸಿದೆ. ವಯಸ್ಕ ಉದ್ಯಮದಲ್ಲಿ (Film Industry) ತಾನು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಥೈನಾ ಫೀಲ್ಡ್ಸ್ ಇತ್ತೀಚೆಗೆ ಹೇಳಿಕೊಂಡಿದ್ದಳು. ಅಡಲ್ಟ್ಸ್ ಕಂಟೆಂಟ್‌ನಲ್ಲಿ ನಟಿಸಲು ಪ್ರಾರಂಭಿಸಿದ ನಂತರ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೆ. ತನ್ನನ್ನು ನೇಮಿಸಿಕೊಂಡವರು ತಮಗೆ ಬೇಕಾದುದ್ದನ್ನು ಮಾಡಬೇಕು ಎಂದು ಬಯಸುತ್ತಾರೆ. ಮಹಿಳೆಯರು ವಯಸ್ಕರ ಚಿತ್ರಗಳಲ್ಲಿ ನಟಿಸುವುದು ತುಂಬಾ ಕಷ್ಟಕರವಾಗಿತ್ತು. ಈ ಆರೋಪಗಳನ್ನು ಮಾಡಿದ ಕೆಲ ತಿಂಗಳ ನಂತರ, ಥೈನಾ ಫೀಲ್ಡ್ಸ್ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿನ ಕಾರಣ ಇನ್ನಷ್ಟೇ ಹೊರಬರಬೇಕಿದೆ. ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯಿಂದ ಮತಾಂತರಕ್ಕೆ ಯತ್ನ ಆರೋಪ – ರೊಚ್ಚಿಗೆದ್ದ ಗ್ರಾಮಸ್ಥರು
ಸದ್ಯ ಬೆಳಕಿಗೆ ಬಂದಿರುವ ಆಘಾತಕಾರಿ ಘಟನೆಯಲ್ಲಿ, ಪೆರುವಿಯನ್ ವಯಸ್ಕ ಚಲನಚಿತ್ರ ತಾರೆ- ಥೈನಾ ಫೀಲ್ಡ್ ಎಂಬ ಹೆಸರಿನಿಂದ ಕೆಲಸ ಮಾಡುತ್ತಿದ್ದು, ನಿಗೂಢ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ 24 ವರ್ಷದ ನಟಿಯ ದೇಹವು ಟ್ರುಜಿಲ್ಲೊದಲ್ಲಿನ ಅವರ ಮನೆಯಲ್ಲಿ ಪತ್ತೆಯಾಗಿದೆ. ಲೈಂಗಿಕ ಉದ್ಯಮದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಆರೋಪ ಮಾಡಿದ ಒಂದು ತಿಂಗಳ ನಂತರ ಈ ಘಟನೆ ವರದಿಯಾಗಿದೆ. ಆಕೆಯ ಉದ್ಯಮದಲ್ಲಿ ತೊಡಗಿದ್ದ ಮಿಲ್ಕಿ ಪೆರು ಕಂಪನಿಯೂ ನಟಿಯ ಸಾವಿಗೆ ಸಂತಾಪ ಸೂಚಿಸಿದೆ. ಇದನ್ನೂ ಓದಿ: ಹಾವೇರಿ ನೈತಿಕ ಪೊಲೀಸ್‍ಗಿರಿ ಪ್ರಕರಣದಲ್ಲಿ ಯಾರ ರಕ್ಷಣೆಯನ್ನೂ ಸರ್ಕಾರ ಮಾಡಲ್ಲ: ಪರಮೇಶ್ವರ್