ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಯುವತಿಯ ಎದುರು ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿದ್ದಾನೆ. ಮಹದೇವಪುರ ಪಾರ್ಕ್ (Mahadevapura Park) ಎದುರು ಈ ಘಟನೆ ನಡೆದಿದೆ.
ಕಾರನ್ನು ಪಾರ್ಕ್ ಮಾಡಿ ಕಾರಿನಲ್ಲಿ ಯುವತಿ ಕುಳಿತುಕೊಂಡಿದ್ದಳು. ಆ ಸಮಯದಲ್ಲಿ ಕಾರಿನ ಮುಂಭಾಗದಲ್ಲಿ ಬಂದ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆತಂಕಗೊಂಡ ಯುವತಿ ಡೋರ್ ಲಾಕ್ ಮಾಡಿದ್ದಾಳೆ. ಬಳಿಕ ಕಾರಿನ ಬಳಿ ಬಂದ ಅಪರಿಚಿತ ವ್ಯಕ್ತಿ ಕಾರಿನ ಸುತ್ತ ಓಡಾಡಿದ್ದಾನೆ.
ಭಯಭೀತಗೊಂಡ ಯುವತಿ ಕಾರಿನ ಸ್ಟೇರಿಂಗ್ ಕೆಳಗೆ ಅವಿತುಕೊಂಡಿದ್ದಾಳೆ. ಆಕೆಯ ಸ್ನೇಹಿತರೊಬ್ಬರು ಬಂದ ನಂತರ ಕಾರಿನ ಯುವತಿ ಕೆಳಗಿಳಿದಿದ್ದಾಳೆ. ತಾನು ಅನುಭವಿಸಿದ ಸಮಸ್ಯೆಯನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾಳೆ. ಜನವರಿ 5ರಂದು ಈ ಘಟನೆ ನಡೆದಿದೆ. ಇದನ್ನೂ ಓದಿ: ಅಪರೂಪದ ಬೃಹತ್ ಹಿಮಾಲಯನ್ ಗ್ರಿಫನ್ ಓಲ್ಚರ್ ರಣಹದ್ದು ಕಾರವಾರದಲ್ಲಿ ಪ್ರತ್ಯಕ್ಷ