ಭಾರತವನ್ನು ಹಿಂದೂ ರಾಷ್ಟ್ರ ಮಾಡೇ ಮಾಡ್ತೀವಿ, ತಾಕತ್ತಿದ್ದರೆ ತಡೀರಿ – ಮುತಾಲಿಕ್‌ ಸವಾಲ್‌

Public TV
1 Min Read
pramod muthalik

ಹುಬ್ಬಳ್ಳಿ: ಭಾರತವನ್ನು ಹಿಂದೂ ರಾಷ್ಟ್ರ ಮಾಡೇ ಮಾಡ್ತೀವಿ. 2024ರ ಚುನಾವಣೆ ಬಳಿಕ ಪ್ರಧಾನಿ ಮೋದಿ (Modi) ಗೆದ್ದ ನಂತರ ದೇಶ ಹಿಂದೂ ರಾಷ್ಟ್ರವಾಗುತ್ತೆ, ತಾಕತ್ತಿದ್ದರೆ ತಡೀರಿ ನೋಡೋಣ ಅಂತ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಸವಾಲು ‌ಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ದೇಶ ಹಿಂದೂ ರಾಷ್ಟ್ರವಾದರೆ ಪಾಕಿಸ್ತಾನ, ಅಫ್ಘಾನಿಸ್ತಾನದ ರೀತಿತೇ ಆಗುತ್ತದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಧರ್ಮದ ಹೆಸರಲ್ಲಿ ಸರ್ವಾಧಿಕಾರ ಮಾಡಿ ದಿವಾಳಿಯಾಗಿವೆ ಎಂಬ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಕಂಡಾಮಂಡಲವಾದರು. ಇದನ್ನೂ ಓದಿ: ಅಯೋಧ್ಯೆ ವಿವಾದಾತ್ಮಕ ಕ್ಷೇತ್ರ – ರಾಮಮಂದಿರಕ್ಕೂ, ಭಕ್ತರಿಗೂ ರಕ್ಷಣೆ ಬೇಕು: ಡಿ.ಕೆ.ಸುರೇಶ್

B.K HARIPRASAD

ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನನಗೆ ಹಿಂದುತ್ವ ಆಗೋದಿಲ್ಲ ಅಂತ ಹೇಳ್ತಾರೆ. ಅಪ್ಪನ ಲುಂಗಿ ಹಿಡಿದುಕೊಂಡು ಬಂದವರು ಯತೀಂದ್ರ, ಅವರಿಗೆ ಹಿಂದೂ ಅಂದರೂ ಗೊತ್ತಿಲ್ಲ, ಹಿಂದುತ್ವವೂ ಗೊತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಲ್ಲ, ಕಡ್ಡಾಯ ರಜೆ ಮೇಲೆ ಹೋಗಿಲ್ಲ: ಪರಮೇಶ್ವರ್

ಇದೇ ವೇಳೆ ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ನೀಡಬೇಕು. ಏಕೆಂದರೆ, ಗೋದ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರು ಆಗಬಹುದು ಎಂಬ ಬಿ.ಕೆ.ಹರಿಪ್ರಸಾದ್‌ ಪ್ರಚೋದನಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿ.ಕೆ ಹರಿಪ್ರಸಾದ್‌ರನ್ನ ಈ ಕೂಡಲೇ ಬಂಧಿಸಬೇಕು. ಅವರನ್ನ ಬಂಧಿಸಿ ಗೋದ್ರಾ ಹತ್ಯಾಕಾಂಡ ಮರುಕಳಿಸುವ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಗೋದ್ರಾ ದುರಂತದ ರೀತಿ ಮತ್ತೊಮ್ಮೆ ಏನಾದ್ರೂ ಆಗಬಹುದು: ಬಿ.ಕೆ.ಹರಿಪ್ರಸಾದ್‌

ಇನ್ನೂ ಗೋದ್ರಾ ಘಟನೆಗೆ ಕಾರಣ ಮುಸ್ಲಿಮರು. ಕಾಂಗ್ರೆಸ್‌ನವರೇ ಮುಸ್ಲಿಮರಿಗೆ ಕುಮ್ಮಕ್ಕು ಕೊಡಿತ್ತಿದ್ದೀರಿ ಗಲಭೆ ಎಬ್ಬಿಸೋದಕ್ಕೆ ನೀವೇ ಏನಾದ್ರೂ ಪ್ಲ್ಯಾನ್‌ ಮಾಡ್ತಿದ್ದೀರಾ? ಅಂತಾ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಹಿಂದೂಗಳು ದರ್ಬಲಗೊಂಡರೆ ಮತ್ತೊಂದು ಪಾಕ್ ಸೃಷ್ಟಿ: ಯತೀಂದ್ರ ಹೇಳಿಕೆಗೆ ಸಿ.ಟಿ ರವಿ ತಿರುಗೇಟು

Share This Article