ನೂರಕ್ಕೆ ನೂರರಷ್ಟು ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ: ಆರ್. ಅಶೋಕ್

Public TV
2 Min Read
R ASHOK

ಬೆಂಗಳೂರು: ಉಚಿತ ಯೋಜನೆಗಳಿಗೆ ಹಣ ಕೊಡಲು ಆಗುತ್ತಿಲ್ಲ. ಈ ಸರ್ಕಾರ 100ಕ್ಕೆ ನೂರರಷ್ಟು ದಿವಾಳಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಕಿಡಿಕಾರಿದರು.

ವಿಧಾನಸೌಧದಲ್ಲಿ (Vidhanasoudha) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದಾರೆ. ನಾವು ಪರಿಹಾರ ಕೊಟ್ಟಿದ್ದೆವು, ಅಷ್ಟೇ ಪರಿಹಾರ ಇವರು ಕೊಡಬೇಕಿತ್ತು. ಯಾವ ಗ್ಯಾರಂಟಿ ಸರಿಯಾಗಿ ಈಡೇರಿಸಿಲ್ಲ. ಈ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ ಎಂದು ಗರಂ ಆದರು.

ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಬರ ಪರಿಹಾರ ಎರಡು ಸಾವಿರ ಕೊಡ್ತೀವಿ ಅಂತಾರೆ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಗಾದೆ ಮಾತಿನಂತೆ ಆಗಿದೆ. ರೈತರಿಗೆ ಬರ ಪರಿಹಾರ ಕೊಡುವಲ್ಲೂ ವಿಫಲವಾಗಿದೆ. ಪಿಎಂ ಮೋದಿ (Narendra Modi) ಭೇಟಿಗೆ ಅವಕಾಶ ಕೊಟ್ಟಿದ್ದಾರೆ, ಅಮಿತ್ ಶಾ (Amitshah) ಭೇಟಿ ಸಹ ಆಗಿದೆ. ಕೂಡಲೇ ರಾಜ್ಯ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿ. ನಮ್ಮಲ್ಲಿ ಹಸಿರು ಬರ ಇದೆ, ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಒಂದೇ ಸಲ ಬಿಡುಗಡೆ ಮಾಡುವುದು. ಕರ್ನಾಟಕಕ್ಕೆ ಮೊದಲು ಬಿಡುಗಡೆ ಮಾಡಲ್ಲ. ನಿಮ್ಮ ಪಾಲಿನ ಹಣ ಬಿಡುಗಡೆ ಮಾಡಿ ಎಂದು ಅಶೋಕ್ ಒತ್ತಾಯಿಸಿದರು. ಇದನ್ನೂ ಓದಿ: ಇನ್ಮುಂದೆ KSRTC, BMTC ಬಸ್‌ಗಳಲ್ಲಿ ಮಾಸ್ಕ್ ಕಡ್ಡಾಯ: ರಾಮಲಿಂಗಾ ರೆಡ್ಡಿ

NARENDRA MODI 2

ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ಜಾಸ್ತಿ ಆಗುತ್ತಿದೆ. ರಾಜ್ಯದಲ್ಲಿ ಎನ್‍ಐಎ ತಂಡ ಬಳ್ಳಾರಿ ಸೇರಿದಂತೆ ಹಲವು ಕಡೆ ಶೋಧ ಮಾಡಿದೆ. ಪಿಎಫ್‍ಐ ಸಂಘಟನೆಯನ್ನ ಸರ್ಕಾರ ನಿಷೇಧ ಮಾಡಿದೆ. ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗ ಇವರ ಮೇಲೆ ಕೇಸ್ ವಾಪಸ್ ಪಡೆದಿದ್ರು. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಮತ್ತೆ ಈ ಚಟುವಟಿಕೆಗಳು ಶುರುವಾಗಿವೆ. ಐಸಿಸ್ ಸೇರಿದಂತೆ ಉಗ್ರ ಸಂಘಟನೆಗಳಿಗೆ ಸಪೆÇೀರ್ಟ್ ಮಾಡೋರು ಬೆಳೆಯುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮಹಿಳಾ ವಿವಸ್ತ್ರ ಮಾಡಿದ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ವಿರೋಧ ಪಕ್ಷಗಳು ಭೇಟಿ ಬಳಿಕ ಪರಿಹಾರ ಘೋಷಣೆ ಮಾಡಿದರು. ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ವಿದ್ಯಾರ್ಥಿಗಳನ್ನು ಶಾಲೆಯ ಗುಂಡಿ ಕ್ಲೀನ್ ಮಾಡಲು ಇಳಿಸಿದ್ದು ಸರಿಯಲ್ಲ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಅಶೋಕ್ ಕಿಡಿಕಾರಿದರು.

Share This Article