ಯಶ್ ಜೊತೆಗಿನ ಸ್ನೇಹ, ಜೀವನ ಪೂರ್ತಿ ಮುಂದುವರೆಯಲಿದೆ: ಪ್ರಶಾಂತ್ ನೀಲ್

Public TV
2 Min Read
yash

ಪ್ರಭಾಸ್-ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್ ಸಿನಿಮಾ ‘ಸಲಾರ್’ (Salaar) ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಸಲಾರ್ ಸಿನಿಮಾ ಪ್ರಚಾರ ಕೂಡ ಭರದಿಂದ ಸಾಗುತ್ತಿದೆ. ಹೀಗಿರುವಾಗ ಸಂದರ್ಶನವೊಂದರಲ್ಲಿ ಪ್ರಶಾಂತ್ ನೀಲ್, ಯಶ್ (Yash) ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.

SALAAR Prashanth Neel 2

ಇತ್ತೀಚೆಗೆ ಯಶ್‌ ಜೊತೆ ‘ಕೆಜಿಎಫ್ 3’ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ಪ್ರಶಾಂತ್ ನೀಲ್ ಅನುಮಾನ ವ್ಯಕ್ತಪಡಿಸಿದ್ದರು. ಆಗಲೇ ಯಶ್ ಜೊತೆ ಪ್ರಶಾಂತ್ ಬಾಂಧವ್ಯ ಸರಿಯಿಲ್ಲ ಎಂದು ಅಂತೆ ಕಂತೆ ಸುದ್ದಿಗಳು ಸೃಷ್ಟಿಯಾಗಿತ್ತು. ಇದೀಗ ಯಶ್ ಜೊತೆಗಿನ ಒಡನಾಟದ ಬಗ್ಗೆ ಪ್ರಶಾಂತ್ ನೀಲ್ ಮಾತನಾಡುವ ಮೂಲಕ ಗಾಸಿಪ್‌ಗೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ:ದುಡುಕಿದ ‘ಚಾರ್ಲಿ’ ನಟಿ- ಮತ್ತೆ ಸ್ಪರ್ಧಿಗಳ ಕೆಂಗಣ್ಣಿಗೆ ಸಂಗೀತಾ ಗುರಿ

Yash

ಯಶ್ ಕುರಿತು ‘ಸಲಾರ್’ (Salaar) ಡೈರೆಕ್ಟರ್ ಪ್ರತಿಕ್ರಿಯಿಸಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇಲ್ಲದಿದ್ದರೆ ತೆರೆಮೇಲೆ ಒಳ್ಳೆಯ ಸಿನಿಮಾ ನೋಡಲು ಸಾಧ್ಯವಿಲ್ಲ. ಇಬ್ಬರ ಕೆಮಿಸ್ಟ್ರಿ ತೆರೆಮೇಲೆ ಮಿಸ್ ಆಗುತ್ತದೆ. ನನ್ನ ಹಾಗೂ ಯಶ್ ಸ್ನೇಹ ಜೀವನ ಪೂರ್ತಿ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

prabhas 1

ಯಶ್ (Yash) ಜೊತೆ ಎರಡು ಸಿನಿಮಾ ಮಾಡಿದ್ದೀರಿ. ನಟ ಪ್ರಭಾಸ್ ಜೊತೆ ಈ ‘ಸಲಾರ್’ ಚಿತ್ರದಲ್ಲಿ ಕೆಲಸ ಮಾಡಿದ್ದೀರಿ. ಇಬ್ಬರ ನಡುವಿನ ವ್ಯತ್ಯಾಸ ಏನು ಎಂದು ಪ್ರಶಾಂತ್ ನೀಲ್‌ಗೆ ಸಂದರ್ಶನದಲ್ಲಿ ಕೇಳಲಾಗಿದೆ. ಇಬ್ಬರ ನಡುವೆ ಸಾಕಷ್ಟು ಸಾಮ್ಯತೆಯಿದೆ. ಇಬ್ಬರಿಗೂ ತಮ್ಮನ್ನ ಪ್ರೀತಿಸುವ ಫ್ಯಾನ್ಸ್ ವಿಚಾರದಲ್ಲಿ ಬಹಳ ಜವಾಬ್ದಾರಿಯಿದೆ. ಇಬ್ಬರಿಗೂ ಉತ್ತಮ ಸಿನಿಮಾ ಮಾಡಬೇಕು ಎನ್ನುವ ಹಸಿವಿದೆ. ನಿರ್ದೇಶಕರು ಯಾರು ಎನ್ನುವುದನ್ನು ನೋಡದೇ ಒಳ್ಳೆಯ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಲು ಬಯಸುತ್ತಾರೆ. ಅವರ ವೃತ್ತಿಪರತೆ ಹಾಗೂ ಬದ್ಧತೆ ಸಿನಿಮಾ ನಿರ್ಮಾಣದ ಪ್ರತಿ ಹಂತದಲ್ಲೂ ಗೊತ್ತಾಗುತ್ತದೆ ಎಂದಿದ್ದಾರೆ.

salaar1 3

ಅವರಿಬ್ಬರ ಸಿನಿಮಾಗಳು ಅವರ ಸ್ಟಾರ್‌ಡಮ್‌ನಿಂದಲೇ ಮಾರಾಟವಾಗುತ್ತವೆ. ಪ್ರೇಕ್ಷಕರು ನಮ್ಮ ಕೆಲಸವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಬಗ್ಗೆ ಹೆಚ್ಚಿನ ಜವಾಬ್ದಾರಿ ವಹಿಸುತ್ತಾರೆ. ಕೆಲಸಕ್ಕೆ ಇಬ್ಬರೂ ಕೆಲಸಕ್ಕೆ ನೀಡುವ ಮೌಲ್ಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

‘ಸಲಾರ್’ ಬಳಿಕ ಪ್ರಶಾಂತ್ ನೀಲ್ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೈ ಹಾಕುತ್ತಿದ್ದಾರೆ. ಜ್ಯೂ.ಎನ್‌ಟಿಆರ್ ನಟನೆಯ 31ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಮುಂದಿನ ವರ್ಷವೇ ಸಿನಿಮಾ ಶುರುವಾಗಲಿದೆ. ಬಳಿಕ ‘ಸಲಾರ್’ ಸೀಕ್ವೆಲ್ ಕೆಲಸ ಕೂಡ ಇದೆ. ರಾಮ್‌ಚರಣ್ ಜೊತೆಗೂ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆದಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ 25ನೇ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಬೇಕಿದೆ. ಇದೇ ಕಾರಣಕ್ಕೆ ಪ್ರಶಾಂತ್ ನೀಲ್ ‘ಕೆಜಿಎಫ್- 3’ (KGF 3) ಸಿನಿಮಾ ನಿರ್ದೇಶನದ ಬಗ್ಗೆ ಗೊಂದಲದಲ್ಲಿದ್ದಾರೆ. ಆದರೆ ಚಿತ್ರದ ಕಥೆ ಸಿದ್ಧವಾಗಿದೆ ಎಂದು ಪ್ರಶಾಂತ್ ನೀಲ್ ಮಾಹಿತಿ ನೀಡಿದ್ದಾರೆ.

Share This Article