ಲೀಲಾವತಿ ಆರೈಕೆ ಮಾಡುತ್ತಿದ್ದ ಬಂಗಾರಮ್ಮ ನಿಧನ

Public TV
1 Min Read
leelavathi 1 5

ನ್ನಡ ಚಿತ್ರರಂಗ ಕಂಡ ಖ್ಯಾತ ನಟಿ ಲೀಲಾವತಿ (Leelavathi) ನಿಧನದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಕಹಿ ಸುದ್ದಿ ಸಿಕ್ಕಿದೆ. ಲೀಲಾವತಿ ಅವರನ್ನು ನೋಡಿಕೊಳ್ಳುತ್ತಿದ್ದ ಬಂಗಾರಮ್ಮ ನಿಧನರಾಗಿದ್ದಾರೆ. ಲೀಲಮ್ಮನ ಜೊತೆಗೆ ಇರುತ್ತಿದ್ದ ಬಂಗಾರಮ್ಮ (Bangaramma) ಇನ್ನಿಲ್ಲ.

Leelavathi 8

ನಟ ವಿನೋದ್ ರಾಜ್ (Vinod Raj) ಕುಟುಂಬಕ್ಕೆ ಲೀಲಾವತಿ ಅವರ ಹಠಾತ್ ನಿಧನ ಶಾಕ್ ಕೊಟ್ಟಿದೆ. ತಾಯಿಯ ಅಗಲಿಕೆಯ ನೋವಿನಿಂದ ಹೊರಬರುವ ಮುನ್ನವೇ ಮನೆಯ ಸದಸ್ಯರೇ ಆಗಿದ್ದ ಬಂಗಾರಮ್ಮ ಇಹಲೋಕ ತ್ಯಜಿಸಿದ್ದಾರೆ. ಲೀಲಮ್ಮರ ಆರೈಕೆ ಮಾಡುತ್ತ ಸದಾ ಅವರ ಜೊತೆಗೆ ಇರುತ್ತಿದ್ದ ಬಂಗಾರಮ್ಮ ಎಂದೂ ಬಾರದ ಲೋಕಕ್ಕೆ ಹೋಗಿದ್ದಾರೆ.

leelavathi

65 ವಯಸ್ಸಿನ ಬಂಗಾರಮ್ಮ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನ ನಾಗರಬಾವಿ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿದ್ದರು. ಡಿಸೆಂಬರ್ 12ರಂದು ತಡರಾತ್ರಿ ಅವರು ನಿಧನರಾಗಿದ್ದಾರೆ. ಇದನ್ನೂ ಓದಿ:‘ಕರಾವಳಿ’ ಸೊಗಡಿನ ಮತ್ತೊಂದು ಸಿನಿಮಾ: ಪ್ರಜ್ವಲ್ ದೇವರಾಜ್ ಹೀರೋ

ಬಂಗಾರಮ್ಮನವರು ಚಿಕ್ಕವಯಸ್ಸಿನಿಂದಲೂ ಲೀಲಾವತಿ ಅವರ ಜೊತೆಗೆ ಇರುತ್ತಿದ್ದರು, ಲೀಲಾವತಿ ಚೆನ್ನೈನಲ್ಲಿ ವಾಸವಾಗಿದ್ದಾಗಲೂ, ಅವರೊಂದಿಗೆ ಬಂಗಾರಮ್ಮ ಇದ್ದರು. ಲೀಲಾವತಿ ಎಲ್ಲಿಗೇ ಹೋದರೂ, ಬಂಗಾರಮ್ಮ ಜೊತೆಗೆ ಬರುತ್ತಿದ್ದರು. ಇದೀಗ ಲೀಲಾವತಿ ಇನ್ನಿಲ್ಲವಾದ ಬೆನ್ನಲ್ಲೇ ಬಂಗಾರಮ್ಮ ಕೂಡ ಚಿರನಿದ್ರೆಗೆ ಜಾರಿದ್ದಾರೆ.

Share This Article