ಒಟಿಟಿಯತ್ತ ಮುಖ ಮಾಡಿದ ಕೀರ್ತಿ ಸುರೇಶ್

Public TV
1 Min Read
Keerthy Suresh 2

ಸೌತ್ ನಟಿ ಕೀರ್ತಿ ಸುರೇಶ್ (Keerthy Suresh) ಅವರು ‘ಭೋಲಾ ಶಂಕರ್’ ಸೋಲಿನ ನಂತರ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಒಟಿಟಿಯಲ್ಲಿ ಮೂಡಿ ಬರಲಿರುವ ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೀರ್ತಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

Keerthy Suresh 3‘ಭೋಲಾ ಶಂಕರ್’ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿಗೆ ಕೀರ್ತಿ ತಂಗಿಯಾಗಿ ನಟಿಸಿದ್ದರು. ಅವಕಾಶಗಳು ಕಮ್ಮಿಯಾಗ್ತಿದ್ಯಾ? ಎಂಬ ಗುಸು ಗುಸು ಸುದ್ದಿ ನಡುವೆ ಈಗ ಒಟಿಟಿಯತ್ತ ನಟಿ ಮುಖ ಮಾಡಿರೋದು ಮತ್ತಷ್ಟು ಸುದ್ದಿಯಾಗುತ್ತಿದೆ. ಇದನ್ನೂ ಓದಿ:‘ಫಸ್ಟ್ ನೈಟ್ ವಿತ್ ದೆವ್ವ’ ಅಂತಾರೆ ಪ್ರಥಮ್: ಫೋಟೋ ವೈರಲ್

Keerthy Suresh 1

ಹಿಂದಿ ನಿರ್ಮಾಪಕ ಆದಿತ್ಯ ಚೋಪ್ರಾ (Adithya Chopra) ನಿರ್ಮಾಣದ ವೆಬ್ ಸಿರೀಸ್‌ನಲ್ಲಿ ಕೀರ್ತಿ ಸುರೇಶ್ ಮತ್ತು ರಾಧಿಕಾ ಅಪ್ಟೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧರ್ಮರಾಜ್ ಶೆಟ್ಟಿ ಒಟಿಟಿ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

keerthy suresh 4

ಕೀರ್ತಿ ಸುರೇಶ್ ಅವರು ನಟಿಸುತ್ತಿರುವ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರದಲ್ಲಿ ಮಕಾಡೆ ಮಲಗುತ್ತಿವೆ. ಅವರ ಸಿನಿಮಾಗಳು ಅಷ್ಟಾಗಿ ವರ್ಕ್ ಆಗದ ಕಾರಣ, ಒಟಿಟಿಯತ್ತ ಮುಖ ಮಾಡಿದ್ರಾ? ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ.

ನಾಗಚೈತನ್ಯ ನಟನೆಯ ಹೊಸ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ ಎಂದು ಹೇಳಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರಲಿದೆ ಎಂಬ ಸುದ್ದಿ ಚಾಲ್ತಿಯಲ್ಲಿದೆ.

Share This Article