ಹಲಾಲ್‌ ಉತ್ಪನ್ನ ನಿಷೇಧಿಸುವ ನಿರ್ಧಾರ ತೆಗೆದುಕೊಂಡಿಲ್ಲ – ಅಮಿತ್‌ ಶಾ

Public TV
1 Min Read
Amit Shah

ಹೈದರಾಬಾದ್‌: ಉತ್ತರ ಪ್ರದೇಶ (Uttar Pradesh) ಸರ್ಕಾರವು ಹಲಾಲ್ (Halal) ಟ್ಯಾಗ್ ಹೊಂದಿರುವ ಆಹಾರ ಉತ್ಪನ್ನಗಳನ್ನು ನಿಷೇಧಿಸಿದೆ. ಈ ಬೆನ್ನಲ್ಲೇ ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಅವರು, ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವ ಯಾವುದೇ ನಿರ್ಧಾರ ಸರ್ಕಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

halal meat

ಹೈದರಾಬಾದ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲಾಲ್‌ ಉತ್ಪನ್ನಗಳ ಮಾರಾಟ ನಿಷೇಧಿಸುವ ಯಾವುದೇ ನಿರ್ಧಾರವನ್ನು ಸರ್ಕಾರ ತೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವೀರಯೋಧ ಕ್ಯಾ.ಪ್ರಾಂಜಲ್‌ ಅಂತಿಮ ಯಾತ್ರೆ – ತ್ರಿವರ್ಣ ಧ್ವಜ ಹಿಡಿದು ಜನರಿಂದ ಸೆಲ್ಯೂಟ್‌

meat ban

ಇದೇ ವೇಳೆ ತೆಲಂಗಾಣ ಚುನಾವಣಾ (Telangana Elections) ಪ್ರಚಾರದ ಕುರಿತು ಮಾತನಾಡಿ, ತೆಲಂಗಾಣ ಜನರ ಮತವು ಕೇವಲ ಶಾಸಕರ ಭವಿಷ್ಯ ನಿರ್ಧರಿಸುವುದಿಲ್ಲ. ದೇಧಸ ಭವಿಷ್ಯವನ್ನು ನಿರ್ಧರಿಸುತ್ತದೆ. ಪ್ರತಿಯೊಂದು ಪಕ್ಷಗಳ ಕೆಲಸಗಳನ್ನು ವಿವರಿಸಿಯೇ ನಾವು ಮತ ಕೇಳುತ್ತಿದ್ದೇವೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮತ ನೀಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ಮುಂದುವರಿದ ರೆಡ್ಡಿ ಸಹೋದರರ ಮುನಿಸು – ಸಹೋದರನ ಪುತ್ರನ ಮದುವೆಗೆ ಜನಾರ್ದನ ರೆಡ್ಡಿ ಗೈರು

ಬಿಆರ್‌ಎಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಸಂವಿಧಾನವು ಯಾರಿಗೂ ವಿಶೇಷ ಕೊಡುಗೆ ನೀಡಲು ಅವಕಾಶ ನೀಡುವುದಿಲ್ಲ. ಧಾರ್ಮಿಕ ಮೀಸಲಾತಿಯನ್ನು ಕೆಸಿಆರ್ ನೀಡಿದ್ದಾರೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಇರುವ 4% ಮೀಸಲಾತಿಯನ್ನೂ ನಿಷೇಧಿಸುತ್ತೇವೆ. ಅದನ್ನು ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗದ ಜನರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Bengaluru HAL – ತೇಜಸ್‌ ಫೈಟರ್‌ಜೆಟ್‌ನಲ್ಲಿ ಹಾರಾಟ ನಡೆಸಿ ಗಮನ ಸೆಳೆದ ಮೋದಿ

Share This Article