ಹಲಾಲ್ ಪ್ರಮಾಣೀಕೃತ ಏಜೆನ್ಸಿಗಳ ನಿಷೇಧಕ್ಕೆ ಆಗ್ರಹ – ಕೇಂದ್ರಕ್ಕೆ ಶಾಸಕ ಯತ್ನಾಳ್‌ ಪತ್ರ

Public TV
1 Min Read
Basanagouda Patil Yatnal 1

ವಿಜಯಪುರ: ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ (Uttar Pradesh) ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರವು ಹಲಾಲ್ (Halal) ಟ್ಯಾಗ್ ಹೊಂದಿರುವ ಆಹಾರ ಉತ್ಪನ್ನಗಳನ್ನ ನಿಷೇಧಿಸಿದೆ. ಈ ಬೆನ್ನಲ್ಲೇ ಹಲಾಲ್‌ ಪ್ರಮಾಣೀಕರಿಸುವ ಏಜೆನ್ಸಿಗಳನ್ನ ನಿಷೇಧಿಸುವಂತೆ ಆಗ್ರಹಿಸಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

HALAL 2

ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪಿಯೂಷ್ ಗೋಯಲ್ (Piyush Goyal) ಅವರಿಗೆ ಶಾಸಕ ಯತ್ನಾಳ್ ಪತ್ರ ಬರೆದಿದ್ದಾರೆ. ಪತ್ರದಲ್ಲಿ ದೇಶಾದ್ಯಂತ ಹಲಾಲ್ ಸರ್ಟಿಫಿಕೇಟ್ ನೀಡುವ ಏಜೆನ್ಸಿಗಳನ್ನ ನಿಷೇಧಿಸಬೇಕು. ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾ ಬೆಂಬಲಿಸಿದ್ದ ಗೀರ್ಟ್ ವೈಲ್ಡರ್ಸ್‌ಗೆ ಚುನಾವಣೆಯಲ್ಲಿ ಗೆಲುವು – ನೆದರ್ಲೆಂಡ್ಸ್ ಪ್ರಧಾನಿಯಾಗಲು ಸಜ್ಜು

halal meat

ಹಲಾಲ್ ಇಂಡಿಯಾ, ಜಮಿಯತ್ ಉಲೇಮಾ-ಐ-ಹಿಂದ್ ಹಲಾಲ್‌ ಟ್ರಸ್ಟ್, ಗ್ಲೋಬಲ್ ಇಸ್ಲಾಮಿಕ್ ಶರಿಯಾ, ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹಲಾಲ್ ಸರ್ಟಿಫಿಕೇಟ್ ಸರ್ವಿಸ್ ಇಂಡಿಯಾ ಪ್ರೈ. ಲಿ., ಜಮಿಯತ್ ಉಲಮಾ-ಇ-ಮಹಾರಾಷ್ಟ್ರ ಏಜೆನ್ಸಿಗಳನ್ನ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾಜಕಾರಣ ಯಾವ್ದೇ ಮನೆತನಕ್ಕೆ ಸಿಮೀತವಲ್ಲ – ವಿಜಯೇಂದ್ರ ಆಯ್ಕೆಗೆ ಸೋಮಣ್ಣ ಅಸಮಾಧಾನ

uttar pradesh halal

ಮುಸ್ಲಿಂ (Muslims) ಗ್ರಾಹಕರನ್ನ ಸೆಳೆಯಲು ಹಲಾಲ್‌ ಪ್ರಮಾಣೀಕರಣ ನಡೆದಿದೆ. ಇದು ನಮ್ಮ ಸಂವಿಧಾನದ ತತ್ವಾದರ್ಶ, ಜಾತ್ಯತೀತ ಆದರ್ಶಗಳಿಗೆ ವಿರುದ್ಧವಾಗಿದೆ. ಹಲಾಲ್‌ ಸರ್ಟಿಫಿಕೇಟ್ ನಿಂದ ಬಂದ ಹಣವನ್ನ ಭಯೋತ್ಪಾದಕ ಚಟುವಟಿಕೆ, ಜಿಹಾದ್, ಭಯೋತ್ಪಾದಕರಿಗೆ ಕಾನೂನು ನೆರವು ನೀಡಲು ಬಳಕೆ ಮಾಡಲಾಗ್ತಿದೆ ಎಂದು ಪತ್ರದಲ್ಲಿ ಗಂಭೀರ ವಿಚಾರಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ.

ತಕ್ಷಣವೇ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಪಿಯೂಷ್ ಗೋಯಲ್‌ ಅವರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: 60ಕ್ಕೂ ಹೆಚ್ಚುಬಾರಿ ಯುವಕನ ಕತ್ತು ಕೊಯ್ದು ಕೊಲೆ; ಹೆಣದ ಮೇಲೆ ಕುಣಿದು ವಿಕೃತಿ – 16ರ ಹುಡುಗ ಅರೆಸ್ಟ್‌

Share This Article