ಕಲ್ಲಿದ್ದಲು ಕಳ್ಳತನ ಕೇಸ್‌ – ಇದ್ದ ಮೂವರಲ್ಲಿ ಕಳ್ಳ ಯಾರು? ವೈಟಿಪಿಎಸ್ ಅಧಿಕಾರಿಗಳು ಹೇಳೋದು ಏನು?

Public TV
2 Min Read
Raichuru Coal theft case YTPS 1

ರಾಯಚೂರು: ಇದ್ದ ಮೂವರಲ್ಲಿ ಕದ್ದವರು ಯಾರು ಎನ್ನುವಂತೆ ರಾಯಚೂರಿನ ಕಲ್ಲಿದ್ದಲು ಕಳ್ಳಾಟ ಪ್ರಕರಣ (Coal Theft Case) ತಿರುವು ಪಡೆಯುತ್ತಿದೆ. ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಸರ್ಕಾರ (Karnataka Government) ಸಮಗ್ರ ತನಿಖೆಗೆ ಮುಂದಾಗಿದೆ. ಈ ವೇಳೆ ವೈಟಿಪಿಎಸ್ ಅಧಿಕಾರಿಗಳು (YTPS official) ಹೊಸ ವರಸೆ ಆರಂಭಿಸಿದ್ದಾರೆ.

Raichuru Coal theft case YTPS 2

ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರ ವೈಟಿಪಿಎಸ್‌ಗೆ ಸೇರಿದ ಗುಣಮಟ್ಟದ ಕಲ್ಲಿದ್ದಲು ಕಳ್ಳಾಟದ ಬಗ್ಗೆ ಮಂಗಳವಾರ ಪಬ್ಲಿಕ್ ಟಿವಿ ಬಿಗ್ ಎಕ್ಸ್‌ಪೋಸ್‌ ಮಾಡಿತ್ತು. ಇಂಧನ ಸಚಿವ ಕೆಜೆ ಜಾರ್ಜ್‌ (KJ George) ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ ಕಲ್ಲಿದ್ದಲು ಕಳ್ಳಾಟದ ನಿಜವಾದ ಕಳ್ಳರು ಯಾರು ಅನ್ನೋದು ಸಮಗ್ರ ತನಿಖೆಯ ಬಳಿಕವೇ ಬಯಲಾಗಬೇಕಿದೆ. ಇದನ್ನೂ ಓದಿ: ಪ.ಬಂಗಾಳದಲ್ಲಿ ರಿಲಯನ್ಸ್‌ನಿಂದ 20 ಸಾವಿರ ಕೋಟಿ ರೂ. ಹೂಡಿಕೆ: ಅಂಬಾನಿ ಘೋಷಣೆ

ವೈಟಿಪಿಎಸ್‌ನ ಅಧಿಕಾರಿಗಳು ಹಾಗೂ ಅಲ್ಲಿನ ಕಲ್ಲಿದ್ದಲು ನಿರ್ವಹಣಾ ಏಜೆನ್ಸಿ, ರೈಲ್ವೇ ಗುತ್ತಿಗೆದಾರ, ರೈಲ್ವೇ ಇಲಾಖೆ ಅಧಿಕಾರಿಗಳು ಎಲ್ಲರ ಪಾತ್ರಗಳು ಇಲ್ಲಿ ಮೇಲ್ನೋಟಕ್ಕೆ ಅನುಮಾನ ಮೂಡಿಸಿವೆ.  ಇದನ್ನೂ ಓದಿ: ವಿದ್ಯುತ್ ಕೊರತೆ ಮಧ್ಯೆ ಕಲ್ಲಿದ್ದಲು ಕಳ್ಳಾಟ – ಕಳ್ಳರ ಪಾಲಾಗುತ್ತಿದೆ ಟನ್‌ಗಟ್ಟಲೇ ಕಲ್ಲಿದ್ದಲು

Raichuru Coal theft case

ನಮ್ಮಲ್ಲಿ ಕಲ್ಲಿದ್ದಲು ಸಂಪೂರ್ಣ ಡಂಪ್ ಆಗುತ್ತದೆ. ಖಾಲಿ ವ್ಯಾಗನ್‌ಗಳಲ್ಲಿ ಗುಣಮಟ್ಟದ ಕಲ್ಲಿದ್ದಲು ಸಿಗಲು ಸಾಧ್ಯವೇ ಇಲ್ಲ. ರೈಲ್ವೇ ಇಲಾಖೆ ನಮ್ಮ ಗಮನಕ್ಕೆ ತಾರದೇ ಗುತ್ತಿಗೆ ನೀಡಿದ್ದು ಅನುಮಾನ ಮೂಡಿಸಿದೆ ಅಂತ ಆರೋಪಕ್ಕೆ ಮುಂದಾಗಿದ್ದಾರೆ. ಅಲ್ಲದೇ ಕಲ್ಲಿದ್ದಲು ತುಂಬಿದ ವ್ಯಾಗನ್‌ಗಳಿಂದಲೇ ಕಲ್ಲಿದ್ದಲು ಕದಿಯುತ್ತಿರುವ ಸಂಶಯವನ್ನು ವ್ಯಕ್ತಪಡಿಸಿ ತಾವು ಪಾರಾಗಲು ವೈಟಿಪಿಎಸ್‌ ಅಧಿಕಾರಿಗಳು ಮುಂದಾಗಿದ್ದಾರೆ.  ಇದನ್ನೂ ಓದಿ: PUBLiC TV Impact ನೂರಾರು ಟನ್‌ ಕಲ್ಲಿದ್ದಲು ಕಳ್ಳತನ – ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಶಾಕ್‌, ತನಿಖೆಗೆ ಆದೇಶ

ಕೆಪಿಸಿ ಕೇಂದ್ರ ಕಚೇರಿಯಿಂದಲೂ ರೈಲ್ವೇ ಇಲಾಖೆಗೆ (Indian Railways) ಟೆಂಡರ್ ಕುರಿತು ಸಮಜಾಯಿಷಿ ನೀಡುವಂತೆ ಪತ್ರ ಬರೆಯಲು ಮುಂದಾಗಿದ್ದಾರೆ ಎಂಬ ಮಾಹಿತಿ ಈಗ ಲಭ್ಯವಾಗಿದೆ. ತಮ್ಮ ಮೇಲೆ ಬಂದ ಆರೋಪವನ್ನು ಬೇರೆಡೆ ಸುಲಭವಾಗಿ ಎತ್ತಿಹಾಕಲು ವೈಟಿಪಿಎಸ್ ಅಧಿಕಾರಿಗಳು ಮುಂದಾದಂತೆ ಮೇಲ್ನೋಟಕ್ಕೆ ಕಾಣುತ್ತಿದೆ.  ಇದನ್ನೂ ಓದಿ: ಬೆಂಗ್ಳೂರಿನ ಅರ್ಧದಷ್ಟು ಇಂದಿರಾ ಕ್ಯಾಂಟೀನ್‍ಗಳಲ್ಲಿ ಸಿಗ್ತಿಲ್ಲ ಇಡ್ಲಿ!

 

ರೈಲ್ವೇ ಇಲಾಖೆ ಅಧಿಕಾರಿಗಳು ಹಾಗೂ ಖಾಲಿ ವ್ಯಾಗನ್ ಸ್ವಚ್ಚತೆ ಗುತ್ತಿಗೆ ಪಡೆದ ಗುತ್ತಿಗೆದಾರರು ಕೂಡ ಕಲ್ಲಿದ್ದಲು ಕಳ್ಳಾಟದಲ್ಲಿ ಭಾಗಿದಾರರೇ ಎಂಬ ಅನುಮಾನಕ್ಕೂ ಪುಷ್ಠಿ ಸಿಕ್ಕಿದೆ. ವಿದ್ಯುತ್ ಕೇಂದ್ರಕ್ಕೆ ಮಾಹಿತಿ ನೀಡದೇ ಕಲ್ಲಿದ್ದಲು ಸಾಗಣೆ, ಸಂಗ್ರಹ, ಮಾರಾಟಕ್ಕೆ ಗುತ್ತಿಗೆ ನೀಡಿದ್ದು ಒಂದೆಡೆಯಾದರೆ ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿ ರೈಲ್ವೇ ನಿಲ್ದಾಣ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸದೇ ಕಲ್ಲಿದ್ದಲು ಸಾಗಿಸುತ್ತಿರುವುದು ಸಹ ಅನುಮಾನಕ್ಕೆ ಕಾರಣವಾಗಿದೆ.

ವಿದ್ಯುತ್ ಕೇಂದ್ರದ ಕಲ್ಲಿದ್ದಲು ಮೇಲೆ ಟೆಂಡರ್ ಹೆಸರಲ್ಲಿ ರೈಲ್ವೇ ಇಲಾಖೆ ಅಧಿಕಾರಿಗಳು ಕಣ್ಣು ಹಾಕಿದ್ದಾರಾ? ತಮ್ಮ ಮೇಲಿನ ಆರೋಪದಿಂದ ಪಾರಾಗಲು ವೈಟಿಪಿಎಸ್ ರೈಲ್ವೇ ಇಲಾಖೆ ಮೇಲೆ ಗೂಬೆ ಕೂರಿಸಲು ಮುಂದಾಗಿದ್ಯಾ? ಸಿಕ್ಕಷ್ಟು ಕಲ್ಲಿದ್ದಲು ಬಾಚಿಕೊಂಡು ಸಂಗ್ರಹಿಸುತ್ತಿರುವ ಗುತ್ತಿಗೆದಾರ ತಪ್ಪಿತಸ್ಥನಲ್ವೇ ಈ ಎಲ್ಲಾ ಪ್ರಶ್ನೆಗಳು ಈಗ ಎದ್ದಿದೆ. ಈ ವ್ಯವಸ್ಥಿತ ಕಳ್ಳಾಟದಲ್ಲಿ ಯಾರೆಲ್ಲಾ ಭಾಗಿದಾರರು ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆದು ಸರ್ಕಾರ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.

Share This Article