ಹಿಂದೂ ಧರ್ಮಕ್ಕೆ ಸೇರ್ಪಡೆಯಾದ ರಷ್ಯನ್ ಪ್ರಜೆಗಳು – ಅಂಜನಾದ್ರಿಯಲ್ಲಿ ದೀಪಾವಳಿ ಆಚರಣೆ ಇಲ್ಲದ್ದಕ್ಕೆ ಬೇಸರ

Public TV
1 Min Read
KOPPAL RUSSIAN CITIZENS

ಕೊಪ್ಪಳ: ಭಾರತೀಯ ಸಂಸ್ಕೃತಿಯನ್ನು (Indian Culture) ಮೆಚ್ಚಿ ರಷ್ಯಾ (Russia) ಮೂಲದ ಪ್ರಜೆಗಳು ಹಿಂದೂ ಧರ್ಮಕ್ಕೆ (Hinduism) ಸೇರ್ಪಡೆಗೊಂಡಿದ್ದಾರೆ. ಮಾತ್ರವಲ್ಲದೇ ಹಿಂದೂ ಧರ್ಮದ ಹೆಸರಿಟ್ಟುಕೊಂಡು ಹನುಮನ ನಾಡು ಕೊಪ್ಪಳಕ್ಕೆ (Koppal) ಭೇಟಿ ನೀಡಿದ್ದಾರೆ.

ರಷ್ಯನ್ ಪ್ರಜೆಗಳಾದ ಮೀನಾಕ್ಷಿಗಿರಿ, ಗಂಗಾ ಹಾಗೂ ಸರಸ್ವತಿ ಹಿಂದೂ ಧರ್ಮಕ್ಕೆ ಸೇರ್ಪಡೆಯಾದ ಪ್ರಜೆಗಳು. ಈ ಮೂವರು ಖಾವಿ ಧರಿಸಿ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಅದೇ ರೀತಿ ಕೊಪ್ಪಳ ಜಿಲ್ಲೆಯ ಹನುಮನ ಜನ್ಮ ಸ್ಥಳ ಅಂಜನಾದ್ರಿಗೆ (Anjanadri) ಬಂದು ದರ್ಶನ ಪಡೆದಿದ್ದಾರೆ. ಇವರು ಹಂಪಿ-ಆನೆಗೊಂದಿ, ಅಂಜನಾದ್ರಿ ಸೇರಿದಂತೆ ದೇಶದ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ ಸೇತುವೆ ಉದ್ಘಾಟಿಸಿದ ಆದಿತ್ಯ ಠಾಕ್ರೆ ವಿರುದ್ಧ ದೂರು

ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭ ಪುರಾಣ ಪವಿತ್ರ ಸ್ಥಳದಲ್ಲಿ ದೀಪ ಹಚ್ಚಲು ಆಗಲ್ವಾ ಎಂದು ಕರ್ನಾಟಕ ಸರ್ಕಾರದ ಮೇಲೆ ವಿದೇಶಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೂ ಧರ್ಮ ಸ್ವೀಕರಿಸಿ ಕೊಪ್ಪಳದ ಅಂಜನಾದ್ರಿ ಪರ್ವತಕ್ಕೆ ಬಂದ ರಷ್ಯನ್ ಪ್ರಜೆಗಳು ದೇಶದಲ್ಲಿ ಎಲ್ಲಾ ಕಡೆ ದೀಪಾವಳಿ (Deepavali) ನಡೆಯುತ್ತಿದೆ. ಪುಣ್ಯಭೂಮಿಯಲ್ಲಿ ಬೆಳಕಿಲ್ಲ. ಹನುಮನ ಜನ್ಮ ಸ್ಥಳದಲ್ಲಿ ದೀಪಾವಳಿ ಆಚರಣೆ ಇಲ್ಲವೆಂದು ಅಸಮಾಧಾನಗೊಂಡಿದ್ದಾರೆ. ಇದನ್ನೂ ಓದಿ: ಶಮಿ ತವರಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾದ ಯೋಗಿ ಸರ್ಕಾರ

ಭಕ್ತರಿಂದ ಕೋಟಿಗಟ್ಟಲೆ ಆದಾಯ ಪಡೆದರೂ ಸರ್ಕಾರ ಯಾಕಿಷ್ಟು ನಿರ್ಲಕ್ಷ್ಯ ತೋರುತ್ತಿದೆ. ಇದು ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಆಂಜನೇಯ ದೇವಸ್ಥಾನ. ಸನಾತನ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ತಲೆ ಎತ್ತಲಿದೆ ಮತ್ತೊಂದು ಸಸ್ಯಕಾಶಿ – ಡಿಕೆಶಿಗೆ ಪ್ರಸ್ತಾವನೆ ಸಲ್ಲಿಕೆ

Share This Article