ಒಟಿಟಿಗೆ ಎಂಟ್ರಿ ಕೊಡ್ತಿದೆ ಶಿವಣ್ಣನ ‘ಘೋಸ್ಟ್’

Public TV
1 Min Read
shivaraj kumar 1

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್- ಶ್ರೀನಿ ಜೋಡಿಯ ‘ಘೋಸ್ಟ್’ (Ghost Film) ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಅಕ್ಟೋಬರ್ 19ರಂದು ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ತೆರೆಕಂಡಿತ್ತು. ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿರುವ ಘೋಸ್ಟ್ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ.

shivarajkumar actorಶಿವರಾಜ್‌ಕುಮಾರ್ (Shivarajkumar) ‘ಘೋಸ್ಟ್’ ಸಿನಿಮಾ ಓಟಿಟಿಗೆ ಲಗ್ಗೆ ಇಡುವುದಕ್ಕೆ ರೆಡಿಯಾಗಿದೆ. ಜೀ5ನಲ್ಲಿ ನವೆಂಬರ್ 17ರಿಂದ ಪ್ರಸಾರ ಆಗಲಿದೆ. ಈ ಸಂಬಂಧ ಸ್ಪೆಷಲ್ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಇಲಿಯೊಂದು ಬಾಯಲ್ಲಿ ಚೀಟಿ ಹಿಡಿದು ಬಂದಿದೆ. ಅದನ್ನು ಅದು ಶಿವಣ್ಣನ ಕೈಗೆ ಇಟ್ಟಿದೆ. ಆ ಚೀಟಿಯ ಹಿಂಭಾಗದಲ್ಲಿ ಬೆಂಕಿ ಹಿಡಿದು ಶಿವರಾಜ್ ಕುಮಾರ್ ಅವರು ನೋಡಿದಾಗ ಅದರಲ್ಲಿ ಒಂದು ಮೆಸೇಜ್ ಕಂಡಿದೆ. ಅದನ್ನು ನೋಡಿ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಿದ್ದಾರೆ. ಇದನ್ನೂ ಓದಿ:ಎರಡೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದ ಟೈಗರ್ 3

shivarajkumarಅಷ್ಟಕ್ಕೂ ಆ ಮೆಸೇಜ್ ಏನೆಂದರೆ, ಘೋಸ್ಟ್ ಚಿತ್ರವು ಜೀ-5ನಲ್ಲಿ ನವೆಂಬರ್ 17ರಿಂದ ನೋಡಬಹುದು ಎಂಬ ಮೆಸೇಜ್ ಕೊಟ್ಟಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ‘ಘೋಸ್ಟ್’ ಸಿನಿಮಾ ನಿರ್ಮಾಣಗೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಿದೆ.

ಅನುಪಮ್ ಕೇರ್ (Anupam Kher), ಜಯರಾಂ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇನ್ನು ಚಿತ್ರದಲ್ಲಿ ನಾಯಕಿ ಇಲ್ಲ. ಅಂದಹಾಗೆ ಶ್ರೀನಿ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಯಾಂಗ್ ಸ್ಟರ್ ಆಗಿ ಅಬ್ಬರಿಸಿರುವ ಶಿವಣ್ಣನ ‘ಘೋಸ್ಟ್’ ಸಿನಿಮಾವನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಜೀ5 ಒಟಿಟಿಯಲ್ಲಿ ನೋಡಬಹುದು.

Share This Article