ಬಿಗ್ ಬಾಸ್ ಮನೆಯಿಂದ ವರ್ತೂರು ನಾಪತ್ತೆ?

Public TV
1 Min Read
Varthuru Santhosh 1

ನಿನ್ನೆಯಿಂದ ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ವರ್ತೂರು ಸಂತೋಷರದ್ದೇ (Varthur Santhosh) ಮಾತು. ನಾಮಿನೇಟ್ ಪ್ರಕ್ರಿಯೆ ಇಂದ ಸಂತೋಷ್ ಸೇಫ್ ಅಂತ ಕಿಚ್ಚ ಪ್ರಕಟಿಸಿದ ಮೇಲೂ, ಈ ಮನೆಯಲ್ಲಿ ಇರೋಕೆ ಆಗ್ತಿಲ್ಲ ಅಂತ ಸಂತೋಷ್ ಕಣ್ಣೀರಿಟ್ಟರು. ಅದಕ್ಕೆ ತಮ್ಮದೇ ಆದ ಕಾರಣವನ್ನೂ ಕೊಟ್ಟರು. ಆದರೂ, ಅವರನ್ನ ಮನವೊಲಿಸೋ ಪ್ರಯತ್ನ ಮಾಡಲಾಯಿತು. ಯಾವುದಕ್ಕೂ ಜಗ್ಗಲಿಲ್ಲ ಆಸಾಮಿ.

varthur santhosh 4

ಬೆಳಗ್ಗೆಯಿಂದ ಬಿಗ್ ಬಾಸ್ ಮನೆಯಲ್ಲಿ ಹೈಡ್ರಾಮಾಗಳು ನಡೆದವು. ಬೆಳ್ಳಂಬೆಳಗ್ಗೆ ಖ್ಯಾತ ಕಿರುತೆರೆ ನಟಿ ಸುಷ್ಮಾ ರಾವ್ ದೊಡ್ಮನೆ ಪ್ರವೇಶ ಮಾಡಿದರು. ಸಂತೋಷ್ ಜೊತೆ ಹಲವು ಹೊತ್ತು ಮಾತಾಡಿದರು. ನನ್ನ ಮಾತು ಕೇಳು, ಚೆನ್ನಾಗಿ ಇಲ್ಲೇ ಆಟ ಆಡು. ಆಚೆ ಹೋಗೋ ಮಾತು ಬೇಡ ಅಂದರು. ಅವರ ಮಾತೂ ಕೇಳದಾದರೂ ಸಂತೋಷ್. ಮನೆಮಂದಿ ಮತ್ತೊಂದು ಸುತ್ತಿನ ಮನವೊಲಿಸೋ ಕಾರ್ಯ ಮಾಡಿದರು. ತುಕಾಲಿ ಅಂತೂ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ನಿನ್ನ ಕಾಲು ಹಿಡ್ಕೋತೀನಿ, ಮನೆಬಿಟ್ಟು ಹೋಗಬೇಡ. ಅಂದರು, ಅದಕ್ಕೂ ಒಪ್ಪಲಿಲ್ಲ ಸಂತೋಷ್. ಇದನ್ನೂ ಓದಿ:ಅವಳಿ ಮಕ್ಕಳ ಜೊತೆ ಅಮೂಲ್ಯ ದೀಪಾವಳಿ ಸೆಲೆಬ್ರೇಶನ್

Varthuru Santhosh 2

ಅಲ್ಲಿಗೆ ಸಂತೋಷ್ ಆ ಮನೆಯಲ್ಲಿ ಇರಲಾರ, ಎನ್ನುವುದು ಪಕ್ಕಾ ಆಗಿ ಹೋಯಿತು. ಅಷ್ಟರಲ್ಲಿ ಬಿಗ್ ಬಾಸ್ ಮನೆಗೆ ಸಂತೋಷ್ ಅವರ ತಾಯಿ ಬಂದರು. ಮಗ ಇದೊಂದು ಮಾತು ಕೇಳಲೇಬೇಕು. ನೀನು ಇಲ್ಲೇ ಇದ್ದು ಗೆದ್ದು ಬರಬೇಕು ಎಂದು ಮಗನಿಗೆ ಧೈರ್ಯ ತುಂಬಿದರು. ಬಹುಶಃ ಅದು ಆದಂತೆ ಕಾಣುತ್ತಿಲ್ಲ. ಮಧ್ಯಾಹ್ನದಿಂದ ಸಂತೋಷ್ ಮನೆಯೊಳಗೆ ಕಾಣುತ್ತಿಲ್ಲ.

ಹೌದು, ಜಿಯೋ ಸಿನಿಮಾ ಬಿಗ್ ಬಾಸ್ ಮನೆಯ ಚಟುವಟಿಕೆಗಳನ್ನು 24 ಗಂಟೆ ಪ್ರಸಾರ ಮಾಡುತ್ತೆ. ಮಧ್ಯಾಹ್ನದಿಂದ ಎಲ್ಲರನ್ನೂ ತೋರಿಸಲಾಗಿದೆ. ಆದರೆ, ವರ್ತೂರು ಸಂತೋಷ್ ಮಾತ್ರ ಮಿಸ್ ಆಗಿದ್ದಾರೆ. ಹಾಗಾದರೆ, ಸಂತೋಷ್ ಮನೆಯಲ್ಲಿ ಇಲ್ಲವಾ? ಇದ್ದರೂ ಅವರನ್ನು ತೋರಿಸ್ತಿಲ್ಲವಾ? ಏನಾಯಿತು ಸಂತೋಷಗೆ? ಗೊತ್ತಿಲ್ಲ. ಅವರನ್ನು ತೋರಿಸದೇ ಇರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಂದಿನ ಸಂಚಿಕೆಯಲ್ಲಿ ಸತ್ಯ ಹೊರಬೀಳಬಹುದು.

Share This Article