ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ (Virat Kohli) ಹಾಗೂ ಪತ್ನಿ ಅನುಷ್ಕಾ ಶರ್ಮಾ (Anushka Sharma) ಸದ್ಯ ಸುದ್ದಿಯಲ್ಲಿದ್ದಾರೆ. ನೆದರ್ಲೆಂಡ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಕೊಹ್ಲಿ ಬರೋಬ್ಬರಿ 9 ವರ್ಷಗಳ ಬಳಿಕ ಬೌಲಿಂಗ್‌ನಲ್ಲಿ ವಿಕೆಟ್ ಕಿತ್ತು, ಮಿಂಚಿದ್ದಾರೆ. ವಿರಾಟ್ ಶತಕ ಮಿಸ್ ಮಾಡಿಕೊಂಡಿದ್ದಕ್ಕೆ ಬೇಸರಗೊಂಡಿದ್ದ ಅನುಷ್ಕಾ ಬೌಲಿಂಗ್‌ನಲ್ಲಿ ಕೊಹ್ಲಿ ವಿಕೆಟ್ ಉರುಳಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ್ದಾರೆ.
The celebration of Virat Kohli and Anushka Sharma. pic.twitter.com/blgPB9ciql
— Mufaddal Vohra (@mufaddal_vohra) November 12, 2023
ಅಷ್ಟೇ ಅಲ್ಲದೇ ಜೊತೆಗೆ ಕೊಹ್ಲಿಯನ್ನ ನೋಡಿಕೊಂಡು ಕ್ಯಾಬಿನ್‌ನಲ್ಲಿ ಎರಡೂ ಕೈಗಳನ್ನು ಮೇಲೆತ್ತಿ ಎನರ್ಜಿ ಆಕ್ಷನ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಈ ದೃಶ್ಯ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಫ್ಯಾನ್ಸ್‌ಕೂಡ ಈ ಸೂಪರ್ ಜೋಡಿ ಮೇಲೆ ಯಾರ ಕಣ್ಣು ಬೀಳದಿರಲಪ್ಪ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಶ್ರೇಯಸ್, ರಾಹುಲ್ ಶತಕಗಳ ಬೊಂಬಾಟ್ ಬ್ಯಾಟಿಂಗ್ – ಡಚ್ಚರಿಗೆ 411 ರನ್‌ಗಳ ಕಠಿಣ ಗುರಿ
2016ರ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ಒಂದು ವಿಕೆಟ್ ಪಡೆದಿದ್ದರು. ಭಾನುವಾರ ನೆದರ್ಲೆಂಡ್ಸ್ (Netherlands) ವಿರುದ್ಧದ ಪಂದ್ಯದಲ್ಲಿ 25ನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದ ಕೊಹ್ಲಿ ಮೊದಲ ಎಸೆತದಲ್ಲೇ ನಾಯಕ ಸ್ಕಾಟ್ ಎಡ್ವರ್ಡ್ಸ್ ವಿಕೆಟ್ ಕಬಳಿಸಿದರು. ಕೊಹ್ಲಿ ಲೆಗ್‌ಸೈಟ್ ಬೌಲಿಂಗ್ ಮಾಡಿದ್ದರಿಂದ ಅದು ವೈಡ್ ಆಗುವ ಸಾಧ್ಯತೆಗಳಿತ್ತು. ಆದ್ರೆ ಎಡ್ವರ್ಡ್ಸ್ ಅದನ್ನು ಬೌಂಡರಿಗಟ್ಟುವ ಪ್ರಯತ್ನ ಮಾಡಿ ಔಟಾದರು. ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್ (International Wicket) ಪಡೆಯುತ್ತಿದ್ದಂತೆ ಸಂತಸ ತಡೆಯಲಾರದೇ ಅನುಷ್ಕಾ ಶರ್ಮಾ ಸ್ಟೇಡಿಯಂನಲ್ಲೇ ಕುಣಿದು ಕುಪ್ಪಳಿಸಿದರು. ಈ ಸನ್ನಿವೇಶ ಕೊಹ್ಲಿ ದಂಪತಿಗಳಲ್ಲಿ ಮಾತ್ರವಲ್ಲದೇ ಅಭಿಮಾನಿಗಳನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.
ಒಟ್ಟು 3 ಓವರ್ ಬೌಲಿಂಗ್ ಮಾಡಿದ ಕೊಹ್ಲಿ ಕೇವಲ 13 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ಸಾಮಾನ್ಯವಾಗಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಹೆಚ್ಚು ರನ್‌ಗಳಿಸಿ, ಅಧಿಕ ರನ್‌ಗಳ ಅಂತರದಲ್ಲಿ ಗೆಲ್ಲುವ ಸಾಧ್ಯತೆಗಳಿದ್ದಾಗ, ಬ್ಯಾಟ್ಸ್‌ಮ್ಯಾನ್‌ಗಳಿಗೆ ಬೌಲಿಂಗ್ ಮಾಡುವ ಅವಕಾಶ ಮಾಡಿಕೊಡುತ್ತಾರೆ. ಇದನ್ನೂ ಓದಿ: ವೇಗದ ಶತಕ ಸಿಡಿಸಿ ಹಿಟ್‌ಮ್ಯಾನ್ ದಾಖಲೆ ಮುರಿದ ಕನ್ನಡಿಗ; ಟಾಪ್-10 ದಿಗ್ಗಜರ ಪಟ್ಟಿ ಸೇರಿದ ರಾಹುಲ್
ಇದಕ್ಕೂ ಮುನ್ನ ವಿಶ್ವಕಪ್ 2023ರ ಕೊನೆಯ ಲೀಗ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ 51 ರನ್ ಗಳಿಸಿ ಔಟಾದರು. ಈ ಸಂದರ್ಭದಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಶಾಕ್ ಆಗಿ, ಬೇಸರ ಹೊರಹಾಕಿದ ದೃಶ್ಯವೂ ಕಂಡುಬಂದಿತು. ಟೀಂ ಇಂಡಿಯಾ ಇನ್ನಿಂಗ್ಸ್‌ನ 29ನೇ ಓವರ್‌ನಲ್ಲಿ ನೆದರ್ಲೆಂಡ್ಸ್’ನ ಎಡಗೈ ಸ್ಪಿನ್ನರ್ ರೋಲೋಫ್ ವ್ಯಾನ್ ಡೆರ್ ಮೆರ್ವೆ ವಿರಾಟ್ ಕೊಹ್ಲಿಯನ್ನು ಬೌಲ್ಡ್ ಮಾಡಿದರು. ವಿರಾಟ್ ಕೊಹ್ಲಿ ಬೌಲ್ಡ್ ಆಗಿದ್ದೇ ತಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೇರಿದ್ದ ಫ್ಯಾನ್ಸ್ ಒಂದು ಬಾರಿ ಶಾಕ್‌ಗೆ ಒಳಗಾಗಿದ್ದರು. ಅನುಷ್ಕಾ ಸಹ ಶತಕ ಮಿಸ್ ಮಾಡಿಕೊಂಡಿದ್ದಕ್ಕೆ ಬೇಸರಗೊಂಡಿದ್ದರು.