ಬೆಂಗಳೂರು: ಸಿಕ್ಸ್ ಹೊಡಿಯೋದ್ರಲ್ಲೂ ಟೀಂ ಇಂಡಿಯಾ (Team India) ದಾಖಲೆ ಮಾಡಿದೆ. ಒಂದೇ ವರ್ಷ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆಯನ್ನು ಟೀಂ ಇಂಡಿಯಾ ತನ್ನ ಹೆಸರಿಗೆ ಬರೆದುಕೊಂಡಿದೆ.
2023ರಲ್ಲಿ ಇದುವರೆಗೆ ನಡೆದ 30 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ 215 ಸಿಕ್ಸ್ ಬಾರಿಸಿದೆ. ಈ ಹಿಂದೆ ಈ ದಾಖಲೆ ವೆಸ್ಟ್ ಇಂಡೀಸ್ (West Indies) ತಂಡದ ಹೆಸರಲ್ಲಿತ್ತು. 2019ನೇ ವರ್ಷದಲ್ಲಿ ವೆಸ್ಟ್ ಇಂಡೀಸ್ 209 ಸಿಕ್ಸರ್ ಗಳೇ ಇದುವರೆಗಿನ ಒಂದು ವರ್ಷದ ಅತ್ಯಧಿಕ ಸಿಕ್ಸರ್ ದಾಖಲೆಯಾಗಿತ್ತು. ಇದನ್ನೂ ಓದಿ: ಶ್ರೇಯಸ್, ರಾಹುಲ್ ಶತಕಗಳ ಬೊಂಬಾಟ್ ಬ್ಯಾಟಿಂಗ್ – ಡಚ್ಚರಿಗೆ 411 ರನ್‌ಗಳ ಕಠಿಣ ಗುರಿ
ಭಾರತ ತಂಡ 2023ನೇ ವರ್ಷದ ಪ್ರಥಮ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ (South Africa) 2ನೇ ಸ್ಥಾನದಲ್ಲಿದೆ. ಈ ವರ್ಷ 21 ಪಂದ್ಯವನ್ನಾಡಿರುವ ದಕ್ಷಿಣ ಆಫ್ರಿಕಾ ಈವರೆಗೆ 203 ಸಿಕ್ಸ್ ಬಾರಿಸಿದೆ. ಇದನ್ನೂ ಓದಿ: ವೇಗದ ಶತಕ ಸಿಡಿಸಿ ಹಿಟ್‌ಮ್ಯಾನ್ ದಾಖಲೆ ಮುರಿದ ಕನ್ನಡಿಗ; ಟಾಪ್-10 ದಿಗ್ಗಜರ ಪಟ್ಟಿ ಸೇರಿದ ರಾಹುಲ್
3ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದ್ದು, 20 ಪಂದ್ಯಗಳಲ್ಲಿ 165 ಸಿಕ್ಸರ್ ಬಾರಿಸಿದೆ. ಇದನ್ನೂ ಓದಿ: ಪಾಕ್ ಕೆಲವು ಬದಲಾವಣೆ ಮಾಡಿಕೊಂಡರೆ ಟೀಂ ಇಂಡಿಯಾದಂತೆ ಬಲಿಷ್ಠವಾಗುತ್ತೆ: ಗಂಗೂಲಿ