ಕುಮಾರಸ್ವಾಮಿಗೆ ಬಡವರು, ಹೆಣ್ಣುಮಕ್ಕಳ ನೋವು ಗೊತ್ತಿಲ್ಲ: ಡಿಕೆಶಿ ಕಿಡಿ

Public TV
2 Min Read
DK Shivakumar

ಬೆಂಗಳೂರು: ಬಡವರು, ಹೆಣ್ಣುಮಕ್ಕಳ ನೋವು ಕುಮಾರಸ್ವಾಮಿಗೆ (HD Kumaraswamy) ಗೊತ್ತಿಲ್ಲ. ಅವರು ಖುಷಿಯಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ. ದಸರಾಗೆ ಬಂದಿದ್ದ ಜನರು ನೋಡಿದ್ರೆ ಗೊತ್ತಾಗುತ್ತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೊದಲು ಡಿಸಿಎಂ ಅವರು ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು. ಬಳಿಕ ಗ್ಯಾರಂಟಿ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು. ಕುಮಾರಸ್ವಾಮಿಗೂ ಗ್ಯಾರಂಟಿಗಳಿಗೆ ಏನು ಸಂಬಂಧ..?. ನಮ್ಮ ಗ್ಯಾರಂಟಿ ಬಗ್ಗೆ ಕುಮಾರಸ್ವಾಮಿಗೆ ಏನು ಗೊತ್ತಿದೆ?. ಅವರೇನು ಫಲಾನುಭವಿನಾ..?. ಅವರ ಪಂಚರತ್ನ ಯೋಜನೆ ಇಂಪ್ಲಿಮೆಂಟ್ ಮಾಡಲು ಆಗಲಿಲ್ಲ. ಜನರಿಗೆ ತಲುಪಿದೇಯೋ ಇಲ್ಲ ಅಂತ ಮತದಾರರ ಕೇಳಬೇಕು. ನಾನು ಚನ್ನಪಟ್ಟಣ ಮತದಾರರ ಜೊತೆ ನಾನೇ ಮಾತನಾಡಿದ್ದೇನೆ. ಅವರನ್ನು ಕೇಳಿದ್ರೆ ಕುಮಾರಸ್ವಾಮಿಗೆ ಗೊತ್ತಾಗುತ್ತೆ. 5% ಮಾತ್ರ ಗೃಹಲಕ್ಷ್ಮೀ ತೊಂದರೆ ಆಗಿದೆ ಎಂದರು.

DK SHIVAKUMAR
ಪಾಪ ಅವರು ಮಾತನಾಡುತ್ತಿದ್ದಾರೆ ಮಾತನಾಡಲಿ. ಬಡವರು, ಹೆಣ್ಣುಮಕ್ಕಳ ನೋವು ಗೊತ್ತಿಲ್ಲ. ಖುಷಿಯಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ. ದಸರಾಗೆ ಬಂದಿದ್ದ ಜನರು ನೋಡಿದ್ರೆ ಗೋತ್ತಾಗುತ್ತೆ. ಕುಮಾರಸ್ವಾಮಿ ಬಹಳ ಅಜೆರ್ಂಟ್ ಅಲ್ಲಿ ಇದ್ದಾರೆ. ಸುಮ್ಮನೆ ಸಚಿವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತೆಲಂಗಾಣದಲ್ಲಿ ವಿದ್ಯುತ್ ಘೋಷಣೆ; ಇಲ್ಲಿ ಮಹದೇವಪ್ಪನಿಗೂ ಕತ್ತಲು, ಕಾಕಾ ಪಾಟೀಲ್‌ಗೂ ಕತ್ತಲು – ಹೆಚ್‌ಡಿಕೆ ಕಿಡಿ

ತೆಲಂಗಾಣ ಚುನಾವಣೆಯಲ್ಲಿ ಆರು ಭರವಸೆ ನೀಡಿದ್ದೇವೆ. ಈ ಬಾರಿ ಕಾಂಗ್ರೆಸ್ಸಿಗೆ ಅಧಿಕಾರ ನೀಡಬೇಕು. ತೆಲಂಗಾಣ ಜನರು ತೀರ್ಮಾನ ಮಾಡಿದ್ದಾರೆ. ಡಿಸೆಂಬರ್ 9 ತೆಲಂಗಾಣ ರಾಜ್ಯ ನಿರ್ಮಾನವಾದ ದಿನ. ಸೋನಿಯಾ ಗಾಂಧಿ ರಾಜ್ಯ ನಿರ್ಮಾಣ ಮಾಡಿದರು. ಅವತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ತಿಳಿಸಿದರು.

ಸಿಎಂಗೆ ಹೈಕಮಾಂಡ್ ನೋಟಿಸ್ ಮೇಲೆ ಇಟ್ಟಿದೆ ಎಂಬ ಕುಮಾರಸ್ವಾಮಿ ಆರೋಪದ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ಸಿಗೂ ಕುಮಾರಸ್ವಾಮಿಗೆ ಏನ್ ಸಂಬಂಧ ರಿ..? ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದಾರೆ. ಹೈಕಮಾಂಡ್ ಒನ್ ಲೈನ್ ರೆಸ್ಯೂಲೆಶನ್ ಮಾಡಿದೆ. ಹೈ ಕಮಾಂಡ್ ಸಿಎಂ ಸ್ಥಾನ ನೀಡಿದೆ.ಹೈಕಮಾಂಡ್ ಏನ್ ಹೇಳುತ್ತದೆ. ಅದನ್ನು ನಾವು ಪಾಲಿಸುತ್ತೇವೆ ಎಂದರು.

ವಿಜಯೇಂದ್ರ ಬಿಜೆಪಿ ರಾಜ್ಯಧ್ಯಕ್ಷರಾಗಿದ್ದಾರೆ. ವಿಜಯೇಂದ್ರಗೆ ಒಳ್ಳೆಯದಾಗಲಿ ಹಾಗೆಯೇ ಕುಮಾರಸ್ವಾಮಿಗೂ ಒಳ್ಳೆಯದಾಗಲಿ ಎಂದು ಹೇಳಿದರು.

Share This Article