ಡ್ರೋನ್ ಪ್ರತಾಪ್ (Drone Prathap) ಅವರು ದೊಡ್ಮನೆಗೆ ಕಾಲಿಡುವ ಮುನ್ನ ಜನರಿಗೆ ಇದ್ದ ಅಭಿಪ್ರಾಯವೇ ಬೇರೆಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆದ ಬಳಿಕ ಪ್ರತಾಪ್ ಮೇಲೆ ಜನರಿಗೆ ನಂಬಿಕೆ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಬಿಗ್ ಬಾಸ್‌ಗೆ (Bigg Boss Kannada 10) ಬಂದ ಮೇಲೆ ಡ್ರೋನ್ ಪ್ರತಾಪ್ ಅವರು ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಇನ್ನೂ ದೊಡ್ಮನೆಯಲ್ಲಿ ಪ್ರತಾಪ್, ಬುದ್ಧಿವಂತ ಎಂದು ತಿಳಿದ ಮೇಲೆ ಅವರ ಜೊತೆ ಫ್ರೆಂಡ್‌ಶಿಪ್ ಮಾಡಿಕೊಳ್ಳಲು ತುಕಾಲಿ ಸಂತೂ, ವರ್ತೂರು ಸಂತೋಷ್, ವಿನಯ್, ಸ್ನೇಹಿತ್ ಮುಂದಾಗಿದ್ದಾರೆ.
ಸಂತೋಷ್‌ಗೆ ಮನೆಯ ಒಳಗೆ ಇರುವ ಸ್ಪರ್ಧಿಗಳ ಬಗ್ಗೆ ಜನರಿಗೆ ಯಾವ ರೀತಿಯ ಅಭಿಪ್ರಾಯ ಇದೆ ಅನ್ನೋದು ಅವರಿಗೆ ತಿಳಿದಿದೆ. ಹೀಗಾಗಿ, ದೊಡ್ಮನೆ ಒಳಗೆ ಬಂದ ಅವರು ವಿನಯ್ & ಟೀಮ್‌ನಿಂದ ದೂರಯುಳಿದಿದ್ದಾರೆ. ತುಕಾಲಿ ಸಂತೂ ಬಳಿ ಸಂತೋಷ್ ಹೋಗಿ ಪ್ರತಾಪ್ ಜೊತೆ ಸೇರಿಕೊಳ್ಳೋಕೆ ಅವರು ಸೂಚಿಸಿದ್ದಾರೆ. ವಿನಯ್-ಕಾರ್ತಿಕ್ ಕಿತ್ತಾಡುತ್ತಿದ್ದರು. ಆದರೆ, ಈಗ ಅವರಿಬ್ಬರೂ ಒಂದಾಗಿದ್ದಾರೆ. ಪ್ರತಾಪ್ ಜೊತೆ ಸೇರಿಕೊಂಡರೆ ನಿನಗೆ ಸಹಾಯ ಆಗುತ್ತದೆ ಎಂದಿದ್ದಾರೆ ವರ್ತೂರು ಸಂತೋಷ್. ಈ ಮಾತನ್ನು ತುಕಾಲಿ ಸಂತೂ ಗಂಭೀರವಾಗಿ ಪರಿಗಣಿಸಿದ್ದಾರೆ. ಇದನ್ನೂ ಓದಿ:Bigg Boss: ‘ಗೆಲ್ಲೋ ಕುದುರೆ’ ವಿನಯ್ ಎಂದ ನೀತುಗೆ ಮೈಕಲ್ ಠಕ್ಕರ್
ಈ ಕಾರಣಕ್ಕೆ ತುಕಾಲಿ ಸಂತೂ (Tukali Santhosh) ಅವರು ಪ್ರತಾಪ್ ಬಳಿ ರಾಜಿಗೆ ಪ್ರಯತ್ನಿಸಿದ್ದಾರೆ. ನನ್ನ ನಿನ್ನ ಕೆಮಿಸ್ಟ್ರಿ ಮೊದಲಿನಿಂದಲೂ ಚೆನ್ನಾಗಿದೆ. ನಿನ್ನ ವಿಚಾರ ಮಾತನಾಡದೇ ಮೂರು ವಾರ ಆಗಿದೆ. ನಿನ್ನ ಕಣ್ಣಲ್ಲಿ ನನ್ನ ಮೇಲೆ ಇರುವ ಪ್ರೀತಿ ಕಾಣುತ್ತದೆ. ನೀನು ನಾನು ಕನೆಕ್ಟ್ ಆದರೆ ಕಾಮಿಡಿ ಆಗುತ್ತದೆ ಎಂದು ತುಕಾಲಿ ಸಂತೂ ಹೇಳಿದ್ದಾರೆ.
ಅವರ ಮಾತಿಗೆ ಪ್ರತಾಪ್, ಊಸರವಳ್ಳಿ ಎಂಬ ಸ್ಥಾನವನ್ನ ಟಾಸ್ಕ್‌ವೊಂದರಲ್ಲಿ ನೀವು ನನಗೆ ಕೊಟ್ರಿ ಅಲ್ವಾ ಎಂದು ಸಂತೂಗೆ ತಿರುಗೇಟು ನೀಡಿದ್ದಾರೆ. ಅಲ್ಲಿಗೆ ಸಂತೂ ಬೀಸಿದ ಗಾಳಕ್ಕೆ ಬೀಳದೇ ಪ್ರತಾಪ್ ಎಚ್ಚೆತ್ತುಕೊಂಡಿದ್ದಾರೆ.