ಕೊಹ್ಲಿ 35ನೇ ಹುಟ್ಟುಹಬ್ಬಕ್ಕೆ ಚಿನ್ನದ ಬ್ಯಾಟ್ ಗಿಫ್ಟ್ ಕೊಟ್ಟ ಕ್ರಿಕೆಟ್ ಮಂಡಳಿ

Public TV
1 Min Read
VIRAT KOHLI

ಕೋಲ್ಕತ್ತಾ: ಇಂಡಿಯನ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರ 35ನೇ ಹುಟ್ಟುಹಬ್ಬದಂದು ಬೆಂಗಾಲ್ ಕ್ರಿಕೆಟ್ ಮಂಡಳಿಯು (CAB) ಚಿನ್ನದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದೆ.

ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ (Sourav Ganguly) ಸಹೋದರ, ಸಿಎಬಿ ಮಂಡಳಿಯ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ (Snehasish Ganguly) ಅವರು ಕೊಹ್ಲಿಗೆ ಈ ಗಿಫ್ಟ್ ಅನ್ನು ಹಸ್ತಾಂತರ ಮಾಡಿದರು. ಈ ಚಿನ್ನದ ಬ್ಯಾಟಿನ ಮೇಲೆ ‘ಹ್ಯಾಪಿ ಬರ್ತ್ ಡೇ ವಿರಾಟ್’ ಎಂದು ವಿಶ್ ಮಾಡಲಾಗಿದೆ. ಅದರ ಕೆಳಗೆ ‘ನೀವು ಸಮರ್ಪಣೆಯ ಸಂಕೇತವಾಗಿದ್ದೀರಿ. ಅಲ್ಲದೆ ವಯಸ್ಸು ಕೇವಲ ನಂಬರ್ ಅಷ್ಟೇ ಎಂಬುದನ್ನು ನೀವು ಪ್ರೂವ್ ಮಾಡಿದ್ದೀರಿ ಎಂಬುದಾಗಿಯೂ ಬರೆಯಲಾಗಿದೆ.

ಭಾನುವಾರ ದಕ್ಷಿಣ ಆಫ್ರಿಕಾದ‌ (South Africa) ವಿರುದ್ಧ ನಡೆದ ಏಕದಿನ ವಿಶ್ವಕಪ್ (World Cup 2023) ಟೂರ್ನಿಯ ಪಂದ್ಯದಲ್ಲಿ ಕೊಹ್ಲಿ 49 ಶತಕ ಸಿಡಿಸಿದ್ದಾರೆ. ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದ್ದರು. 1998 ರಲ್ಲಿ ಸಚಿನ್ ತಮ್ಮ 25ನೇ ಹುಟ್ಟುಹಬ್ಬದಂದು ಈ ಸಾಧನೆ ಮಾಡಿದ್ದರು.

VIRAT KOHLI GIFT

ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 49ನೇ ಶತಕವನ್ನು ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ಬಳಿಕ ಪ್ರತಿಕ್ರಿಯಿಸಿದ್ದ ಕೊಹ್ಲಿ, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ನನ್ನ ಹೀರೋ, ಎಂದಿಗೂ ನಾನು ಅವರಿಗೆ ಸಮನಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 49th Century: ಅಭಿಮಾನಿಗಳ ʻವಿರಾಟೋತ್ಸವʼ – ಮುಗಿಲು ಮುಟ್ಟಿದ ಸಂಭ್ರಮ

ನಾನು ತೆಂಡೂಲ್ಕರ್ ಬ್ಯಾಟಿಂಗ್ ನೋಡುತ್ತಾ ಬೆಳೆದಿದ್ದೇನೆ. ಅವರ ಬ್ಯಾಟಿಂಗ್ ಶೈಲಿ ಅತ್ಯುತ್ತಮವಾದದ್ದು. ನಾನು ಆ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ಏನೇ ಆದರೂ ಸಚಿನ್ ನನ್ನ ನಾಯಕರಾಗಿರುತ್ತಾರೆ. ನಾನು ಎಲ್ಲಿಂದ ಬಂದಿದ್ದೇನೆ ಎಂದು ನನಗೆ ತಿಳಿದಿದೆ ಮತ್ತು ಇಲ್ಲಿ ನಿಂತು ಸಚಿನ್ ಅವರಿಂದ ಮೆಚ್ಚುಗೆಯನ್ನು ಪಡೆಯುವುದು ನನಗೆ ತುಂಬಾ ಖುಷಿಕೊಟ್ಟಿದೆ ಎಂದಿದ್ದಾರೆ.

Share This Article