Bigg Boss Kannada: ವರ್ತೂರು ಸಂತೋಷ್‌ ದೊಡ್ಮನೆ ಎಂಟ್ರಿಗೆ ತಡವೇಕೆ?

Public TV
2 Min Read
varthur santhosh 4

ಹುಲಿ ಉಗುರು ಲಾಕೆಟ್ ಕೇಸ್‌ನಿಂದ (Tiger Claw Pendant) ವರ್ತೂರು ಸಂತೋಷ್‌ಗೆ (Varhtur Santhosh) ಈಗಾಗಲೇ ಜಾಮೀನು ಸಿಕ್ಕಿದೆ. ಆದರೂ ದೊಡ್ಮನೆಗೆ ಸಂತೋಷ್ ಎಂಟ್ರಿ ಕೊಟ್ಟಿಲ್ಲ. ಅಂದುಕೊಂಡಂತೆ ಆಗಿದ್ದರೆ ನಿನ್ನೆಯೇ ವರ್ತೂರು ಸಂತೋಷ್ ಬಿಗ್ ಬಾಸ್ ಮನೆ ಪ್ರವೇಶ ಮಾಡಬೇಕಿತ್ತು. ಜೈಲಿನಿಂದ ಬಿಡುಗಡೆಯಾಗಿ 24 ಗಂಟೆ ಕಳೆದರೂ ಇನ್ನೂ ಸಂತೋಷ್ ದೊಡ್ಮನೆಗೆ ಎಂಟ್ರಿಕೊಟ್ಟಿಲ್ಲ. ಮಾದ್ಯಮದವರಿಂದ ತಪ್ಪಿಸಿಕೊಂಡು ರಾತ್ರೋರಾತ್ರಿ ಹೋದವರು ಯಾಕೆ ಬಿಗ್ ಬಾಸ್ ಮನೆಗೆ (Bigg Boss Kannada 10) ಎಂಟ್ರಿ ಕೊಟ್ಟಿಲ್ಲ ಎನ್ನುವ ಪ್ರಶ್ನೆ ಎಲ್ಲರದ್ದು.

Varthur Santhosh

ಹಾಗಾದರೆ, ಸಂತೋಷ್ ಬಿಗ್ ಬಾಸ್ ಮನೆ(Bigg Boss House) ಪ್ರವೇಶ ಮಾಡೋದಿಲ್ಲವಾ?? ತಡ ಯಾಕೆ ಆಗುತ್ತಿದೆ? ಕಾನೂನು ಸಮಸ್ಯೆ ಏನಾದರು ಎದುರಾಗಿದ್ಯಾ? ಮತ್ತೆ ಮನೆ ಪ್ರವೇಶ ಮಾಡೋಕೆ ಅವರ ಮನಸ್ಥಿತಿ ಚೆನ್ನಾಗಿಲ್ಲವಾ? ಹೀಗೆ ಹತ್ತಾರು ಪ್ರಶ್ನೆಗಳು ಎದುರಾಗಿವೆ. ಯಾವುದೇ ಸಮಸ್ಯೆ ಇಲ್ಲದೇ ಇದ್ದರೆ ಇನ್ನೂ ಯಾಕೆ ಅವರನ್ನು ಮನೆ ಒಳಗೆ ಕಳುಹಿಸಿಲ್ಲ ಎನ್ನುವ ಪ್ರಶ್ನೆ ಮೂಡಿದೆ.

Varthuru Santhosh 1 2

ಶುಕ್ರವಾರ (ಅ.27) ರಾತ್ರಿಯೇ ಬಿಗ್ ಬಾಸ್ ಟೀಮ್ ಸಂತೋಷ್ ಅವರನ್ನ ತಮ್ಮ ವಶಕ್ಕೆ ಪಡೆದಿದ್ದಾರೆ. ಮೆಡಿಕಲ್ ಟೆಸ್ಟ್ ಕೂಡ ಮಾಡಿಸಲಾಗಿದೆ. ಮತ್ತೆ ಬಿಗ್ ಬಾಸ್ ಮನೆಗೆ ಕಳುಹಿಸುತ್ತಿರುವ ಕುರಿತು ಅವರ ಕುಟುಂಬಕ್ಕೂ ಮಾಹಿತಿ ನೀಡಿದೆ. ಆದರೆ, ಜಾಮೀನಿನಲ್ಲಿರುವ ಅಂಶಗಳ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಜಾಮೀನು ಮೇಲೆ ಸಂತೋಷ್ ಜೈಲಿನಿಂದ ಹೊರ ಬಂದಿರುವ ಕಾರಣದಿಂದಾಗಿ ಕಾನೂನು ತಜ್ಞರ ಸಲಹೆ ಪಡೆದುಕೊಳ್ಳಲಾಗುತ್ತಿದೆ.

Varthuru Santhosh 3

ಸಿಕ್ಕಿರುವ ಮಾಹಿತಿ ಪ್ರಕಾರ, ಇಂದು ಸಂತೋಷ್ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಲಿದ್ದಾರೆ. ಇಂದು ಸಂಜೆ ಅವರನ್ನು ಅಧಿಕೃತವಾಗಿ ಎಂಟ್ರಿ ಕೊಡಿಸಲು ಟೀಮ್ ಸಿದ್ಧತೆ ಮಾಡಿಕೊಂಡಿದೆ. ಮತ್ತೆ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಳ್ಳಿಕಾರ್ ದುನಿಯಾ ಇಂದಿನಿಂದ ದೊಡ್ಮನೆಯಲ್ಲಿ ಶುರುವಾಗಲಿದೆ. ಮನೆಯಲ್ಲಿ ಅವರು ಹೇಗಿರಲಿದ್ದಾರೆ ಅನ್ನೋದೋ ಸದ್ಯಕ್ಕಿರೋ ಸಸ್ಪೆನ್ಸ್ ಆಗಿದೆ. ಇದನ್ನೂ ಓದಿ:ಖ್ಯಾತ ಕಬ್ಬಡಿ ಆಟಗಾರ ‘ಅರ್ಜುನ್ ಚಕ್ರವರ್ತಿ’ ಬಯೋಪಿಕ್‌ ಸಿನಿಮಾದ ಫಸ್ಟ್ ಲುಕ್ ಔಟ್

ಬಿಗ್ ಬಾಸ್ ರೂಲ್ಸ್ ಪ್ರಕಾರ ಹೊರಹೊಗುವಂತೆ ಇಲ್ಲ. ಇತರರ ಬಳಿ ಮಾತನಾಡುವಂತಿಲ್ಲ. ಒಂದ್ ವೇಳೆ ಬಿಗ್ ಬಾಸ್ ಮನೆಗೆ ಹೋದರೆ ಜಾಸ್ತಿ ದಿನಗಳ ಉಳಿಯೋದು ಡೌಟ್. ಈ ಎಲ್ಲಾ ಕುತೂಹಲಕ್ಕೂ ಬಿಗ್ ಬಾಸ್ ಶೋನಲ್ಲಿ ಉತ್ತರ ಸಿಗಲಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article