ಅಮೂಲ್ಯ ಮಕ್ಕಳ ಕೊರಳಲ್ಲೂ ಹುಲಿ ಉಗುರು: ನಟಿ ಹೇಳೋದೇನು?

Public TV
1 Min Read
amulya 1

ಟಿ ಅಮೂಲ್ಯ (Amulya) ಅವರ ಇಬ್ಬರು ಮಕ್ಕಳ ಕೊರಳಲ್ಲೂ ಹುಲಿ ಉಗುರಿನ (Tiger Claw) ಪೆಂಡೆಂಟ್ ಇದೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅನೇಕರು ಅಮೂಲ್ಯ ಅವರಿಗೆ ಪ್ರಶ್ನೆ ಮಾಡಿದ್ದರು. ಈ ಕುರಿತಂತೆ ಅಮೂಲ್ಯ ಸ್ಪಷ್ಟನೆ ನೀಡಿದ್ದಾರೆ. ಅವುಗಳು ಅಸಲಿ ಉಗುರುಗಳೇ ಅಲ್ಲ ಎಂದು ಹೇಳಿದ್ದಾರೆ.

amulya

ಮಕ್ಕಳ ನಾಮಕರಣದ ವೇಳೆ ಧರಿಸಿದ್ದ ಪೆಂಡೆಂಟ್ ನಲ್ಲಿಯ ಹುಲಿ ಉಗುರು ಅಸಲಿ ಅಲ್ಲ. ಸಿಂಥೆಟಿಕ್ ಹುಲಿ ಉಗುರು ಅವು. ಅಂತಹ ನಕಲಿ ಉಗುರುಗಳು 500-600ಗೆ ಸಿಗುತ್ತವೆ. ಅರಣ್ಯ ಅಧಿಕಾರಿಗಳು ಪರಿಶೀಲನೆಗೆ ಬಂದರೆ ಖಂಡಿತಾ ಅವುಗಳನ್ನು ನೀಡುತ್ತೇನೆ ಎಂದಿದ್ದಾರೆ ನಟಿ ಅಮೂಲ್ಯ. ಉಗುರುಗಳು ಅಸಲಿಯಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.

amulya 3

ವರ್ತೂರ್ ಸಂತೋಷ್ (Varthur Santhosh) ಬಂಧನವಾಗುತ್ತಿದ್ದಂತೆಯೇ ಹುಲಿ ಉಗುರಿನ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ಸೆಲೆಬ್ರಿಟಿಗಳ ಮೇಲೆ ಸಾಮಾನ್ಯ ಜನರು ಮುಗಿ ಬಿದ್ದಿದ್ದಾರೆ. ಸಿನಿಮಾ ನಟರು, ಸಂನ್ಯಾಸಿಗಳು, ರಾಜಕಾರಣಿಗಳು ಹೀಗೆ ಅನೇಕರು ಹುಲಿ ಉಗುರು ಧರಿಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಸಮರ್ಥನೆಯನ್ನು ಮಾಡುತ್ತಿದ್ದಾರೆ.

 

ವರ್ತೂರ್ ಸಂತೋಷ್ ಮತ್ತು ಅರಣ್ಯಾಧಿಕಾರಿ ದರ್ಶನ್ ಹಾಗೂ ಇಬ್ಬರು ಅರ್ಚಕರನ್ನು ಈವರೆಗೂ ಬಂಧಿಸಲಾಗಿದೆ. ಸಂತೋಷ್ ಗೆ ನಿನ್ನೆ ಜಾಮೀನು ಮಂಜೂರಾಗಿ ಜೈಲಿನಿಂದ ಹೊರ ಬಂದಿದ್ದಾರೆ. ಉಳಿದಂತೆ ಅರಣ್ಯಾಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article