ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಜೋಡಿ ಮಕ್ಕಳನ್ನು ದತ್ತು ಪಡೆಯುವ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ನಟಿ ಪರಿಣಿತಿ (Parineeti Chopra) ಅವರು ತಮ್ಮ ಭವಿಷ್ಯದಲ್ಲಿ ತಾವು ಮಗು ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಬದಲಾಗಿ, ಒಂದಲ್ಲ ಹಲವು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಇಷ್ಟಪಡುತ್ತೇನೆ ಎಂದು ಮಾತನಾಡಿದ್ದಾರೆ. ನಾನು ಬಹಳಷ್ಟು ಮಕ್ಕಳನ್ನು ಹೊಂದಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ದೀಕ್ಷಿತ್ ಶೆಟ್ಟಿಗೆ ‘ಗರ್ಲ್ ಫ್ರೆಂಡ್’ ಆಗ್ತಾರಾ ರಶ್ಮಿಕಾ ಮಂದಣ್ಣ?
ಅಂದ್ಹಾಗೆ, ಅಕ್ಟೋಬರ್ 22ರಂದು ಪರಿಣಿತಿ ಹುಟ್ಟುಹಬ್ಬವಿರೋ ಕಾರಣ ಸ್ಪೆಷಲ್ ಆಗಿ ಪತ್ನಿಗೆ ರಾಘವ್ ವಿಶ್ ಮಾಡಿದ್ದರು. ರಾಘವ್ ಪರಿಣಿತಿಗೆ ವಿಶ್ ಮಾಡಿದ ರೀತಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಮದುವೆಯ ಬಳಿಕ ಅಕ್ಷಯ್ ಕುಮಾರ್ (Akshay Kumar) ಜೊತೆಗಿನ ‘ಮಿಷನ್ ರಾಣಿಗಂಜ್’ ಚಿತ್ರದಲ್ಲಿ ನಾಯಕಿಯಾಗಿ ಪರಿಣಿತಿ ನಟಿಸಿದ್ದರು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]