ಬಿಗ್ ಬಾಸ್ ಮನೆಯಲ್ಲಿ (Bigg Boss House) ಮೊದಲ ವಾರವೇ ಜಗಳ ತಾರಕಕ್ಕೇರಿತ್ತು. ಅದರಲ್ಲಿ ಡ್ರೋನ್ ಪ್ರತಾಪ್‌ಗೆ ರೆಕ್ಕೆ ಪುಕ್ಕ ಕಟ್ ಮಾಡ್ತೀನಿ ಎಂದು ವಿನಯ್ ವಾರ್ನಿಂಗ್ ಕೊಟ್ಟಿದ್ದರು. ಈ ಬಗ್ಗೆ ಕಿಚ್ಚನ ಪಂಚಾಯಿತಿಯಲ್ಲಿ ಕ್ಲ್ಯಾರಿಟಿ ಸಿಗುತ್ತೆ ಎಂದು ಎದುರು ನೋಡುತ್ತಿದ್ದ ವೀಕ್ಷಕರಿಗೆ ನಿರಾಸೆ ಆಗಿದೆ. ಸುದೀಪ್ (Sudeep) ಅವರು ಯಾಕೆ ಇದರ ಬಗ್ಗೆ ಮಾತನಾಡಲಿಲ್ಲ ಎಂದು ತಲೆ ಕೆಡಿಸಿಕೊಂಡಿದ್ದಾರೆ.
ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ – ಡ್ರೋನ್ ಪ್ರತಾಪ್ (Drone Prathap) ನಡುವಿನ ಕಿತ್ತಾಟ ಭಾರೀ ಸೌಂಡ್ ಮಾಡಿತ್ತು. ಬಾತ್‌ರೂಮ್ ಏರಿಯಾದಲ್ಲಿ ವಿನಯ್ ಗೌಡ ಏನು ಹೇಳಿದ್ರು ಅನ್ನೋದನ್ನ ವೀಕ್ಷಕರಿಗೆ ತೋರಿಸಿಲ್ಲ. ಆದರೆ, ಅಡುಗೆಯನ್ನ ಅಸಮರ್ಥರು ಹೈಜೀನ್ ಆಗಿ, ಕ್ಲೀನ್ ಆಗಿ ಮಾಡುತ್ತಿಲ್ಲ ಎಂಬರ್ಥದಲ್ಲೇ ವಿನಯ್ (Vinay Gowda) ಟಾಂಗ್ ಕೊಟ್ಟರು ಅಂತ ಡ್ರೋನ್ ಪ್ರತಾಪ್ ಒತ್ತಿ ಒತ್ತಿ ಹೇಳಿದ್ದರು.
ನಾನು ಹಾಗೇ ಹೇಳೇ ಇಲ್ಲ. ನನ್ನ ಮಗನ ಮೇಲೆ ಆಣೆ. ನಾನು ತಿನ್ನುವ ಅನ್ನದ ಮೇಲಾಣೆ ಅಂತೆಲ್ಲಾ ವಿನಯ್ ಗೌಡ ಆಣೆ – ಪ್ರಮಾಣ ಮಾಡಿದ್ದರು. ಕಿಚ್ಚ ಸುದೀಪ್ ಸರ್ ಬರುತ್ತಾರಲ್ವಾ ಅವರ ಮುಂದೆಯೇ ಕೇಳಿಸ್ತೀನಿ ಅಂತ್ಹೇಳಿ ವಾಕ್ಸಮರಕ್ಕೆ ಡ್ರೋನ್ ಪ್ರತಾಪ್ ಫುಲ್ ಸ್ಟಾಪ್ ಹಾಕಿದ್ದರು. ಇದನ್ನೂ ಓದಿ:ರೆಡ್ ಡ್ರೆಸ್‌ನಲ್ಲಿ ಮಾದಕ ಪೋಸ್ ಕೊಟ್ಟ ‘ಅರ್ಜುನ್ ರೆಡ್ಡಿ’ ನಟಿ
ಪಂಚಾಯತಿ ಸಂಚಿಕೆಯಲ್ಲಿ ಈ ಟಾಪಿಕ್‌ಗೆ ಕಿಚ್ಚ ಸುದೀಪ್ ಕ್ಲಾರಿಟಿ ಕೊಡ್ತಾರೆ ಅಂತಲೇ ವೀಕ್ಷಕರು ಭಾವಿಸಿದ್ದರು. ಮೊದಲೇ ಎಲ್ಲವೂ ಕ್ಲೀನ್ ಆಗಿರಬೇಕು ಎಂದು ಬಯಸುವ ವಿನಯ್ ಅಡುಗೆ ಮಾಡುವಾಗ ಅಸಮರ್ಥರ ಹೈಜೀನ್ ಬಗ್ಗೆ ಪ್ರಶ್ನೆ ಮಾಡಿದ್ರಾ, ಇಲ್ವಾ? ಡ್ರೋನ್ ಪ್ರತಾಪ್ ಹೇಳಿದ್ದು ಸುಳ್ಳಾ, ಸತ್ಯನಾ? ಎಂಬುದರ ಬಗ್ಗೆ ವೀಕ್ಷಕರಿಗೂ ಸ್ಪಷ್ಟನೆ ಬೇಕಿತ್ತು. ಆದರೆ, ಈ ಟಾಪಿಕ್‌ನ ಸುದೀಪ್ ಟಚ್ ಮಾಡಲೇ ಇಲ್ಲ. ಸ್ಪರ್ಧಿಗಳ ಬಾಯಿಂದಲೂ ಈ ವಿಚಾರ ಹೊರಗೆ ಬರಲೇ ಇಲ್ಲ. ಇದು ವೀಕ್ಷಕರಿಗೆ ಬೇಸರ ಮೂಡಿಸಿದೆ. ಡ್ರೋನ್ ಪ್ರತಾಪ್- ತುಕಾಲಿ ಸಂತೂ ವಿಚಾರಕ್ಕೆ ಕಿಚ್ಚ ಪಾಠ ಮಾಡಿದಂತೆ ವಿನಯ್ ವಿಚಾರಕ್ಕೆ ಸ್ಪಷ್ಟನೆ ಸಿಗುತ್ತೆ ಎಂದು ಭಾವಿಸಿದ್ದರು.
ವಾರಾಂತ್ಯದ ಕಿಚ್ಚನ ಜೊತೆಗಿನ ಮಾತುಕತೆಯಲ್ಲಿ ಉತ್ತಮವಾಗಿ ಕಾಂಪಿಟ್ ಮಾಡಿದ ಸ್ಪರ್ಧಿಗೆ ಕಿಚ್ಚನ ಚಪ್ಪಾಳೆ ಸಿಗುತ್ತಿತ್ತು. ಮೊದಲ ವಾರ ಸಂಗೀತಾ, ನಮ್ರತಾ ಗೌಡ ಸಿಗಲಿದೆ ಎಂದು ಸ್ಪರ್ಧಿಗಳು ಭಾವಿಸಿದ್ದರು. ಇದು ಕೂಡ ವೀಕ್ಷಕರಿಗೆ ಬೇಸರ ತರಿಸಿದೆ. ಮುಂದಿನ ವಾರ ಈ ಬಗ್ಗೆ ಮತ್ತೆ ಬದಲಾವಣೆ ಆಗುತ್ತಾ? ಕಾದುನೋಡಬೇಕಿದೆ.