Hi Nanna ಟೀಸರ್‌ ಔಟ್- ಅಪ್ಪ ಮಗಳ ಬಾಂಧವ್ಯದ ಜೊತೆಗೊಂದು ಪ್ರೀತಿಯ ಪಯಣ

Public TV
1 Min Read
nani

ನ್ಯಾಚುರಲ್ ಸ್ಟಾರ್ ನಾನಿ (Nani) ನಟಿಸುತ್ತಿರುವ 30ನೇ ಸಿನಿಮಾ ಹಾಯ್ ನಾನ್ನ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಚಿತ್ರದ ಹಾಡು ಭಾರೀ ಸದ್ದು ಮಾಡಿತ್ತು. ಇದೀಗ ಟೀಸರ್ ಅನಾವರಣಗೊಂಡಿದೆ. ತಂದೆ- ಮಗಳ ಬಾಂಧವ್ಯದ ಜೊತೆಗೆ ಪ್ರೀತಿ ಕಥಾಹಂದರವೇ ಟೀಸರ್‌ನ ಹೈಲೆಟ್. ತಾಯಿ ಇಲ್ಲದ ಮಗಳಿಗೆ ಅಪ್ಪನೇ ಸರ್ವಸ್ವ. ಅಪ್ಪನಿಗೆ ಮಗಳೇ ಜೀವ. ಈ ಚೆಂದದ ಕುಟುಂಬಕ್ಕೆ ಎಂಟ್ರಿಯಾಗುವ ನಾಯಕಿ. ಆ ನಂತರ ಏನಾಗುತ್ತದೆ ಅನ್ನೋದೇ ಟೀಸರ್ ಹೈಲೆಟ್ಸ್.

nani

ನಾನಿ- ಮೃಣಾಲ್ ಠಾಕೂರ್ (Mrunal Thakur) ಜೋಡಿಯಾಗಿ ನಟಿಸಿದ್ದಾರೆ. ಹಾಯ್ ನಾನ್ನ ಸಿನಿಮಾಗೆ ಯುವ ನಿರ್ದೇಶಕ ಶೌರ್ಯುವ್ ಆ್ಯಕ್ಷನ್ ಕಟ್ ಹೇಳಿದ್ದು, ನಿರ್ದೇಶಕನಾಗಿ ಇದು ಇವರ ಮೊದಲ ಚಿತ್ರವಾಗಿದೆ. ಅಪ್ಪನಾಗಿ ನಾನಿ, ಮಗಳಾಗಿ ಬೇಬಿ ಕಿಯಾರಾ ಖಾನ್ ನಟಿಸಿದ್ದಾರೆ.

nani 1ಮೋಹನ್ ಚೆರುಕುರಿ, ಮೂರ್ತಿ ಕಲಗಾರ, ಡಾ. ವಿಜೇಂದ್ರ ರೆಡ್ಡಿ ಅವರ ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಸಾನೂ ಜಾನ್ ವರ್ಗೀಸ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ. ‘ಹೃದಯಂ’ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ. ಸಂಕಲನದ ಜವಾಬ್ದಾರಿಯನ್ನು ಪ್ರವೀಣ್ ಆಂಥೋನಿ ಅವರು ನಿಭಾಯಿಸುತ್ತಿದ್ದಾರೆ. ಡಿಸೆಂಬರ್ 7ಕ್ಕೆ 5 ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಇದನ್ನೂ ಓದಿ:ಆಕ್ಟರ್‌ ಆಗಿರೋ ಶ್ರೀಲೀಲಾ ಮೆಡಿಕಲ್‌ ಓದಿದ್ದೇಕೆ ಗೊತ್ತಾ? ಇಲ್ಲಿದೆ ಸೀಕ್ರೆಟ್

‘ಸೀತಾರಾಮಂ’ (Seetharamam) ಸುಂದರಿ ಮೃಣಾಲ್ ಮೊದಲ ಬಾರಿಗೆ ನಾನಿಗೆ ಜೋಡಿಯಾಗಿ ನಟಿಸಿದ್ದಾರೆ. ಈ ನಯಾ ಜೋಡಿ ತೆರೆಯ ಮೇಲೆ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತೆ ಕಾದುನೋಡಬೇಕಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article