IT Raid In Bengaluru: 42 ಕೋಟಿ ಹಣ ಸಿಕ್ಕಿದ್ದು ಅಂಬಿಕಾಪತಿ ಮಗಳ ನಿವಾಸದಲ್ಲಿ!

Public TV
1 Min Read
AMBIKAPATHI

ಬೆಂಗಳೂರು: ಸಿಲಿಕಾನ್ ಸಿಟಿಯ ಇತಿಹಾಸದಲ್ಲಿಯೇ ಅತೀ ದೊಡ್ಡ ಐಟಿ (Income Tax) ದಾಳಿಯಾಗಿದ್ದು, ಅಧಿಕಾರಿಗಳಿಗೆ ಬರೋಬ್ಬರಿ 42 ಕೋಟಿ ರೂ. ಸಿಕ್ಕಿದೆ. ಈ ಹಣ ಸಿಕ್ಕಿದ್ದು ಬಿಬಿಎಂಪಿ (BBMP) ಗುತ್ತಿಗಾರರ ಸಂಘದ ಅಧ್ಯಕ್ಷ ಆರ್. ಅಂಬಿಕಾಪತಿ (R. Ambikapathy) ಮಗಳ ನಿವಾಸದಲ್ಲಿ.

ಹೌದು. ಅಂಬಿಕಾಪತಿಗೆ ಇಬ್ಬರು ಹೆಣ್ಮಕ್ಕಳಿದ್ದಾರೆ. ಇದೀಗ ಓರ್ವ ಮಗಳು ದಿವ್ಯಾ (Divya) ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಕಂತೆ ಕಂತೆ ಹಣ ಸಿಕ್ಕಿದೆ ಎಂಬ ಮಾಹಿತಿ ಲಭಿಸಿದೆ. ಮಾನ್ಯತಾ ಟೆಕ್ ಪಾರ್ಕ್‍ನಲ್ಲಿರುವ ಮನೆ ಮೇಲೆ ಗುರುವಾರ ಮಧ್ಯರಾತ್ರಿಯೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಲ್ವರು ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಅಂಬಿಕಾಪತಿ ಕಳೆದ ಜನವರಿಯಲ್ಲಿ ಕಾವಲ್ ಬೈಸಂದ್ರದ ಗಣೇಶ ಬ್ಲಾಕ್‍ನಲ್ಲಿರುವ (Ganesha Block) ಮನೆ ಖಾಲಿ ಮಾಡಿದ್ದರು. ಬಳಿಕ ಇತ್ತೀಚೆಗಷ್ಟೇ ಕುಟುಂಬ ಮಾನ್ಯತಾ ಪಾರ್ಕ್‍ಗೆ (Manyatha Park) ಶಿಫ್ಟ್ ಆಗಿತ್ತು. ಅಲ್ಲಿ ಅವರು ನಾಲ್ಕು ವರ್ಷದ ಹಿಂದೆ ದಾಳಿಯಾದ ಬಿಲ್ಡಿಂಗ್ ಖರೀದಿಸಿದ್ದರು. ಕೆಳಗಿರುವ ಮನೆಯನ್ನ ಬಾಡಿಗೆ ನೀಡಿ ಮೊದಲ ಅಂತಸ್ತಿನ ಮನೆಯಲ್ಲಿ ಕುಟುಂಬ ವಾಸವಿತ್ತು. ಜನವರಿಯಲ್ಲಿ ಮೇಲಿನ ಮನೆ ಖಾಲಿ ಮಾಡಿರುವ ಅಂಬಿಕಾಪತಿ ಖಾಲಿ ಮನೆಗೆ ಗಾಗ ಬಂದು ಹೋಗುತ್ತಿದ್ದರು.

ಅಂಬಿಕಾಪತಿ ಹೊಸ ಮನೆಗೆ ಶಿಫ್ಟ್ ಆದರೂ ಹಳೆಯ ಮನೆಯಲ್ಲೇ ಎಲ್ಲಾ ವ್ಯವಹಾರ ನಡೆಸುತ್ತಿದ್ದರು. ಕಾವಲ್ ಬೈರಸಂದ್ರದ ಗಣೇಶ್ ಬ್ಲಾಕ್‍ನ ಹಳೆ ಮನೆಯಲ್ಲೇ ಆಗಾಗ ಮೀಟಿಂಗ್‍ಗಳು ನಡೆಯುತ್ತಿತ್ತು. ಈ ಮೂಲಕ ಹೊಸ ಮನೆಗೆ ಶಿಫ್ಟ್ ಆದ ಬಳಿಕವೂ ಕಛೇರಿ ರೀತಿಯಲ್ಲಿ ಹಳೆ ಮನೆ ಬಳಕೆ ಮಾಡುತ್ತಿದ್ದರು. ಇದೇ ಮನೆಯಲ್ಲಿ ಕೆಲ ಪತ್ರ ವ್ಯವಹಾರ, ಹಣ ಸಾಗಣೆ ಸೇರಿದಂತೆ ಕೆಲ ಅವ್ಯವಹಾರ ನಡೆದಿರೋ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ಅಂಬಿಕಾಪತಿ ಆಗಾಗ ಹಳೆ ಮನೆಗೆ ಕೆಲ ಆಪ್ತರೊಂದಿಗೆ ಭೇಟಿ ನೀಡುತ್ತಿದ್ದರು. ಸದ್ಯ ಹಳೆ ಮನೆಯಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ಮುಂದವರಿಸಿದ್ದಾರೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article