ಕನ್ನಡದ ನಟಿ ಶ್ರೀಲೀಲಾ (Sreeleela) ಟಾಲಿವುಡ್‌ನಲ್ಲಿ ಬಹುಬೇಡಿಕೆಯ ಹೀರೋಯಿನ್ ಆಗಿ ಹೈಲೆಟ್ ಆಗಿದ್ದಾರೆ. ಸದ್ಯ ಬಾಲಯ್ಯ (Balayya) ಜೊತೆಗೆ ನಟಿಸಿದ ‘ಭಗವಂತ ಕೇಸರಿ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಟ್ರೈಲರ್ ಲಾಂಚ್ ಈವೆಂಟ್‌ನಲ್ಲಿ ಶ್ರೀಲೀಲಾ ಭಾವುಕರಾಗಿದ್ದಾರೆ.
‘ಭಗವಂತ ಕೇಸರಿ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರೋ ಶ್ರೀಲೀಲಾ, ಸಿನಿಮಾ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ನಾನು ಹಳ್ಳಿ ಹುಡುಗಿಯಾಗಿ ನಟಿಸಿದ್ದೇನೆ. ಅನಿಲ್ ರವಿಪುಡಿ ನನಗೆ ಅಂತಹ ಸೋಲ್ ಕನೆಕ್ಟ್ ಆಗುವ ಪಾತ್ರ ಕೊಟ್ಟಿದ್ದಾರೆ. ಈ ಪಾತ್ರ ನೀಡಿದಕ್ಕೆ ತುಂಬಾ ಧನ್ಯವಾದಗಳು. ನಾನು ಸಾಕಷ್ಟು ಚಿತ್ರಗಳಲ್ಲಿ ನಟಿಸಿದರೂ ಆದರೆ ಈ ಚಿತ್ರದ ಪಾತ್ರ ನನಗೆ ಹೆಚ್ಚಾಗಿ ಕನೆಕ್ಟ್ ಆಗಿದೆ. ದಿನಗಳು ಕಳೆದಂತೆ ನಾನು ಆ ಪಾತ್ರವೇ ಆಗಿ ಬದಲಾದೆ. ತುಂಬಾ ಸುಂದರವಾಗಿ ಚಿತ್ರೀಕರಿಸಿದ್ದಾರೆ ಎಂದು ಶ್ರೀಲೀಲಾ ಮಾತನಾಡಿದ್ದಾರೆ.
ಬಾಲಕೃಷ್ಣ ಅವರೊಟ್ಟಿಗೆ ನನಗೆ ಭಾವನಾತ್ಮಕ ಸನ್ನಿವೇಶಗಳಿವೆ. ಅವರೊಟ್ಟಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವ. ಈ ಚಿತ್ರದಲ್ಲಿ ಕೆಲವು ದೃಶ್ಯಗಳಲ್ಲಿ ನಟಿಸುವಾಗ ಕಟ್ ಹೇಳಿದರೂ ಅದೇ ಮೂಡ್‌ನಲ್ಲಿ ಇರುತ್ತಿದ್ದೆ. ತಕ್ಷಣವೇ ಹೊರಗೆ ಬರಲು ಆಗುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಅವರು ನನ್ನನ್ನು ನಗುವಂತೆ ಮಾಡಿ ನನ್ನನ್ನು ಸಹಜ ಸ್ಥಿತಿ ತರುತ್ತಿದ್ದರು. ಬಾಲಕೃಷ್ಣ ಅವರ ಬೆಂಬಲ ಮರೆಯುವುದಿಲ್ಲ ಎಂದು ಶ್ರೀಲೀಲಾ ಹೇಳಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ಪ್ರದೀಪ್ ಈಶ್ವರ್ : ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ
ಚಿತ್ರದಲ್ಲಿ ಸಾಕಷ್ಟು ಒಳ್ಳೆಯ ದೃಶ್ಯಗಳಿವೆ. ನಿಜ ಜೀವನದಲ್ಲಿ ನಡೆಯುತ್ತಿರುವ ಘಟನೆ ಹಾಗೂ ತಂದೆಯ ಅನುಪಸ್ಥಿತಿಯನ್ನು ನೆನಪಿಸಿಕೊಂಡು ವೇದಿಕೆ ಮೇಲೆ ನಟಿ ಭಾವುಕರಾಗಿದ್ದಾರೆ.
ಬಾಲಯ್ಯ- ಕಾಜಲ್ (Kajal) ಜೋಡಿಯಾಗಿ ನಟಿಸಿದ್ದರೆ, ಶ್ರೀಲೀಲಾ ಅವರ ಮಗಳಾಗಿ ನಟಿಸಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]