ನಮ್ಮ ಮೆಟ್ರೋದಲ್ಲಿ ಪ್ರಾಂಕ್ ಮಾಡಿದವನಿಗೆ ಬಿತ್ತು 500 ರೂ. ದಂಡ!

Public TV
1 Min Read
YOUTUBER

ಬೆಂಗಳೂರು: ರೀಲ್ಸ್ ಹೆಸ್ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹುಚ್ಚಾಟ ಮೆರೆಯುವವರ ಸಂಖ್ಯೆ ಹೆಚ್ಚಾಗ್ತಿದೆ. ಅಂತೆಯೇ ನಮ್ಮ ಮೆಟ್ರೋದಲ್ಲಿ (Namma Metro) ಪ್ರಾಂಕ್ ಮಾಡಲು ಹೋದ ಯುವಕನಿಗೆ ಈಗ ದಂಡ ಬಿದ್ದಿದೆ.

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್ ಒಬ್ಬ ಪ್ರಾಂಕ್  ವೀಡಿಯೋ (Prank Video) ಮಾಡಿ ಪ್ರಯಾಣಿಕರನ್ನು ಗಾಬರಿಗೊಳಿಸಿದ್ದಾನೆ. ಚಲಿಸ್ತಿರೋ ಮೆಟ್ರೋದಲ್ಲಿ, ಎಸ್ಕಲೇಟರ್ ಮೇಲೆ ಫಿಟ್ಸ್ ಬಂದಂತೆ ವರ್ತಿಸಿದ್ದಾನೆ. ಈ ವೀಡಿಯೋ ಹುಚ್ಚಾಟದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಪ್ರಾಂಕ್ ಮಾಡಿದ ಯುವಕನ ವಿಳಾಸವನ್ನ ಪತ್ತೆ ಹಚ್ಚಿದ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್ ಲಿಮಿಟೆಡ್ (BMRCL) ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಾಂಕ್ ಪ್ರಜ್ಜು ಮೇಲೆ ದೂರು ದಾಖಲಿಸಿ 500 ರೂ. ದಂಡ ವಿಧಿಸಿದೆ.

ಮೆಟ್ರೋದಲ್ಲಿ ಗೋಬಿ ತಿಂದವನಿಗೆ ಫೈನ್: ಮತ್ತೊಂದು ಪ್ರಕರಣದಲ್ಲಿ ನಮ್ಮ ಮೆಟ್ರೋದಲ್ಲಿ ಗೋಬಿ ತಿಂದ ಪ್ರಯಾಣಿಕನಿಗೆ ಬಿಎಂಆರ್‍ಸಿಎಲ್ 500 ರೂಪಾಯಿ ದಂಡ ವಿಧಿಸಿದೆ. ಮೆಟ್ರೋದಲ್ಲಿ ನಿಯಮ ಪಾಲನೆ ಮಾಡುವಂತೆ ಸೂಚಿಸಿ ಕಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್‌ ಹುಚ್ಚಾಟ – ಮೂರ್ಛೆ ಬಂದವನಂತೆ ಪ್ರ್ಯಾಂಕ್‌ ಮಾಡಿ ಪ್ರಯಾಣಿಕರಿಗೆ ಶಾಕ್‌


ಒಟ್ಟಾರೆ ದಿನನಿತ್ಯ ಲಕ್ಷಾಂತರ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರೆ. ಇವರೆಲ್ಲರೂ ಮೆಟ್ರೋ ಪ್ರಯಾಣದ ನಿಯಮಗಳು ಏನು? ಅನ್ನೋದನ್ನ ಅರಿತರೆ ಒಳ್ಳೆಯದು. ಇಲ್ಲದೇ ಇದ್ದರೆ ರೂಲ್ಸ್ ಬ್ರೇಕ್ ಮಾಡಿದಾಗ ದಂಡ ಬೀಳೋದು ಗ್ಯಾರಂಟಿಯಾಗಿದೆ.

Web Stories

Share This Article