ನವದೆಹಲಿ: ಮೆಸೇಜಿಂಗ್ ಪ್ಲಾಟ್‍ಫಾರ್ಮ್ ವಾಟ್ಸಪ್ (WhatsApp) ಆಗಸ್ಟ್‌ನಲ್ಲಿ ಭಾರತದ (India) 74.2 ಲಕ್ಷ ಖಾತೆಗಳನ್ನು ನಿಷೇಧಿಸಿದೆ. 2021ರ ಹೊಸ ಐಟಿ ನಿಯಮಗಳಿಗೆ (IT Rules) ಅನುಸಾರವಾಗಿ ವಾಟ್ಸಪ್ ಈ ಖಾತೆಗಳನ್ನು ನಿಷೇಧಿಸಿದೆ.
ಭಾರತದಲ್ಲಿ ಈಗ ಒಟ್ಟಾರೆ ನಿಷೇಧಿತ ವಾಟ್ಸಪ್ ಖಾತೆಗಳ ಸಂಖ್ಯೆ 3,506,905 ಆಗಿದೆ. ಇದರಲ್ಲಿ 3.1 ಲಕ್ಷ ಖಾತೆಗಳನ್ನು ಪೂರ್ವಭಾವಿಯಾಗಿ ನಿಬರ್ಂಧಿಸಲಾಗಿದೆ. ಅಹಿತಕರ ಸಂದೇಶ ತಡೆಗಟ್ಟುವಲ್ಲಿ ಮತ್ತು ಎದುರಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಸುರಕ್ಷತಾ ವೈಶಿಷ್ಟ್ಯತೆಗಳು ಮತ್ತು ನಿಯಂತ್ರಣಗಳ ಜೊತೆಗೆ ಈ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡಲು ಇಂಜಿನಿಯರ್‌ಗಳು, ಡೇಟಾ ವಿಜ್ಞಾನಿಗಳು, ವಿಶ್ಲೇಷಕರು, ಸಂಶೋಧಕರು ಮತ್ತು ಕಾನೂನು ತಜ್ಞರನ್ನು ನೆಮಿಸಿಕೊಳ್ಳುವುದಾಗಿ ವಾಟ್ಸಪ್ ತಿಳಿಸಿದೆ.
`ಅಕೌಂಟ್ಸ್ ಆಕ್ಷನ್ಡ್’ ವರದಿಯ ಆಧಾರದ ಮೇಲೆ ಕಂಪನಿಯು ಈ ನಿರ್ಧಾರ ತೆಗೆದುಕೊಂಡಿದೆ. ಇದರ ಅಡಿಯಲ್ಲಿ ಖಾತೆಯನ್ನು ನಿಷೇಧಿಸುವುದು ಹಾಗೂ ಹಿಂದೆ ನಿಷೇಧಿಸಲಾದ ಖಾತೆಯನ್ನು ಮರುಸ್ಥಾಪಿಸಲಾಗುವುದು. ಅಲ್ಲದೆ ಆನ್‍ಲೈನ್ ವಿವಾದ ಪರಿಹಾರಕ್ಕೆ ತೊಂದರೆಗೊಳಗಾದ ಬಳಕೆದಾರರು ಹೊಸ ಪೋರ್ಟಲ್ ಮೂಲಕ ತಮ್ಮ ಮನವಿ ಅಥವಾ ದೂರನ್ನು ಸಲ್ಲಿಸಬಹುದು ಎಂದು ವಾಟ್ಸಪ್ ಪ್ರಕಟಣೆಯಲ್ಲಿ ತಿಳಿಸಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]