ಸಿದ್ದರಾಮಯ್ಯ, ಡಿಕೆಶಿಯವರೇ ತಮಿಳುನಾಡಿಗೆ ಹೋಗಿ: ಸಿ.ಟಿ ರವಿ ಆಗ್ರಹ

Public TV
1 Min Read
CT Ravi

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ತಮಿಳುನಾಡಿಗೆ ಹೋಗಿ ಎಂದು ಮಾಜಿ ಸಚಿವ ಸಿ.ಟಿ ರವಿ ಆಗ್ರಹಿಸಿದ್ದಾರೆ.

ಕಾವೇರಿ ನದಿ (Cauvery Water) ನೀರು ವಿವಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರೇ ಸ್ಟಾಲಿನ್‍ಗೂ ನಿಮಗೂ ಸಂಬಂಧ ಚೆನ್ನಾಗಿದೆ. ನೀವು, ಡಿಕೆ ಶಿವಕುಮಾರ್ (D.K Shivakumar) ಇಬ್ಬರೂ ತಮಿಳುನಾಡಿಗೆ ಹೋಗಿ. ಅಲ್ಲಿ ಸ್ಟಾಲಿನ್ ಭೇಟಿ ಮಾಡಿ ರಾಜ್ಯದ ಜನರ ಕಷ್ಟ ವಿವರಿಸಿ. ನೀವು ಕುರುವೈ ಬೆಳೆಗೆ ನೀರು ಕೇಳ್ತಿದ್ದೀರಿ, ಇಲ್ಲಿ ನಮಗೆ ಕುಡಿಯೋಯಲು ನೀರಿಲ್ಲ. ಇದರಿಂದ ನಿಮಗೆ ತಾನೇ ರಾಜಕೀಯ ಲಾಭ ಆಗೋದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಭೇಟಿಗೆ ಬರುವವರು ಹಾರ, ಪೇಟ ತರಬೇಡಿ, ನೋಟ್ ಬುಕ್ಸ್ ತನ್ನಿ: ಸಚಿವರ ಮನವಿ

ಯಾಕೆ ನೀವು ಈ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಬಾರದು. ನೀವು ನಮ್ಮನ್ನು ರಾಜಕಾರಣ ಮಾಡುತ್ತಿದ್ದೀರಿ ಅನ್ನೋದು ಕೂಡ ತಪ್ಪುತ್ತೆ. ನಿಮಗೂ ಅವರಿಗೂ ಸಂಬಂಧ ಹೇಗಿದೆ ಅಂತ ನನಗೆ ಗೊತ್ತು. ಈ ರೀತಿ ನೀವು, ಡಿಕೆಶಿ ಮಾಡಿ ಪುಣ್ಯ ಕಟ್ಟಿಕೊಳ್ಳಿ. ನೀವು ಅವರ ಜೊತೆ ಮಾತಾಡಿದ್ರೆ ಖಂಡಿತ, ತಮಿಳುನಾಡಿನವರು ನಿಮಗೆ ಏನೂ ಡಿಮ್ಯಾಂಡ್ ಮಾಡಲ್ಲ ಎಂದು ಸಿಟಿ ರವಿ (CT Ravi) ಟಾಂಗ್ ಕೊಟ್ಟರು.

Web Stories

Share This Article