ನವದೆಹಲಿ: ಕಾಂಗ್ರೆಸ್ (Congress), ಜೆಡಿಎಸ್‍ನಲ್ಲಿದ್ದ (JDS) ಹಾಲಿ ಸಚಿವರು ಶಾಸಕನನ್ನು ಸೇರಿಸಿಕೊಂಡ ಬಳಿಕವೂ ನಾವು ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಿಲ್ಲ. ನೀವು ಬಿಬಿಎಂಪಿ (BBMP) ಮಾಜಿಗಳನ್ನು ಸೇರಿಸಿಕೊಂಡು ಅಧಿಕಾರಕ್ಕೆ ಬರ್ತಿರಾ? ಈ ಸತ್ಯದ ಅರಿವು ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಇರಬೇಕು ಎಂದು ಬಿಜೆಪಿ ಮಾಜಿ ಶಾಸಕ ಸಿ.ಟಿ ರವಿ (CT Ravi) ತಿರುಗೇಟು ನೀಡಿದ್ದಾರೆ.
ಮಾಜಿ ಬಿಬಿಎಂಪಿ ನಾಯಕರ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಮಾತನಾಡಿದ ಅವರು, ಪಕ್ಷ ಬಿಡವುದು ಮತ್ತು ಸೇರ್ಪಡೆಗೊಳ್ಳುವುದು ಒಂದು ಪ್ರಕ್ರಿಯೆ. ಡಿ.ಕೆ ಶಿವಕುಮಾರ್ ನಾಯಕರು ಕಾಂಗ್ರೆಸ್ ಬಿಡುವುದನ್ನು ನೋಡಿದ್ದಾರೆ, ಸೇರುವುದು ನೋಡಿದ್ದಾರೆ ಇದರಲ್ಲಿ ವಿಶೇಷತೆ ಏನಿಲ್ಲ ಎಂದರು.
ನಾವು ಈಗ ಅಧಿಕಾರ ಕಳೆದುಕೊಂಡಿದ್ದೇವೆ. ಅಧಿಕಾರ ಕಳೆದುಕೊಂಡಾಗ ಕೆಲವರು ಪಕ್ಷದಿಂದ ಹೋಗಬಹುದು. ರಾಜಕಾರಣದಲ್ಲಿ ಮೇಲೆ ಕೆಳಗಾಗುವುದು ಸಾಮಾನ್ಯ. ನಾಯಕರು ಬಿಜೆಪಿ ಬಿಟ್ಟು ಹೋಗುತ್ತಿರುವುದರಿಂದ ನಮಗೆ ಪರಿಣಾಮ ಬೀರಲ್ಲ ಎಂದು ಹೇಳುವುದಿಲ್ಲ. ಆದರೆ ಇದಕ್ಕಿಂತ ಕಷ್ಟ ಕಾಲದಲ್ಲಿ ನಾವು ಪಕ್ಷ ಕಟ್ಟಿದ್ದೇವೆ. ಪಕ್ಷದಲ್ಲಿ ಜನರ ಸಂಖ್ಯೆ ಹೆಚ್ಚುವುದು ಎತ್ತಿನ ಗಾಡಿ ಮೇಲೆ ಗಾಡಿ ಮೇಲೆ ಹೆಚ್ಚು ಜನರು ಕೂತಂತೆ ಇದರಿಂದ ಗಾಡಿ ಮುಂದೆ ಹೋಗಲ್ಲ, ನಮಗೂ ಇದು ಅನ್ವಯಿಸುತ್ತೆ ಎಂದರು. ಇದನ್ನೂ ಓದಿ: ಬಿಡದೆ ಕಾಡುತ್ತಿರುವ ಅನಾರೋಗ್ಯ ಸಮಸ್ಯೆ- ಮತ್ತೆ ವಿದೇಶಕ್ಕೆ ಹಾರಿದ ಪ್ರಭಾಸ್
ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿ, ಪಕ್ಷದ ಹಿರಿಯ ನಾಯಕರು ಮೈತ್ರಿ ಬಗ್ಗೆ ನಮ್ಮಗೆ ಮಾಹಿತಿ ನೀಡಿಲ್ಲ ನಾನು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆಗಳನ್ನು ಗಮನಿಸಿದ್ದೇನೆ, ನನ್ನಂತ ಕಾರ್ಯಕರ್ತನಿಗೆ ಪಕ್ಷದ ನಿರ್ಧಾರ ಅನುಷ್ಠಾನ ಮಾಡುತ್ತೇವೆ ನಮ್ಮ ಗಮನ ಆ ಕಡೆ ಮಾತ್ರ, ಪಕ್ಷದ ನಾಯಕರು ಸಾಧಕ ಬಾಧಕ ಕೇಳಿದರೆ ಅವರಿಗೆ ನಮ್ಮ ಅನುಭವ ತಲುಪಿಸುತ್ತೇವೆ ಎಂದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]